ಇಸ್ರೇಲ್ ದಾಳಿಯಿಂದ ಜೀವ ಉಳಿಸಿಕೊಳ್ಳಲು ಓಡೋಡಿ ಹೋಗುತ್ತಿರುವ ಪ್ರಜೆಗಳು: ಇಲ್ಲಿದೆ ಕರುಣಾಜನಕ ಕಥೆ...

ಇಸ್ರೇಲ್ & ಹಮಾಸ್ ನಡುವೆ ನಡೆಯುತ್ತಿರುವ ಭೀಕರ ಕಾಳಗ ಎಲ್ಲಾ ಕಡೆಯೂ ಬೆಂಕಿಯ ಕೆನ್ನಾಲಿಗೆ ಹಬ್ಬುವಂತೆ ಮಾಡಿದೆ. ಅದರಲ್ಲೂ ಕಳೆದ 9 ತಿಂಗಳಿಂದ ಕೂಡ ಇಡೀ ಗಾಜಾದ ಪ್ರದೇಶ ಧಗಧಗ ಹೊತ್ತಿ ಉರಿಯುತ್ತಿದೆ. ಹೀಗಿದ್ದಾಗಲೇ ಗಾಜಾ ದಕ್ಷಿಣ ಭಾಗದಲ್ಲಿ ಇಸ್ರೇಲ್ ಸೇನೆ ಭೀಕರ ದಾಳಿ ನಡೆಸುತ್ತಿದ್ದು, ಇದರ ಪರಿಣಾಮ ಜೀವ ಉಳಿಸಿಕೊಳ್ಳಲು ಅಲ್ಲಿನ ಜನ ಓಡೋಡಿ ಹೋಗುತ್ತಿದ್ದಾರೆ. ಗುರುತು & ಪರಿಚಯ ಇಲ್ಲದ ಜಾಗಕ್ಕೆ ಇವರೆಲ್ಲಾ ಓಡಿ ಹೋಗಿ ಬದುಕುವ ಅನಿವಾರ್ಯತೆ ಸೃಷ್ಟಿಯಾಗಿದೆ.

2023ರ ಅಕ್ಟೋಬರ್ ತಿಂಗಳಲ್ಲಿ ಹಾಮಸ್ ವಿರುದ್ಧ ಯುದ್ಧ ಸಾರಿದ್ದ ಇಸ್ರೇಲ್ ಸೇನೆ ಭಾರಿ ದೊಡ್ಡ ದಾಳಿ ನಡೆಸಿತ್ತು. ಇದರ ಪರಿಣಾಮ ಗಾಜಾ ಪಟ್ಟಿ ಮೇಲೆ ರಣಭೀಕರ ದಾಳಿಯನ್ನ ಮಾಡಿದ್ದರು ಇಸ್ರೇಲ್ ಸೈನಿಕರು. ಹೀಗೆ ಗಾಜಾ ಪಟ್ಟಿ ಪ್ರದೇಶದ ಮೇಲೆ ದಾಳಿ ನಡೆಸಿರುವ ಇಸ್ರೇಲ್ ಸೇನೆ ಅಲ್ಲಿನ ಬಹುತೇಕ ಪ್ರದೇಶವನ್ನ ಪುಡಿ ಪುಡಿ ಮಾಡಿದೆ. ಹಾಗೇ ಕಟ್ಟಡಗಳನ್ನು ನಾಶ ಮಾಡಿ ಹಾಕಿದೆ. ಹೀಗಿದ್ದರೂ ಯುದ್ಧ ನಿಲ್ಲಿಸಲು ಇಸ್ರೇಲ್ ಸಿದ್ಧವಿಲ್ಲ. ಈ ಸ್ಥಿತಿಯಲ್ಲಿ ಗಾಜಾ ಪಟ್ಟಿ ದಕ್ಷಿಣ ಭಾಗದ ಜನರು ತಮ್ಮ ಜೀವ ಉಳಿಸಿಕೊಳ್ಳಲು ಏನು ಮಾಡುತ್ತಿದ್ದಾರೆ ಗೊತ್ತಾ? ಮುಂದೆ ಓದಿ.

Gaza Strip Civilians Are Escaping From South Part To Be Safe From Israel Attack

ಕ್ರೂರವಾಗಿ ದಾಳಿ ನಡೆಸಿದ ಇಸ್ರೇಲ್?

ಇಸ್ರೇಲ್ ದಾಳಿ ಎಷ್ಟು ಕ್ರೂರವಾಗಿದೆ ಎಂದರೆ ಆಸ್ಪತ್ರೆ, ನಿರಾಶ್ರಿತರ ಶಿಬಿರ ನೋಡದೆ ಹೀಗೆ ಇಸ್ರೇಲ್ ಸೈನಿಕರು ನಿರ್ದಯ ದಾಳಿ ಮಾಡುತ್ತಿದ್ದಾರೆ ಎಂಬ ಗಂಭೀರವಾದ ಆರೋಪ ಇದೆ. ದಕ್ಷಿಣ ಗಾಜಾ ಪಟ್ಟಿಯ ವಿವಿಧ ಪ್ರದೇಶಗಳನ್ನ ಗುರಿಯಾಗಿಸಿ ಇಸ್ರೇಲ್ ಬಾಂಬ್‌ ಮಳೆಗರೆದಿದ್ದು, ಸಾವಿರಾರು ಪ್ಯಾಲೆಸ್ತೀನ್ ಪ್ರಜೆಗಳು ತಮ್ಮ ಮನೆ & ಕಟ್ಟಡ ಬಿಟ್ಟು ಓಡಿ ಹೋಗುತ್ತಿದ್ದಾರೆ. ಚಿಕ್ಕ ಚಿಕ್ಕ ಮಕ್ಕಳನ್ನು ಕರೆದುಕೊಂಡು ಹೋಗಲು ಪರದಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದರು ಕೂಡ ಇಸ್ರೇಲ್ ಸೈನಿಕರು ಮಾತ್ರ ಭೀಕರ ಅಟ್ಯಾಕ್ ನಡೆಸಲು ಸಜ್ಜಾಗಿರುವ ಆರೋಪ ಕೇಳಿಬಂದಿದೆ.

ಇಸ್ರೇಲ್ ಸೇನೆಯಿಂದ ಬಲವಂತದ ಕ್ರಮ?

ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಇಸ್ರೇಲ್ ಸೇನೆ ಮತ್ತಷ್ಟು ಭೀಕರ ದಾಳಿಗೆ ಸಜ್ಜಾಗಿರುವಂತೆ ಕಾಣುತ್ತಿದೆ. ಹೀಗಾಗಿಯೇ ತಕ್ಷಣ ಹಳ್ಳಿಗಳನ್ನು ಬಿಟ್ಟು ಹೋಗಿ ಎಂದು ದಕ್ಷಿಣ ಗಾಜಾದಲ್ಲಿ ಇರುವ ಜನರಿಗೆ ಆದೇಶ ನೀಡಿದೆ ಇಸ್ರೇಲ್ ಸೇನೆ. ಆದರೆ ಮಕ್ಕಳು & ವೃದ್ಧರು ಇರುವವರಿಗೆ ಈ ಆದೇಶ ದೊಡ್ಡ ಸಮಸ್ಯೆ ತಂದೊಡ್ಡಿದೆ. ಪರಿಸ್ಥಿತಿ ಕೈಮೀರಿದ ಸಮಯದಲ್ಲೂ ಅದನ್ನ ಅರ್ಥ ಮಾಡಿಕೊಳ್ಳದ ಇಸ್ರೇಲ್ ಸೈನಿಕರು ಬಲವಂತದ ಕ್ರಮ ಕೈಗೊಂಡು, ಒತ್ತಾಯದಿಂದ ಗಾಜಾ ಜನರನ್ನು ಓಡಿಸುತ್ತಿದ್ದಾರೆ ಎಂಬ ಆರೋಪ ತಲ್ಲಣ ಸೃಷ್ಟಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+