Gaza War: ಗಾಜಾ ನೆಲದಲ್ಲಿ ಸಾವಿನ ಸರಮಾಲೆ- 25 ಜನರ ಪ್ರಾಣಪಕ್ಷಿ ಹಾರಿ ಹೋಯ್ತು...

ಇಸ್ರೇಲ್ ಶತ್ರುಗಳ ವಿರುದ್ಧ ಹೋರಾಡುವ ನೆಪದಲ್ಲಿ ಅಮಾಯಕರ ಪ್ರಾಣ ತೆಗೆದು, ಹಿಂಸೆ ಮಾಡುತ್ತಿದೆ ಎಂಬ ಆರೋಪ ಇದೀಗ ಮಧ್ಯಪ್ರಾಚ್ಯ ಭಾಗದಲ್ಲಿ ಭುಗಿಲೆದ್ದಿದೆ. ಗಾಜಾ ಪಟ್ಟಿ ಪ್ರದೇಶ ಇಸ್ರೇಲ್ & ಹಮಾಸ್ ಗಲಾಟೆಯಲ್ಲಿ ನಲುಗಿ ಹೋಗಿದೆ. ನಿರಾಶ್ರಿತರು ಇರುವ ಕಡೆ ಬೇಕು ಅಂತಲೇ ಇಸ್ರೇಲ್ ಸೇನೆ ವೈಮಾನಿಕ ದಾಳಿ ನಡೆಸಿ ಬಾಂಬ್‌ಗಳ ಸುರಿಮಳೆ ಸುರಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಇದೀಗ ಅದೇ ರೀತಿ ಪರಿಹಾರ ಕಾರ್ಯಾಚರಣೆ ನಡೆಸುವ ಸಿಬ್ಬಂದಿ, 25 ಜನರ ಸಾವಿನ ಸುದ್ದಿ ಕನ್ಫರ್ಮ್ ಮಾಡಿದ್ದಾರೆ.

ಹಮಾಸ್ ವಿರುದ್ಧ ಯುದ್ಧ ಆರಂಭ ಮಾಡಿದ್ದ ಇಸ್ರೇಲ್ ಇದೀಗ ಸಂಪೂರ್ಣ ಗಾಜಾ ಪಟ್ಟಿ ನಮ್ಮ ವಶಕ್ಕೆ ಬೇಕು ಅಂತಾ ಹಠ ಹಿಡಿದು ಕೂತಿದೆ. ಇನ್ನೊಂದು ಕಡೆ ಡೊನಾಲ್ಡ್ ಟ್ರಂಪ್ ಕೂಡ ಇಸ್ರೇಲ್‌ನ ಈ ಆಸೆಗೆ ಬೆನ್ನೆಲುಬಾಗಿ ನಿಂತಿದ್ದು, ಮಧ್ಯಪ್ರಾಚ್ಯ ನರಕವಾಗಿ ಬದಲಾಗಿದೆ. ಜನರು ಚಲ್ಲಾಪಿಲ್ಲಿ ಆಗಿ ಓಡಿ ಹೋಗಿದ್ದಾರೆ. ಎಲ್ಲಿ ನೋಡಿದರೂ ಬರೀ ಕುಸಿದು ಬಿದ್ದಿರುವ ಕಟ್ಟಡ ಹಾಗೂ ಕಟ್ಟಡಗಳ ಅವಶೇಷದ ಕೆಳಗೆ ಶವಗಳ ರಾಶಿಯೇ ಕಾಣುತ್ತಿದೆ. ಹೀಗಿದ್ದಾಗಲೇ ಮತ್ತೆ ಇಸ್ರೇಲ್ ಭೀಕರ ದಾಳಿ ನಡೆಸಿ, ನಿರಾಶ್ರಿತರನ್ನು ಕೊಂದು ಹಾಕಿರುವ ಆರೋಪ ಭಾರಿ ಸಂಚಲನ ಸೃಷ್ಟಿ ಮಾಡಿದೆ.

Gaza Rescuers Confirm 25 Fatalities from Israeli Strikes on Displaced People

ವಿಶ್ವಸಂಸ್ಥೆ ಮಾತಿಗೂ ಸೈಲೆಂಟ್ ಆಗಲ್ವಾ?

ಇಸ್ರೇಲ್ ಯುದ್ಧ ನಿಲ್ಲಿಸಬೇಕು ಎಂಬ ಒತ್ತಡವನ್ನು ವಿಶ್ವಸಂಸ್ಥೆ ಹೇರುತ್ತಲೇ ಬಂದಿದೆ, ಹೀಗೆ ಒತ್ತಡ ಹಾಕುತ್ತಿದ್ದರೂ ಯುದ್ಧ ಮಾತ್ರ ನಿಲ್ಲುತ್ತಿಲ್ಲ. ಬದಲಾಗಿ ಯುದ್ಧದ ತಿಕ್ಕಾಟ ಇನ್ನಷ್ಟು ಹೆಚ್ಚಾಗಿದ್ದು, ಗಾಜಾ ಪಟ್ಟಿಯಲ್ಲಿ ಈಗಾಗಲೇ ಸ್ಮಶಾನ ಸೃಷ್ಟಿ ಮಾಡಿದೆ ಇಸ್ರೇಲ್. ಇಂತಹ ಪರಿಸ್ಥಿತಿಯಲ್ಲಿ ಜನರು ಗಾಜಾ ಪಟ್ಟಿಯನ್ನು ಬಿಟ್ಟು ಹೊರಗೆ ಹೋಗದಂತೆ ಲಾಕ್ ಮಾಡಿದ ಆರೋಪ ಕೂಡ ಇದ್ದು, ಈಜಿಪ್ಟ್ ಕೂಡ ಗಾಜಾ ನಿವಾಸಿಗಳನ್ನು ಒಳಗಡೆ ಬಿಟ್ಟುಕೊಳ್ಳಲು ಸಿದ್ಧವಿಲ್ಲ. ಇಂತಹ ಸಮಯದಲ್ಲಿ ಪರಿಸ್ಥಿತಿ ಇನ್ನಷ್ಟು ಜಟಿಲವಾಗಿದೆ.

ಲೆಬನಾನ್ & ಸಿರಿಯಾ ಮೇಲೂ ಹಿಡಿತ?

ಇಸ್ರೇಲ್ ಇದೀಗ ಗಾಜಾ ಪಟ್ಟಿ ಮೇಲೆ ಮಾತ್ರ ಯುದ್ಧ ನಡೆಸುತ್ತಿಲ್ಲ, ಮತ್ತೊಂದು ಪ್ಲಾನ್ ಕೂಡ ಇದೆ. ಅದರ ಪ್ರಕಾರ ಲೆಬನಾನ್ ಹಾಗೂ ಸಿರಿಯಾ ಕೂಡ ಲಾಕ್ ಆಗಿ ನರಳಾಡುತ್ತಿವೆ. ಗಾಜಾ ಪಟ್ಟಿ ಸೇರಿದಂತೆ ಲೆಬನಾನ್ ಹಾಗೂ ಸಿರಿಯಾ ಜೊತೆಗೂ ಕಿರಿಕ್ ಮಾಡಿಕೊಂಡಿರುವ ಇಸ್ರೇಲ್ ಇದೀಗ ಮಹತ್ವದ ನಿರ್ಧಾರ ಪ್ರಕಟಿಸಿದೆ.

ಗಾಜಾಪಟ್ಟಿ ಮತ್ತು ಲೆಬನಾನ್ & ಸಿರಿಯಾದ ಜೊತೆಗೆ ಇನ್ನೂ ಕಾದಾಟ ನಿಂತಿಲ್ಲ ಎಂಬುದನ್ನು ಪರೋಕ್ಷವಾಗಿ ತಿಳಿಸಿದೆ ಇಸ್ರೇಲ್. ಈ ಬಗ್ಗೆ ಇಸ್ರೇಲ್‌ ರಕ್ಷಣಾ ಸಚಿವ ಇಸ್ರೇಲ್ ಕ್ಯಾಟ್ಸ್ ಹೇಳಿಕೆ ನೀಡಿ ತಲ್ಲಣ ಎಬ್ಬಿಸಿದ್ದಾರೆ. ಭದ್ರತಾ ವಲಯಗಳು ಅಂತ ಕರೆಯಲಾಗುವ ಪ್ರದೇಶಗಳಲ್ಲಿ ನಮ್ಮ ಸೇನೆ ಅನಿರ್ದಿಷ್ಟವಧಿವರೆಗೆ ಇರುತ್ತೆ ಎಂದಿದ್ದಾರೆ ಇಸ್ರೇಲ್‌ ರಕ್ಷಣಾ ಸಚಿವ ಕ್ಯಾಟ್ಸ್. ಈ ಮೂಲಕ ಇನ್ನಷ್ಟು ಟೆನ್ಷನ್ ಶುರುವಾಗಿದ್ದು, ಗಾಜಾ ರೀತಿಯಲ್ಲೇ ಲೆಬನಾನ್ & ಸಿರಿಯಾ ಮೇಲೆಯೂ ದಾಳಿ ಗ್ಯಾರಂಟಿ ಆಯ್ತಾ? ಎಂಬ ಡೌಟ್ ಮೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+