ಆಸ್ಪತ್ರೆ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದೆಯಾ ಇಸ್ರೇಲ್ ಸೇನೆ?
ಇಸ್ರೇಲ್ & ಹಮಾಸ್ ಉಗ್ರರ ನಡುವಿನ ಜಗಳ ಜೋರಾಗಿದೆ. ಗಾಜಾಪಟ್ಟಿಯ ಅತಿ ದೊಡ್ಡ ಆಸ್ಪತ್ರೆ ಮೇಲೆ ಈಗ ಇಸ್ರೇಲ್ ಸೇನೆಯಿಂದ ಭೀಕರ ದಾಳಿ ನಡೆದಿದೆ ಎನ್ನಲಾಗಿದೆ. ಯುದ್ಧವು ಶುರುವಾಗಿ 5 ತಿಂಗಳು ಕಳೆದರೂ ಶಾಂತಿ ಮರು ಸ್ಥಾಪನೆ ಆಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈಗ ಮತ್ತೆ ಇಸ್ರೇಲ್ ಸೇನೆ ಗಾಜಾಪಟ್ಟಿ ಮೇಲೆ, ಭೀಕರ ದಾಳಿ ಮುಂದುವರಿಸಿರುವ ಆರೋಪ ಕೂಡ ಕೇಳಿಬಂದಿದೆ.
ಇಂದು ಬೆಳ್ಳಂಬೆಳಗ್ಗೆ ಇಸ್ರೇಲ್ ಸೇನೆ ನಡೆಸಿರುವ ದಾಳಿಯಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿ ಆಗಿದೆ. ಹಮಾಸ್ ಬಂಡುಕೋರರ ಅಡಗುದಾಣದ ಮೇಲೆ ದಾಳಿ ಮಾಡಿರುವುದಾಗಿ ಇದೀಗ ಇಸ್ರೇಲ್ ಹೇಳುತ್ತಿದೆ. ಇಸ್ರೇಲ್ ಸೇನೆ ಯುದ್ಧ ಟ್ಯಾಂಕರ್, ಫಿರಂಗಿಗಳ ಜೊತೆಗೆ ಆಸ್ಪತ್ರೆಯನ್ನು ಸುತ್ತುವರಿದು ಗುಂಡಿನ ದಾಳಿಯನ್ನ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ. ಸೇನಾ ಪಡೆಗಳು ಈ ಕಟ್ಟಡಗಳ ಮೇಲೆ ದಾಳಿ ನಡೆಸಿದ ಪರಿಣಾಮ ಜನರು ಭಯಗೊಂಡಿದ್ದಾರೆ ಎಂಬ ಆರೋಪ ಈಗ ಕೇಳಿಬಂದಿದೆ.

31 ಸಾವಿರ ಜನರ ಸಾವು
ಇಸ್ರೇಲ್ ಸೇನೆ & ಹಮಾಸ್ ಬಂಡುಕೋರರ ನಡುವೆ ಶುರುವಾಗಿದ್ದ ಯುದ್ಧವು ಈಗಾಗಲೇ 31 ಸಾವಿರ ಜನರನ್ನು ಬಲಿ ಪಡೆದಿದೆ ಎನ್ನಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೂಡ ಇಸ್ರೇಲ್‌ನ ಸೇನೆ ತನ್ನ ದಾಳಿ ಮುಂದುವರಿಸಿದೆ, ಆಸ್ಪತ್ರೆಗಳನ್ನೇ ಟಾರ್ಗೆಟ್ ಮಾಡುತ್ತಿದೆ ಎಂಬ ಗಂಭೀರ ಆರೋಪ ಇದೀಗ ಗಾಜಾ ಅಧಿಕಾರಿಗಳಿಂದ ಕೇಳಿಬರುತ್ತಿದೆ. ಮತ್ತೊಂದು ಕಡೆ ಈ ಆರೋಪ & ಮಾತುಗಳಿಗೆ ಇಸ್ರೇಲ್ ರಿಯಾಕ್ಷನ್ ಕೊಡುತ್ತಿಲ್ಲ. ಹೀಗಾಗಿ ಗಾಜಾಪಟ್ಟಿ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ.
ಈಗ ಇಲ್ಲಿ ರೋಗಿಗಳು, ವೈದ್ಯಕೀಯ ಸಿಬ್ಬಂದಿ & ರಕ್ಷಣೆ ಕೋರಿ ಆಶ್ರಯ ಪಡೆದ 30 ಸಾವಿರಕ್ಕೂ ಹೆಚ್ಚು ಜನ ಇರುವ ಆಸ್ಪತ್ರೆ ಮೇಲೆ ಇಸ್ರೇಲ್ ಸೇನೆ ದಾಳಿ ಮಾಡಿದೆ ಎಂಬ ಆರೋಪವನ್ನು ಮಾಡಲಾಗುತ್ತಿದೆ. ಗಾಜಾದ ಆರೋಗ್ಯ ಸಚಿವಾಲಯ ಈಗ ಇಸ್ರೇಲ್ ಸೇನೆ ವಿರುದ್ಧ ಗಂಭೀರ ಆರೋಪ ಮಾಡುತ್ತಿದೆ. ಆದ್ರೆ ಆಸ್ಪತ್ರೆ ಕೆಳಭಾಗದಲ್ಲಿ ಹಮಾಸ್ ಬಂಡುಕೋರರು ಇದ್ದಾರೆಂಬ ಆರೋಪವನ್ನು ಇಸ್ರೇಲ್ ಮಾಡುತ್ತಿದೆ. ಹೀಗಾಗಿ ಪರಿಸ್ಥಿತಿ ಮತ್ತಷ್ಟು ಸೂಕ್ಷ್ಮವಾಗಿದ್ದು ಇಲ್ಲಿ ಸಾಮಾನ್ಯ ಜನರ ಬದುಕು ಮತ್ತಷ್ಟು ದುಸ್ತರವಾಗುತ್ತಿದೆ.
ಯುದ್ಧ ಯಾವಾಗ ನಿಲ್ಲುತ್ತೆ?
ಇಸ್ರೇಲ್ & ಹಮಾಸ್ ಉಗ್ರರ ನಡುವಿನ ಯುದ್ಧ ಇದೇ ರೀತಿ ಮುಂದುವರಿದರೆ ಈ ಜಗತ್ತಿಗೇ ಸಮಸ್ಯೆ ಎಂಬುದು ಬಹುತೇಕ ದೇಶಗಳಿಗೆ ಗೊತ್ತಿದೆ. ಹೀಗಾಗಿಯೇ ಯುದ್ಧ ನಿಲ್ಲಿಸಲು ಈಗ ಬೇಕಾಗಿರುವ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಇಸ್ರೇಲ್ & ಹಮಾಸ್‌ನ ನಡುವೆ ನಡೆಯುತ್ತಿರುವ ಯುದ್ಧ ನಿಲ್ಲುತ್ತಿಲ್ಲ. ಹೀಗಾಗಿ ಗಾಜಾಪಟ್ಟಿ ಪ್ರಜೆಗಳು ಕೂಡ ತಮ್ಮ ಜೀವನ ನಡೆಸಲು ಗೋಳಾಡುವ ಪರಿಸ್ಥಿತಿ ಬಂದಿದೆ.

ಹೀಗಿದ್ದಾಗ ಇನ್ನೊಂದು ಕಡೆ ಅನ್ನ, ನೀರು ಸೇರಿ ಮನುಷ್ಯ ಬದುಕಲು ಬೇಕಿರುವ ಸಾಮಾನ್ಯ ವಸ್ತುಗಳಿಗೂ ಇಲ್ಲಿನ ಜನರು ಪರದಾಡುತ್ತಿದ್ದಾರೆ. ವಿಶ್ವಸಂಸ್ಥೆ ಸೇರಿದಂತೆ ಹಲವು ದೇಶಗಳು ಗಾಜಾಪಟ್ಟಿ ಸಂತ್ರಸ್ತರ ನೆರವಿಗೆ ನಿಂತರೂ ಈಗಿನ ಪರಿಸ್ಥಿತಿ ಸರಿ ಹೋಗುತ್ತಿಲ್ಲ. ಇದು ಭಾರಿ ಆತಂಕ ಸೃಷ್ಟಿ ಮಾಡಿದ್ದು, ಮಕ್ಕಳ ಪರಿಸ್ಥಿತಿ ಇನ್ನಷ್ಟು ಕಷ್ಟಕರವಾಗಿದೆ.












Click it and Unblock the Notifications