ಗಡಿಯಲ್ಲಿನ ಭಾರತೀಯ ಸೈನಿಕರ ಪತ್ತೆಗೆ ಚೀನಾ ವಾಮಮಾರ್ಗ!
ನವದೆಹಲಿ, ಜೂನ್.17: ಭಾರತ-ಚೀನಾದ ಲಡಾಖ್ ಪೂರ್ವ ಭಾಗದಲ್ಲಿರುವ ಗಾಲ್ವಾನ್ ನದಿ ಕಣಿವೆಯ ಬಳಿಯಿರುವ ಭಾರತೀಯ ಯೋಧರನ್ನು ಪತ್ತೆ ಮಾಡುವುದಕ್ಕೆ ಚೀನಾ ಡ್ರೋನ್ ಕ್ಯಾಮರಾಗಳನ್ನು ಬಳಕೆ ಮಾಡುತ್ತಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
Recommended Video
ಕಳೆದ ಜೂನ್.15 ಮತ್ತು 16ರಂದು ನಡೆದ ಎರಡು ಸೇನೆಗಳ ಮುಖಾಮುಖಿ ಸಂಘರ್ಷದಲ್ಲಿ ಮೊದಲಿಗೆ ಭಾರತೀಯ ಸೇನಾಧಿಕಾರಿ ಸೇರಿ ಮೂವರು ಪ್ರಾಣ ಬಿಟ್ಟಿದ್ದರು. ತದನಂತರದಲ್ಲಿ ತಾಪಮಾನ ಮತ್ತು ಚೀನಿ ಯೋಧರು ನಡೆಸಿದ ಹಲ್ಲೆಯಿಂದ ಗಾಯಗೊಂಡಿದ್ದ 17 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಭಾರತದ 20 ಯೋಧರು ಹುತಾತ್ಮರಾದ ಬೆನ್ನಲ್ಲೇ ನಡೆದ ಪ್ರತಿದಾಳಿಯಲ್ಲಿ ಚೀನಾದ 35 ಸೈನಿಕರನ್ನು ಹತ್ಯೆಗಯ್ಯಲಾಗಿದೆ ಎಂದು ಯುಎಸ್ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಭಾರತ-ಚೀನಾ ಯೋಧರ ನಡುವಿನ ಸಂಘರ್ಷದಲ್ಲಿ ಒಂದೇ ಒಂದು ಗುಂಡು ಸಿಡಿದಿಲ್ಲ. ಪರಸ್ಪರ ಕಾದಾಟದಿಂದಲೇ ಈ ಪ್ರಮಾಣದ ಸಾವು-ನೋವು ಸಂಭವಿಸಿದ್ದು, ಮೃತಪಟ್ಟ ಮತ್ತು ಗಾಯಗೊಂಡ ಯೋಧರನ್ನು ಪತ್ತೆ ಮಾಡುವುದಕ್ಕೆ ಭಾರತೀಯ ಹೆಲಿಕಾಪ್ಟರ್ ಗಳು ಗಡಿಯಲ್ಲಿ ಹಾರಾಟ ನಡೆಸಿವೆ.

ನಾಪತ್ತೆಯಾದ ಭಾರತೀಯ ಯೋಧರ ಪತ್ತೆ ಕಾರ್ಯ:
ಭಾರತ-ಚೀನಾ ಯೋಧರ ಸಂಘರ್ಷದ ನಂತರದಲ್ಲಿ ನಾಪತ್ತೆಯಾಗಿರುವ ಭಾರತೀಯ ಸೇನಾ ಯೋಧರನ್ನು ಪತ್ತೆ ಮಾಡುವುದಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಚೀನಾದ ಹೆಲಿಕಾಪ್ಟರ್ ಗಳು ಕೂಡಾ ಗಡಿಯಲ್ಲಿ ಗಾಯಗೊಂಡಿರುವ ತಮ್ಮ ಸೈನಿಕರನ್ನು ಕರೆದೊಯ್ಯಲು ಕಾರ್ಯಾಚರಣೆಗೆ ಇಳಿದಿವೆ.
ಲಡಾಖ್ ಪೂರ್ವ ಭಾಗದ ಗಾಲ್ವಾನ್ ನದಿ ಕಣಿವೆಯ ಬಳಿ ಇರುವ ಭಾರತೀಯ ಸೇನಾ ಯೋಧರನ್ನು ಪತ್ತೆ ಮಾಡುವುದಕ್ಕೆ ಚೀನಾ ಸೇನೆಯು ಮಸಲತ್ತು ನಡೆಸುತ್ತಿದೆ. ಅದಕ್ಕಾಗಿ ಡ್ರೋನ್ ಕ್ಯಾಮರಾಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.












Click it and Unblock the Notifications