ಉಗ್ರ ಸಹೋದರರ ಬೇಟೆಗೆ 80 ಸಾವಿರ ಪೊಲೀಸರು
ಫ್ರಾನ್ಸ್, ಜ. 9: ಪ್ಯಾರಿಸ್‌ನ ಚಾರ್ಲಿ ಹೆಬ್ಡೊ ವ್ಯಂಗ್ಯಚಿತ್ರ ಪತ್ರಿಕೆ ಮೇಲೆ ದಾಳಿ ನಡೆಸಿ 10 ಪತ್ರಕರ್ತರು ಹಾಗೂ ಇಬ್ಬರು ಪೊಲೀಸರ ಹತ್ಯೆಗೈದ ಪಾತಕಿಗಳ ಬೇಟೆಗೆ ಫ್ರಾನ್ಸ್ ಸರ್ಕಾರ ಕಾರ್ಯಾಚರಣೆ ಮುಂದುವರಿಸಿದೆ. ಈ ಕುರಿತು 10 ಪ್ರಮುಖ ಬೆಳವಣಿಗೆಗಳನ್ನು ಇಲ್ಲಿ ನೀಡಲಾಗಿದೆ.
1) ಪ್ಯಾರಿಸ್‌ನಿಂದ 40 ಕಿ.ಮೀ. ದೂರದಲ್ಲಿರುವ ದಮ್ಮಾರ್ಟಿನ್-ಎನ್-ಗೋಲೆ ಪಟ್ಟಣದಲ್ಲಿ ಉಗ್ರರ ಬೇಟೆಗೆ ಪೊಲೀಸರು ಜಾಲ ಬೀಸಿದ್ದಾರೆ.
2) ಚಾರ್ಲಿ ಹೆಬ್ಡೊ ಮೇಲೆ ದಾಳಿ ನಡೆಸಿದ್ದ ಉಗ್ರರು ಸೂಪರ್ ಮಾರ್ಕೆಟ್‌ನಲ್ಲಿ ಅಡಗಿದ್ದಾರೆ. [ಚಾರ್ಲಿ ಹೆಬ್ಡೊ ಮೇಲೆ ದಾಳಿ : ಓರ್ವ ಉಗ್ರ ಶರಣು]
3) ಫ್ರಾನ್ಸ್ ಸರ್ಕಾರ ಗುರುತಿಸಿದ್ದ ಇಬ್ಬರು ಶಂಕಿತ ಸಹೋದರರು ಹಲವರನ್ನು ಬಂಧನದಲ್ಲಿಟ್ಟುಕೊಂಡಿದ್ದಾರೆ.
4) ಶಂಕಿತರ ವಶದಲ್ಲಿರುವವರನ್ನು ಬಿಡಿಸಲು ಪೊಲೀಸ್ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ.
5) ರಕ್ಷಣಾ ಕಾರ್ಯಾಚರಣೆಗಾಗಿ ದಮ್ಮಾರ್ಟಿನ್-ಎನ್-ಗೋಲೆಗೆ ಹೆಲಿಕಾಪ್ಟರ್ ಆಗಮನ. [ಉಗ್ರರ ಮಟ್ಟಹಾಕಲು ಭಾರತಕ್ಕೆ ಅಸಾಧ್ಯವೇ?]

6) ಈ ಪಟ್ಟಣದ ನಿವಾಸಿಗಳಿಗೆ ಮನೆಯೊಳಗೇ ಇರಲು ಪೊಲೀಸರ ಸೂಚನೆ. ವಿದ್ಯಾರ್ಥಿಗಳಿಗೆ ತರಗತಿಯೊಳಗೆ ಇರಲು ಆದೇಶ.
7) ಪಟ್ಟಣದಲ್ಲಿ 80 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ.
8) ನಾವು ಹುಡುಕುತ್ತಿದ್ದ ಉಗ್ರರು ಸಿಕ್ಕಿದ್ದಾರೆ ಎಂದ ಫ್ರಾನ್ಸ್ ಆಂತರಿಕ ಸಚಿವ ಬರ್ನಾರ್ಡ್ ಕೆಜೆನಾವ್. [ಕೋಸ್ಟ್ ಗಾರ್ಡ್ ಕಣ್ಣಿಗೆ ಪಾಕ್ ದೋಣಿ ಬಿದ್ದಿದ್ದು ಹೀಗೆ]
9) ಕೆಲವೇ ಗಂಟೆಗಳ ಮೊದಲು ಶಂಕಿತ ಸಹೋದರರಿಂದ ಪಿಯುಜಿಯೋ ಕಾರು ಅಪಹರಣ.
10) ಉಗ್ರರು ಜನರನ್ನು ಒತ್ತೆ ಇಟ್ಟುಕೊಂಡಿರುವ ಸ್ಥಳದ ಸಮೀಪ ಕಾರ್ಯಾಚರಣೆಗಾಗಿ ಬಂದಿಳಿದಿವೆ ವಿಮಾನಗಳು.












Click it and Unblock the Notifications