ವಿಶ್ವಶ್ರೇಷ್ಠ 50 ನಾಯಕರ ಪಟ್ಟಿ: ಒಬ್ಬರೇ ಇಂಡಿಯನ್, ಮೋದಿಗಿಲ್ಲ ಸ್ಥಾನ

Posted By:
Subscribe to Oneindia Kannada

ಪ್ರಸಿದ್ದ ಫಾರ್ಚುನ್ ಮ್ಯಾಗಜೀನ್ ವಿಶ್ವದ ಶ್ರೇಷ್ಠ ಐವತ್ತು ನಾಯಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಐವತ್ತು ಅತ್ಯುತ್ತಮ ನಾಯಕರ ಪಟ್ಟಿಯಲ್ಲಿ ಒಬ್ಬ ಭಾರತೀಯರು ಮಾತ್ರ ಸ್ಥಾನ ಪಡೆದಿದ್ದಾರೆ.

ಫಾರ್ಚುನ್ ಮ್ಯಾಗಜೀನ್ ತನ್ನ ಮೂರನೇ ವಾರ್ಷಿಕ ಆವೃತ್ತಿಯಲ್ಲಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಉದ್ಯಮ, ಸರಕಾರ, ಕಲಾ ಕ್ಷೇತ್ರದಲ್ಲಿ ಸಾಧನೆಗೈದಿರುವ ಐವತ್ತು ಶ್ರೇಷ್ಠ ಪುರುಷರು ಮತ್ತು ಮಹಿಳೆಯರಿದ್ದಾರೆ.

ದೈತ್ಯ ಆಲ್ಲೈನ್ ಶಾಪಿಂಗ್ ತಾಣ ಅಮೆಜಾನ್ ಸಂಸ್ಥೆಯ ಸಿಇಒ ಜೆಫ್ ಬೆಝೋಸ್ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ. ಅನಿವಾಸಿ ಭಾರತೀಯ ನಿಕ್ಕಿ ಹೇಲ್ ಮತ್ತು ರೇಷ್ಮಾ ಸೌಜಾನಿ ಪಟ್ಟಿಯಲ್ಲಿ ಕ್ರಮವಾಗಿ 17ನೇ ಮತ್ತು 20ನೇ ಸ್ಥಾನ ಪಡೆದಿದ್ದಾರೆ.

ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದರೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಐವತ್ತು ಜನರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿಲ್ಲ. ಫಾರ್ಚುನ್ ಮ್ಯಾಗಜೀನ್ ಬಿಡುಗಡೆ ಮಾಡಿದ ವಿಶ್ವದ ಶ್ರೇಷ್ಟ ಐವತ್ತು ನಾಯಕರ ಪಟ್ಟಿಯಲ್ಲಿ ಒಬ್ಬರೇ ಭಾರತೀಯರು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಮೊದಲ ಹತ್ತು ಜನ

ಮೊದಲ ಹತ್ತು ಜನ

1. ಜೆಫ್ ಬೆಝೋಸ್ - ಅಮೆಜಾನ್ ಸಿಇಒ
2. ಆಂಜೆಲಾ ಮರ್ಕೆಲ್ - ಜರ್ಮನಿ ಚಾನ್ಸೆಲರ್
3. ಆಂಗ್ ಸಾನ್ ಸೂಕಿ - ಮೈನಾಮರ್ ರಾಜಕೀಯ ನಾಯಕಿ
4. ಪೋಪ್ ಫ್ರಾನ್ಸಿಸ್ - ಕ್ಯಾಥೋಲಿಕ್ ಚರ್ಚ್
5. ಟಿಮ್ ಕುಕ್ - ಆಪಲ್ ಸಿಇಒ
6. ಜಾನ್ ಲೆಜೆಂಡ್ - ಶೋಮ್ ಮಿ ಕ್ಯಾಂಪೇನ್ ಕಲಾವಿದ
7. ಕ್ರಿಸ್ಟಿಯಿನಾ ಫಿಗರೆಸ್ - ವಿಶ್ವಸಂಸ್ಥೆ ಕಾರ್ಯದರ್ಶಿ
8. ಪಾಲ್ ರಿಯಾನ್ - ಅಮೆರಿಕಾ ಅಸೆಂಬ್ಲಿ ಸ್ಪೀಕರ್
9. ರುಥ್ ಗಿನ್ಸಬರ್ಗ್ - ಅಮೆರಿಕ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ
10. ಶೇಖ್ ಹಸೀನಾ - ಬಾಂಗ್ಲಾ ಪ್ರಧಾನಿ
(ಚಿತ್ರದಲ್ಲಿ ಅಮೆಜಾನ್ ಸಿಇಒ)

ಹನ್ನೊಂದರಿಂದ ಇಪ್ಪತ್ತು

ಹನ್ನೊಂದರಿಂದ ಇಪ್ಪತ್ತು

11. ನಿಕ್ ಸಾಬನ್ - ಅಲಬಾಮ ವಿವಿ ಫುಟ್ಬಾಲ್ ಕೋಚ್
12. ಹೌಟೆಂಗ್ ಪೋನಿಮಾ - ತೆನ್ಸೆಂಟ್ ಸಿಇಒ
13. ಸರ್ಗೀಯಾ ಮೋರೋ - ಬ್ರೆಜಿಲ್ ಫೆಡರಲ್ ಜಡ್ಜ್
14. ಬೋನೋ - U2, ಒನ್ ಸಹಸಂಸ್ಥಾಪಕ
15. ಸ್ಟೀಫನ್ ಕರ್ರಿ ಮತ್ತು ಸ್ಟೀವ್ ಕೆರ್ರ್ - ಗೋಲ್ಡನ್ ವಾರಿಯರ್ಸ್ ಕೋಚ್
16. ಬ್ರಿಯಾನ್ ಸ್ಟೀವನ್ಸನ್ - ಈಕ್ವಲ್ ಜಸ್ಟೀಸ್ ಸಂಸ್ಥಾಪಕ
17. ನಿಕ್ಕಿ ಹೇಲ್ - ಸೌತ್ ಕರೊಲಿನಾ ಗವರ್ನರ್
18. ಲಿನ್ ಮೆರಂಡಾ - ಹ್ಯಾಮಿಲ್ಟನ್ ಬರಹಗಾರ
19. ಮಾರ್ವಿನ್ ಇಲಿಸನ್ - ಜೆಸಿ ಪೆನ್ನಿ ಸಿಇಒ
20. ರೇಷ್ಮಾ ಸೌಜಾನಿ - ಗರ್ಲ್ಸ್ ವು ಕೋಡ್ ಸಂಸ್ಥಾಪಕಿ
(ಚಿತ್ರದಲ್ಲಿ ರೇಷ್ಮಾ ಸೌಜಾನಿ, ಚಿತ್ರಕೃಪೆ: Getty Images)

21 ರಿಂದ 30 - ಶ್ರೇಷ್ಠ ನಾಯಕರು

21 ರಿಂದ 30 - ಶ್ರೇಷ್ಠ ನಾಯಕರು

21. ಲ್ಯಾರಿ ಫಿಂಕ್ - ಬ್ಲ್ಯಾಕ್ ರಾಕ್ ಸಿಇಒ
22. ಸ್ಕಾಟ್ ಕೆಲ್ಲಿ ಮತ್ತು ಮಿಖಾಯಿಲ್ ಕೊರ್ನಿಕೊ - ಅಂತರಾಷ್ಟ್ರೀಯ ಬಾಹ್ಯಾಕ್ಷೇತ್ರ ಸದಸ್ಯರು
23.ಡೇವಿಡ್ ಮಿಲಿಬ್ಯಾಂಡ್ - ಅಂತರಾಷ್ಟ್ರೀಯ ಪರಿಹಾರ ಸಮಿತಿ, ಸಿಇಒ
24. ಅನ್ನಾ ಮರಿಯಾ ಚಾವೆಜ್ - ಅಮೆರಿಕ ಗರ್ಲ್ಸ್ ಸ್ಕೌಟ್, ಸಿಇಒ
25. ಕಾರ್ಲಾ ಹೇಡನ್ - ಲೈಬ್ರರಿ ಆಫ್ ಕಾಂಗ್ರೆಸ್ ಚುನಾಯಿತೆ
26. ಮೌರಿಜೋ ಮಾಕ್ರಿ - ಆರ್ಜೆಂಟೇನಾ ಅಧ್ಯಕ್ಷ
27. ಆಲಿಕಾ ಗಾರ್ಜಾ, ಪ್ಯಾಟ್ರಿಸ್ ಕಲ್ಲರ್ಸ್, ಓಪಲ್ ತೊಮೆಟಿ - ಬ್ಲ್ಯಾಕ್ ಲೀವ್ಸ್ ಮ್ಯಾಟರ್, ಸಹ ಸಂಸ್ಥಾಪಕರು
28. ಚಾಯ್ ಜಿಂಗ್ - ಚೀನಾ ಪತ್ರಕರ್ತೆ
29. ಮಾನ್ಸೆಫ್ ಸ್ಲೋವಿ - ಗ್ಲ್ಯಾಕ್ಸೋ ಸ್ಮಿತ್, ಅಧ್ಯಕ್ಷ
30. ಜಾನ್ ಓಲಿವರ್ - ಲಾಸ್ಟ್ ವೀಮ್ ಟುನೈಟ್, ನಿರ್ಮಾಪಕ ಮತ್ತು ನಿರೂಪಕ
(ಚಿತ್ರದಲ್ಲಿ : ಆರ್ಜೆಂಟೇನಾ ಅಧ್ಯಕ್ಷ, ಚಿತ್ರಕೃಪೆ : APF, Getty images)

31 ರಿಂದ 40 - ಶ್ರೇಷ್ಠ ನಾಯಕರು

31 ರಿಂದ 40 - ಶ್ರೇಷ್ಠ ನಾಯಕರು

31. ಮಾರ್ಕ್ ಎಡ್ವರ್ಡ್ಸ್ - ವರ್ಜಿನಿಯಾ ಟೆಕ್ ಪ್ರೊಫೆಸರ್
32. ಅರ್ಥೂರ್ ಬ್ರೂಕ್ಸ್ - ಅಮೆರಿಕನ್ ಎಂಟರ್ಪ್ರೈಸಸ್ ಅಧ್ಯಕ್ಷ
33. ರೋಸಿ ಬಟ್ಟಿ - ಲ್ಯೂಕ್ ಬ್ಯಾಟಿ ಫೌಂಡೇಶನ್ ಸಂಸ್ಥಾಪಕಿ
34. ಕ್ರಿಸ್ಟನ್ ಗ್ರೀಸ್ಟ್ ಮತ್ತು ಶೇ ಹೇವರ್ - ರೇಂಜರ್ಸ್ ಅಮೆರಿಕ ಆರ್ಮಿ
35. ಡೆನ್ನಿಸ್ ಮುಖ್ವೇಗ್ - ಪಾಂಜಿ ಆಸ್ಪತ್ರೆ ಸಂಸ್ಥಾಪಕ
36. ಕ್ರಿಸ್ಟಿಯನ್ ಲಗಾರ್ಡೆ - ಐಎಂಎಫ್, ಎಂಡಿ
37. ಮಾರ್ಕ್ ಬೆನ್ನಿಫ್ - ಸೇಲ್ಸ್ ಫೋರ್ಸ್, ಸಿಇಒ
38. ಗಿನಾ ರೇಮಂಡೋ - ರೋಡ್ ಐಲ್ಯಾಂಡ್, ಗವರ್ನರ್
39. ಅಮಿನಾ ಮೊಹಮ್ಮದ್, ನೈಜೀರಿಯಾ ಸಚಿವೆ
40. ಡೋಮಿನೋ ಲುಕಾನೋ, ಇಟೆಲಿಯ ನಗರವೊಂದರ ಮೇಯರ್
(ಚಿತ್ರದಲ್ಲಿ :ನೈಜೀರಿಯಾ ಸಚಿವೆ ಚಿತ್ರಕೃಪೆ : Getty images)

ಈ ಪಟ್ಟಿಯಲ್ಲಿ ಕೇಜ್ರಿವಾಲ್

ಈ ಪಟ್ಟಿಯಲ್ಲಿ ಕೇಜ್ರಿವಾಲ್

41. ಮಿಲಿಂದ್ ಗೇಟ್ಸ್, ಸುಸಾನ್ ಡೆಸ್ಮಂಡ್ಸ್, ಮಿಲಿಂದಾ ಗೇಟ್ಸ್ ಫೌಂಡೇಶನ್ ಸಿಇಒ
42. ಅರವಿಂದ್ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ
43. ಜಾರ್ಜ್ ರಮೋಸ್, ಯುನಿವರ್ಸನ್ ಪತ್ರಕರ್ತ
44. ಮಿಖಾಯಿಲ್ ಫ್ರೋಮನ್, ಅಮೆರಿಕ ಟ್ರೇಡ್ ರೆಪ್ರೆಸೆಂಟೇಟಿವ್
45. ಮಿನಾ ಗುಲಿ, ಥರ್ಸ್ಟ್, ಸಿಇಒ
46. ರೋಮನ್ ಮೆಂಡ್ಜ್, ಹವಾಮಾನ ಬದಲಾವಣೆ ಸಮಿತಿ ಮುಖ್ಯಸ್ಥ, ಉರುಗ್ವೆ
47. ಬ್ರೈಟ್ ಸಿಮನ್ಸ್, ಎಂಪ್ ಡಿಗ್ರಿ, ಅಧ್ಯಕ್ಷ
48. ಜಸ್ಟಿನ್ ಟ್ರೇಡಿಯೊ, ಕೆನಡಾ ಪ್ರಧಾನಿ
49. ಕ್ಲಾರಾ ಬ್ರೌನ್, ಸಾರ್ವಾಕ್ ರಿಪೋರ್ಟ್, ಸಂಪಾದಕಿ
50. ಟಿ ತೋಬ್ಗೇ, ಭೂತಾನ್ ಪ್ರಧಾನಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Fortune magazine released third annual world's fifty greatest leaders list. Delhi CM Arvind Kejriwal is in the list and Indian PM Narendra Modi not in the list.
Please Wait while comments are loading...