ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಲ್ ಕ್ಲಿಂಟನ್ ಜೊತೆ ಅಫೇರ್, ಮೋನಿಕಾ ರೀಕಾಲ್

By Mahesh
|
Google Oneindia Kannada News

ವಾಷಿಂಗ್ಟನ್, ಅ.21 : ಒಂದು ಕಾಲದಲ್ಲಿ ಶ್ವೇತಭವನವನ್ನೇ ಅಲುಗಾಡಿಸಿದ್ದ ಮೋನಿಕಾ ಮೋನಿಕಾ ಲೆವಿನ್‌ಸ್ಕಿ ಈಗ ಟ್ವಿಟ್ಟರ್ ಹಕ್ಕಿ ಹಿಂದೆ ಬಿದ್ದಿದ್ದಾರೆ. ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಜೊತೆ ಸಂಬಂಧದ ಆರೋಪ ಹೊತ್ತಿದ್ದ ಮೋನಿಕಾ ಈಗ ಅಧಿಕೃತವಾಗಿ ಟ್ವಿಟ್ಟರ್ ಖಾತೆ ಓಪನ್ ಮಾಡಿದ್ದಾರೆ.

ಫೋರ್ಬ್ಸ್ ಮ್ಯಾಗಜೀನ್ ಆಯೋಜನೆಯ ಇಂಟರ್ನೆಟ್ ನಲ್ಲಿ ಕಿರುಕುಳ ಕುರಿತಂತೆ ನಡೆದ 'ಅಂಡರ್ 30 ಸಮೀಟ್' ನಲ್ಲಿ ಉಪನ್ಯಾಸ ನೀಡಿದ ಬೆನ್ನಲ್ಲೇ ಮೋನಿಕಾ ಅವರು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಪ್ರವೇಶಿಸಿದ್ದಾರೆ. ಜೊತೆಗೆ ಬಿಲ್ ಕ್ಲಿಂಟನ್ ಜೊತೆ ಅಫರ್ ಬಗ್ಗೆ ಕೂಡಾ ಸಮ್ಮೇಳನದಲ್ಲಿ ಮಾತನಾಡಿದ್ದು ವಿಶೇಷವಾಗಿತ್ತು.

ಮೋನಿಕಾ ಅವರು ತಮ್ಮ ಫ್ರೊಫೆಲ್ ನಲ್ಲಿ ಸಾಮಾಜಿಕ ಕಾರ್ಯಕರ್ತೆ, ಸಾರ್ವಜನಿಕ ಭಾಷಣಗಾರ್ತಿ ಎಂದು ಹಾಕಿಕೊಂಡಿದ್ದಾರೆ. ಜೊತೆಗೆ knitter of things without sleeves ಎಂದು ಹೇಳಿಕೊಂಡಿದ್ದು #HereWeGo ಎಂದು ಮೊದಲ ಟ್ವೀಟ್ ಮಾಡಿದ್ದಾರೆ.

ಫಿಲಡೆಲ್ಫಿಯಾದಲ್ಲಿ ನಡೆದ ಫೋರ್ಬ್ಸ್ ಸೆಮಿನಾರ್ ನಲ್ಲಿ ಸಾವಿರಕ್ಕೂ ಅಧಿಕ ಯುವ ಉದ್ಯಮಿಗಳು ತಮ್ಮ ಹೊಸ ಹೊಸ ಯೋಜನೆಗಳನ್ನು ಹಂಚಿಕೊಂಡಿದ್ದಾರೆ.

Former White House intern Monica Lewinsky debuts on Twitter

ಕ್ಲಿಂಟನ್ ಜೊತೆ ಸಂಬಂಧ: ಅಂದಿನ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಜೊತೆಗಿನ ಸಂಬಂಧವಿರುವ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ನಾನು ಆತಂಕಕ್ಕೀಡಾದೆ. ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಕೂಡಾ ಬಂದಿತ್ತು. ಹಲವಾರು ವರ್ಷಗಳ ಕಾಲ ಮಾನಸಿಕ ಖಿನ್ನತೆ ಅನುಭವಿಸಿದ ಮೇಲೆ ಕೆಲವು ಟಿವಿ ಶೋಗಳಲ್ಲಿ ಭಾಗವಹಿಸಿದೆ ನನ್ನ ಜೀವನ ಮತ್ತೆ ಸರಿ ದಾರಿ ಹಿಡಿಯಿತು.

2005ರಲ್ಲಿ ಯುಎಸ್ಎ ತೊರೆದು ಇಂಗ್ಲೆಂಡಿನ ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಗೆ ಸೇರಿದೆ ಸೋಷಿಯಲ್ ಸೈಕಾಲಜಿಯಲ್ಲಿ ಪದವಿ ಪಡೆದೆ ಅಲ್ಲಿಂದ ಮುಂದೆ ನನ್ನ ಹೊಸ ಜೀವನ ಅರಂಭವಾಯಿತು ಎಂದು ಯುವ ಉದ್ಯಮಿಗಳ ಮುಂದೆ ಮೋನಿಕಾ ತಮ್ಮ ಕಥೆ ಹೇಳಿಕೊಂಡಿದ್ದಾರೆ.

ಈ ಹಿಂದೆ ವ್ಯಾನಿಟಿ ಫೇರ್ ನಿಯತಕಾಲಿಕದಲ್ಲಿ ಬಿಲ್ ಕ್ಲಿಂಟನ್ ಜತೆಗಿನ ಸಂಬಂಧದ ಕುರಿತು ನನಗೆ ವಿಷಾದವಿದೆ. ನನಗೆ ಅಧ್ಯಕ್ಷರ ಒತ್ತಡವಿತ್ತು. ಖಂಡಿತವಾಗಿಯೂ ಅವರು ನನ್ನನ್ನು ಬಳಸಿಕೊಂಡರು. ಆದರೂ ಅದು ಪರಸ್ಪರ ಸಮ್ಮತದ ಸಂಬಂಧವಾಗಿತ್ತು. ಅವರ ಪ್ರತಿಷ್ಠೆಯ ಸ್ಥಾನಮಾನದ ರಕ್ಷಣೆಗಾಗಿ ನನ್ನನ್ನು ಬಲಿಪಶು ಮಾಡಲಾಯಿತು ಎಂದು ಮೋನಿಕಾ ಸುದೀರ್ಘ ಲೇಖನ ಬರೆದಿದ್ದರು. ಇಂದಿಗೂ ಮೋನಿಕಾ ವ್ಯಾನಿಟಿ ಫೇರ್ ನ ಅಂಕಣಗಾರ್ತಿಯಾಗಿದ್ದಾರೆ. (ಐಎಎನ್ಎಸ್)

English summary
Former White House intern Monica Lewinsky, who had an affair with then president Bill Clinton in 1998, has debuted on the Twitter social network just before speaking at Forbes magazine's Under-30 Summit about harassment and bullying on the Internet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X