ಅಮೆರಿಕ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ನಿಧನ: 100ನೇ ವರ್ಷಕ್ಕೆ ಇಹಲೋಕ ತ್ಯಜಿಸಿದ ದಿಗ್ಗಜ
ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರು ತಮ್ಮ ಜೀವನದ ಪಯಣ ಮುಗಿಸಿದ್ದಾರೆ. 1924ರ ಅಕ್ಟೋಬರ್ 1 ರಂದು ಹುಟ್ಟಿದ್ದ ಜಿಮ್ಮಿ ಕಾರ್ಟರ್ ಬರೋಬ್ಬರಿ 100 ವರ್ಷಗಳ ಕಾಲ ಜೀವಿಸಿ ಈಗ ಇಹಲೋಕ ತ್ಯಜಿಸಿದ್ದಾರೆ. ನೋಬೆಲ್ ಶಾಂತಿ ಪ್ರಶಸ್ತಿ ಪಡೆದಿದ್ದ ಜಿಮ್ಮಿ ಕಾರ್ಟರ್ ಅವರು ಜಾಗತಿಕ ಮಟ್ಟದಲ್ಲೂ ದೊಡ್ಡ ಹೆಸರು ಪಡೆದಿದ್ದರು. ಜಿಮ್ಮಿ ಕಾರ್ಟರ್ ಅವರ ಸಾವಿನ ಸುದ್ದಿ ಇದೀಗ ಜಾಗತಿಕ ಮಟ್ಟದಲ್ಲಿ ದೊಡ್ಡ ತಲ್ಲಣ ಎಬ್ಬಿಸಿದೆ.
ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗುವುದು ಸುಲಭದ ಮಾತಲ್ಲ, ಹಾಗೇ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸಾವಿರಾರು ಸಾವಲುಗಳು ಎದುರಾಗುತ್ತವೆ. ಇದೆಲ್ಲವನ್ನೂ ಎದುರಿಸಿ, ಜಿಮ್ಮಿ ಕಾರ್ಟರ್ ಅವರು ಅಚ್ಚುಕಟ್ಟಾಗಿ ಅಮೆರಿಕದ ಆಡಳಿತ ನಡೆಸಿದ್ದರು. 1977 ರಲ್ಲಿ ಹೀಗೆ ಅಮೆರಿಕ ಅಧ್ಯಕ್ಷರಾಗಿ ಜಿಮ್ಮಿ ಕಾರ್ಟರ್ ಅವರು ಅಧಿಕಾರ ವಹಿಸಿಕೊಂಡರು. ಅಲ್ಲಿಂದ ಮುಂದೆ ಅಮೆರಿಕದಲ್ಲಿ ಕ್ರಾಂತಿಕಾರಿ ತೀರ್ಮಾನ ತೆಗೆದುಕೊಂಡು, ಸಾಕಷ್ಟು ಬದಲಾವಣೆ ತಂದಿದ್ದರು.

1977 ಟು 1981 ಕ್ರಾಂತಿಕಾರಿ ಹಾದಿ!
1977ರ ಜನವರಿ 20ಕ್ಕೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಜಿಮ್ಮಿ ಕಾರ್ಟರ್ ಅವರು, 1981ರ ಜನವರಿ 20ರ ತನಕ ತಮ್ಮ ಆಡಳಿತ ನಡೆಸಿದ್ದರು. ಜಿಮ್ಮಿ ಕಾರ್ಟರ್ ತಮ್ಮ ಅಧಿಕಾರ ಅವಧಿಯಲ್ಲಿ ಸಾಕಷ್ಟು ಯುದ್ಧಗಳನ್ನ ತಪ್ಪಿಸಿದ್ದರು ಎಂಬ ಕಾರಣಕ್ಕೆ & ಈ ಮೂಲಕ ಶಾಂತಿ ಸ್ಥಾಪನೆ ಮಾಡಿದ್ದರು ಎಂಬ ಕಾರಣಕ್ಕೆ ಜಿಮ್ಮಿ ಕಾರ್ಟರ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಕೂಡ ನೀಡಲಾಗಿತ್ತು. ಹೀಗೆ, ಹಲವು ಸಾಧನೆ ಮಾಡಿದ್ದ ಜಿಮ್ಮಿ ಕಾರ್ಟರ್ ಇದೀಗ ತಮ್ಮ ಜೀವನದ ಪಯಣ ಮುಗಿಸಿದ್ದಾರೆ.
ಜಾಗತಿಕ ನಾಯಕರ ಸಂತಾಪ
ಜಿಮ್ಮಿ ಕಾರ್ಟರ್ ಅವರ ನಿಧನದ ಸುದ್ದಿ ತಿಳಿದು ಜಾಗತಿಕವಾಗಿ ಕೂಡ ಬೇಸರ ವ್ಯಕ್ತವಾಗಿದ್ದು, ದಿಗ್ಗಜ ನಾಯಕನನ್ನು ಕಳೆದುಕೊಂಡ ಬಗ್ಗೆ ಘಟಾನುಘಟಿ ನಾಯಕರು ಇದೀಗ ಸಂತಾಪವನ್ನು ಸೂಚಿಸಿದ್ದಾರೆ. ಬರಾಕ್ ಒಬಾಮಾ, ಬಿಲ್ ಕ್ಲಿಂಟನ್, ಜೋ ಬೈಡನ್ ಸೇರಿದಂತೆ ಅಮೆರಿಕ ರಾಜಕೀಯದಲ್ಲಿ ಬಿಗಿಯಾದ ಹಿಡಿತ ಹೊಂದಿದ್ದ ಹಲವು ನಾಯಕರ ಜೊತೆ ಜಿಮ್ಮಿ ಕಾರ್ಟರ್ ಉತ್ತಮ ಒಡನಾಟ ಹೊಂದಿದ್ದರು.
ಜಿಮ್ಮಿ ಕಾರ್ಟರ್ ಅವರ ನಿಧನದ ಸುದ್ದಿ ಜಾಗತಿಕ ನಾಯಕರನ್ನು ನೋವಿನಲ್ಲಿ ಮುಳಗುವಂತೆ ಮಾಡಿದೆ. ಅಲ್ಲದೆ ಜಾಗತಿಕವಾಗಿ ದಿಗ್ಗಜ ನಾಯಕರು ಸಂತಾಪ ಸೂಚಿಸಿದ್ದಾರೆ. ಮತ್ತೊಂದು ಕಡೆ, ಡೊನಾಲ್ಡ್ ಟ್ರಂಪ್‌ರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಇರುವ ಸಮಯದಲ್ಲೇ ಜಿಮ್ಮಿ ಕಾರ್ಟರ್ ಅವರ ನಿಧನದ ಸುದ್ದಿ ಈಗ ಅಮೆರಿಕನ್ನರಲ್ಲಿ ಬೇಸರ ತರಿಸಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications