Shahid Afridi: ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರ ಸಹೋದರಿ ನಿಧನ
ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರ ಸಹೋದರಿ ಸಾವನ್ನಪ್ಪಿದ್ದಾರೆ. ಶಾಹಿದ್ ಅಫ್ರಿದಿ ಅವರು ತಮ್ಮ ತಂಗಿ ಸಾವನ್ನಪ್ಪಿರುವ ಸುದ್ದಿಯನ್ನು ಟ್ವಿಟರ್ ಖಾತೆಯಲ್ಲಿ ಖಚಿತಪಡಿಸಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಸೋಮವಾರ ಟ್ವಿಟ್ ಮಾಡಿದ್ದ ಶಾಹಿದ್ ಅಫ್ರಿದಿ ತಮ್ಮ ಸಹೋದರಿ ಆಸ್ಪತ್ರೆಯಲ್ಲಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಹೇಳಿದ್ದರು. ಆಕೆಯ ಅನಾರೋಗ್ಯದಿಂದ ತಮ್ಮ ಪ್ರಯಾಣದ ಯೋಜನೆಗಳನ್ನು ಬದಲಾಯಿಸಿದ್ದ ಅಫ್ರಿದಿ ಅವರನ್ನು ನೋಡಲು ವಾಪಸಾಗಿದ್ದರು.

ತನ್ನ ಸಹೋದರಿಯನ್ನು ನೋಡಲು ಅವರು ವಾಪಸಾದ ಬಳಿಕ ಅವರು ಸಾವನ್ನಪ್ಪಿರುವ ವಿಚಾರವನ್ನು ಧೃಡಪಡಿಸಿದ್ದಾರೆ. "ಖಂಡಿತವಾಗಿಯೂ ನಾವು ಅಲ್ಲಾಹನಿಗೆ ಸೇರಿದ್ದೇವೆ ಮತ್ತು ನಾವು ಹಿಂತಿರುಗುತ್ತೇವೆ. ನಮ್ಮ ಪ್ರೀತಿಯ ಸಹೋದರಿ ನಿಧನರಾದರು ಮತ್ತು ಅವರ ನಮಾಜ್ ಇ ಜನಜಾಹ್ ಅಕ್ಟೋಬರ್ 117ರಂದು ಝುಹುರ್ ಪ್ರಾರ್ಥನೆಯ ನಂತರ ಜಕರಿಯಾ ಮಸೀದಿ ಮುಖ್ಯ 26 ನೇ ಬೀದಿ ಖಯಾಬಾನ್ ಇ ಗಾಲಿಬ್ ಡಿಹೆಚ್‌ಎ ನಲ್ಲಿ ನಡೆಯಲಿದೆ ಎಂದು ನಾವು ಭಾರವಾದ ಹೃದಯದಿಂದ ನಿಮಗೆ ತಿಳಿಸುತ್ತೇವೆ." ಎಂದು ಅಫ್ರಿದಿ ಎಕ್ಸ್ (ಟ್ವಿಟರ್) ನಲ್ಲಿ ಬರೆದಿದ್ದಾರೆ.
(إِنَّا ِلِلَّٰهِ وَإِنَّا إِلَيْهِ رَاجِعُونَ,)
— Shahid Afridi (@SAfridiOfficial) October 17, 2023
Surely we belong to Allah and to him we shall return.
With Heavy hearts we inform you that our beloved Sister passed away and her Namaz e Janazah will be at 17.10.2023 after Zuhur prayer at Zakariya masjid main 26th street… https://t.co/Ly4sK6XVGT
ಸೋಮವಾರ ಸಹೋದರಿಯ ಅನಾರೋಗ್ಯದ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಶಾಹಿದ್ ಅಫ್ರಿದಿ, "ನನ್ನ ಪ್ರೀತಿಯು ಗಟ್ಟಿಯಾಗಿರಲಿ, ಶೀಘ್ರದಲ್ಲೇ ನಿನ್ನನ್ನು ನೋಡಲು ನಾನು ಹಿಂತಿರುಗುತ್ತಿದ್ದೇನೆ, ನನ್ನ ಸಹೋದರಿ ಇದೀಗ ತನ್ನ ಜೀವಕ್ಕಾಗಿ ಹೋರಾಡುತ್ತಿದ್ದಾಳೆ, ಅವಳ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಲು ನಾನು ನಿಮ್ಮನ್ನು ವಿನಂತಿಸುತ್ತೇನೆ, ಅಲ್ಲಾಹನು ಅವರಿಗೆ ಶೀಘ್ರ ಚೇತರಿಕೆ ಮತ್ತು ದೀರ್ಘ ಆರೋಗ್ಯಕರ ಜೀವನ ನೀಡಲಿ" ಎಂದು ಪ್ರಾರ್ಥಿಸಿದ್ದರು.
ಸಹೋದರಿಯನ್ನು ಕಳೆದುಕೊಂಡ ಶಾಹಿದ್ ಅಫ್ರಿದಿಗೆ ಅವರ ಅಭಿಮಾನಿಗಳು ಧೈರ್ಯ ಹೇಳಿದ್ದಾರೆ. ಸಹೋದರಿ ಸಾವಿಗೆ ಸಾವಿರಾರು ಜನ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications