ಪಾಕ್ ಕ್ರಿಕೆಟಿಗ ಇಮ್ರಾನ್ ಖಾನ್ಗೆ ಮತ್ತೆ ಶಾದಿಭಾಗ್ಯ
ಇಸ್ಲಾಮಾಬಾದ್, ಡಿ 31: 62 ವರ್ಷದ ಪಾಕಿಸ್ತಾನದ ಮಾಜಿ ಕ್ರಿಕೆಟ್ ನಾಯಕ ಮತ್ತು ಹಾಲಿ ವಿರೋಧ ಪಕ್ಷದ ನಾಯಕ ಇಮ್ರಾನ್ ಖಾನ್ ಸದ್ದಿಲ್ಲದೇ ಮತ್ತೊಂದು ಮದುವೆಗೆ ಸಜ್ಜಾಗುತ್ತಿದ್ದಾರೆ. ಮದುವೆಗೆ ವಯಸ್ಸು ಮುಖ್ಯವಲ್ಲ, ಮನಸ್ಸು ಮನಸ್ಸು ಒಂದಾಗಬೇಕು ಎನ್ನುವ ಮಾತನ್ನು ಇಮ್ರಾನ್ ನಿಜಮಾಡಲು ಹೊರಟಿದ್ದಾರೆ.
ಪಾಕಿಸ್ತಾನದ ಪ್ರಮುಖ ವಿರೋಧ ಪಕ್ಷ ತೆಹ್ರಿಕ್-ಇ-ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್, ಪಾಕಿಸ್ತಾನದ ಟಿವಿ ನಿರೂಪಕಿ ರೇಹಾಮ್ ಖಾನ್ ಅವರನ್ನು ವರಿಸಲಿದ್ದಾರೆ. ಆದರೆ, ಪಾಕಿಸ್ತಾನದ ಕೆಲವೊಂದು ಮಾಧ್ಯಮಗಳ ಪ್ರಕಾರ ಇವರಿಬ್ಬರು ಈಗಾಗಲೇ ರಹಸ್ಯವಾಗಿ ಮದುವೆ ಮಾಡಿಕೊಂಡಾಗಿದೆ.

ನವೆಂಬರ್ 1952ರಲ್ಲಿ ಲಾಹೋರ್ ನಲ್ಲಿ ಜನಿಸಿದ ಇಮ್ರಾನ್ ಖಾನ್, ಮೇ 1995ರಲ್ಲಿ ಪ್ಯಾರಿಸ್ ನಲ್ಲಿ ಜೆಮಿನಾ ಗೋಲ್ಡ್ ಸ್ಮಿತ್ ಅವರನ್ನು ಮದುವೆಯಾಗಿದ್ದರು. (ಹಿಂದೂಗಳನ್ನು ಪಾಕಿಸ್ತಾನಕ್ಕೆ ಕರೆತರುವೆ)
ಇಮ್ರಾನ್ ಮತ್ತು ಜೆಮಿನಾ ಅವರಿಗೆ ಸುಲೇಮಾನ್ ಮತ್ತು ಖಾಸಿಂ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಕೌಟುಂಬಿಕ ಭಿನ್ನಾಭಿಪ್ರಾಯದಿಂದ ಇಮ್ರಾನ್ - ಜೆಮಿನಾ 2009ರಲ್ಲಿ ತಲಾಖ್ ಪಡೆದುಕೊಂಡಿದ್ದರು.
ಇದಾದ ನಂತರ ರಾಜಕಾರಣದಲ್ಲಿ ಸಕ್ರಿಯವಾಗಿದ್ದ ಇಮ್ರಾನ್ ಖಾನ್, ಟಿವಿ ನಿರೂಪಕಿ ರೇಹಾಮ್ ಅವರನ್ನು ಕಳೆದ ತಿಂಗಳು ಮದುವೆಯಾಗಿದ್ದಾರೆಂದು ಪಾಕ್ ಮಾಧ್ಯಮಗಳು ಸುದ್ದಿ ಮಾಡಿದ್ದವು. ಆದರೆ ಇಮ್ರಾನ್ ಈ ಸುದ್ದಿಯನ್ನು ನಿರಾಕರಿಸಿದ್ದರು.
ರೇಹಾಮ್ ಖಾನ್ ಬ್ರಿಟಿಷ್ ಮೂಲದ ಪತ್ರಕರ್ತೆ, ಸದ್ಯ ಈಕೆ ಪಾಕಿಸ್ತಾನದಲ್ಲಿರುವ ಬಿಬಿಸಿ ವಾಹಿನಿಲ್ಲಿ ಹವಾಮಾನ ವರದಿಯ ನಿರೂಪಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. 41 ವರ್ಷದ ಈಕೆ ಕೂಡಾ ವಿಚ್ಚೇದನ ಪಡೆದವಳಾಗಿದ್ದು, ಮೂರು ಮಕ್ಕಳ ತಾಯಿ.
ಇತ್ತೀಚೆಗೆ ಪಾಕಿಸ್ತಾನದ ಪ್ರಧಾನಿ ನವಾಬ್ ಶರೀಫ್ ವಿರುದ್ದ ಹೋರಾಟಕ್ಕಿಳಿದಿದ್ದ ಇಮ್ರಾನ್, ಸದ್ಯದಲ್ಲೇ ಪುನರ್ವಿವಾಹವಾಗುವುದಾಗಿ ಹೇಳಿಕೊಂಡಿದ್ದರು.
-
Mrunal Thakur: ತೆಲುಗು ಹುಡುಗನನ್ನೇ ಮದುವೆಯಾಗಿ ಇಲ್ಲೇ ಸೆಟಲ್ ಆಗಿ: ನಟಿ ಮೃಣಾಲ್ ಠಾಕೂರ್ಗೆ ಅಲ್ಲು ಅರವಿಂದ್ ಸಲಹೆ -
US-Iran Talks: ಪಾಕ್ ನೆಲದಲ್ಲಿ 21 ಗಂಟೆಗಳ ಸಂಧಾನ ಮಾತುಕತೆ ವಿಫಲ: ಹೆಚ್ಚಿದ ಯುದ್ಧ ಭೀತಿ- ಪ್ರಮುಖಾಂಶಗಳು -
Monalisa: ಕುಂಭಮೇಳ ವೈರಲ್ ಸುಂದರಿ ಮೊನಾಲಿಸಾ ದಂಪತಿಗೆ ಬಿಗ್ ರಿಲೀಫ್: ಬಂಧನಕ್ಕೆ ತಡೆ ನೀಡಿದ ಕೇರಳ ಹೈಕೋರ್ಟ್ -
Chandan Shetty: ವಯಸ್ಸಾದ್ಮೇಲೆ ಒಂಟಿತನ ಕಾಡುತ್ತೆ, ಆಗ ಕೊರಗುವ ಬದಲು ಈಗಲೇ ಒಳ್ಳೆಯ ಸಂಗಾತಿ ಹುಡುಕುವೆ: ಚಂದನ್ ಶೆಟ್ಟಿ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ












Click it and Unblock the Notifications