Breaking: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ವಿಧಿವಶ

ನಾರಾ, ಜುಲೈ 8: ಜಪಾನಿನ ಮಾಜಿ ಪ್ರಧಾನಮಂತ್ರಿ ಶಿಂಜೊ ಅಬೆ ವಿಧಿವಶರಾಗಿದ್ದಾರೆ ಎಂದು ಜಾಗತಿಕ ಮಾಧ್ಯಮಗಳು ದೃಢಪಡಿಸಿವೆ. ಶುಕ್ರವಾರ ಪಶ್ಚಿಮ ಜಪಾನ್‌ನ ನಾರಾದಲ್ಲಿ ಪ್ರಚಾರ ಮಾಡುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದ.

ನಾರಾದಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿ ನಡೆಸಿದ ಗುಂಡಿನ ದಾಳಿಯಿಂದ ಶಿಂಜೋ ಅಬೆ ಸ್ಥಳದಲ್ಲಿ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ನಾರಾದ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಶಿಂಜೋ ಅಬೆ ಚಿಕಿತ್ಸೆಯು ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮಾಜಿ ಪ್ರಧಾನಮಂತ್ರಿ ಶಿಂಜೋ ಅಬೆ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಯನ್ನು ಬೆಳಗ್ಗೆ 11.30ರ ಸುಮಾರಿಗೆ ಜಪಾನ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಇತ್ತ ಇನ್ನೊಂದು ಕಡೆಯಲ್ಲಿ ಶಿಂಜೋ ಅಬೆ ಭಾಷಣದ ಸಂದರ್ಭದಲ್ಲಿ ಗುಂಡಿನ ಸದ್ದು ಕೇಳಿ ಬಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ಸಖತ್ ವೈರಲ್ ಆಗುತ್ತಿದೆ.

ಸುದೀರ್ಘ ಅವಧಿ ಸೇವೆ ಸಲ್ಲಿಸಿದ ಶಿಂಜೋ ಅಬೆ: ಜಪಾನ್‌ನ ಪ್ರಧಾನಮಂತ್ರಿ ಆಗಿ ಶಿಂಜೋ ಅಬೆ ಸುದೀರ್ಘ ಅವಧಿಯವರೆಗೂ ಸೇವೆ ಸಲ್ಲಿಸಿದ್ದಾರೆ. ಅವರು 2006ರಲ್ಲಿ ಒಂದು ವರ್ಷ ಮತ್ತು 2012 ರಿಂದ 2020ರವರೆಗೂ ಅಧಿಕಾರದಲ್ಲಿ ಇದ್ದರು.

ಶಿಂಬೋ ಅಬೆ ಮೇಲೆ ನಡೆದ ದಾಳಿ ಹೇಗಿತ್ತು?

ಶಿಂಬೋ ಅಬೆ ಮೇಲೆ ನಡೆದ ದಾಳಿ ಹೇಗಿತ್ತು?

"ಅವರು ಭಾಷಣ ಮಾಡುತ್ತಿದ್ದ ವೇಳೆ ಒಬ್ಬ ವ್ಯಕ್ತಿ ಹಿಂದಿನಿಂದ ಬಂದನು" ಎಂದು ಸ್ಥಳದಲ್ಲಿದ್ದ ಯುವತಿಯೊಬ್ಬರು ತಿಳಿಸಿದ್ದಾರೆ. "ಮೊದಲ ಗುಂಡಿನ ದಾಳಿಯು ಸಾಮಾನ್ಯ ಸದ್ದಿನಂತೆ ಕೇಳಿತು. ಅವರು ಬೀಳಲಿಲ್ಲ, ಆದರೆ ಎರಡನೇ ಗುಂಡೇಟು ಕಣ್ಣಿಗೆ ರಾಚುವಂತಿದ್ದು, ಕಿಡಿ ಮತ್ತು ಹೊಗೆ ಹೊತ್ತಿಕೊಂಡಿದ್ದನೂ ನೀವು ನೋಡಬಹುದು," ಎಂದು ಯುವತಿ ತಿಳಿಸಿದ್ದಾರೆ.

ಗುಂಡೇಟಿನಿಂದ ಶಿಂಜೋ ಅಬೆ ತೀವ್ರ ರಕ್ತಸ್ರಾವ

ಗುಂಡೇಟಿನಿಂದ ಶಿಂಜೋ ಅಬೆ ತೀವ್ರ ರಕ್ತಸ್ರಾವ

ಶುಕ್ರವಾರ ನಡೆದ ಗುಂಡಿನ ದಾಳಿಯಲ್ಲಿ 67 ವರ್ಷದ ಶಿಂಜೋ ಅಬೆ ಕುಸಿದು ಬೀಳುತ್ತಿದ್ದಂತೆ ಕುತ್ತಿಗೆಯಿಂದ ತೀವ್ರ ರಕ್ತಸ್ರಾವವಾಗುತ್ತಿತ್ತು ಎಂದು ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷದ ಮೂಲಗಳು ತಿಳಿಸಿವೆ. ಈ ಹಿನ್ನೆಲೆ ಆಡಳಿತ ಪಕ್ಷದ ಅಬೆ ಬಣದ ಅಧಿಕಾರಿಯೊಬ್ಬರು ರಕ್ತದಾನ ಮಾಡಿದ್ದಾರೆ. ಜಪಾನ್‌ನ ಪ್ರಧಾನಮಂತ್ರಿ ಆಗಿ ಶಿಂಜೋ ಅಬೆ ಈ ಹಿಂದೆ ಸುದೀರ್ಘ ಅವಧಿಯವರೆಗೂ ಸೇವೆ ಸಲ್ಲಿಸಿದ್ದಾರೆ. 2006ರಲ್ಲಿ ಒಂದು ವರ್ಷ ಮತ್ತು 2012 ರಿಂದ 2020ರವರೆಗೂ ಅಧಿಕಾರದಲ್ಲಿ ಇದ್ದರು.

ಅಬೆ ಮೇಲೆ ಗುಂಡಿನ ದಾಳಿ ನಡೆಸಿದ್ದು ಯಾರು?

ಅಬೆ ಮೇಲೆ ಗುಂಡಿನ ದಾಳಿ ನಡೆಸಿದ್ದು ಯಾರು?

ಜಪಾನ್ ಮಾಡಿ ಪ್ರಧಾನಿ ಶಿಂಜೋ ಅಬೆ ಮೇಲೆ ಗುಂಡು ಹಾರಿಸಿದ ಆರೋಪಿಯ ಹೆಸರು ತೆಸುಯಾ ಯಮಗಾಮಿ ಎಂದು ಗುರುತಿಸಲಾಗಿದ್ದು, ಆತ ನಾರಾ ನಿವಾಸಿ ಆಗಿದ್ದಾರೆ. ಆರೋಪಿಯನ್ನು ಕೊಲೆ ಯತ್ನದ ಶಂಕೆಯ ಮೇರೆಗೆ ಘಟನಾ ಸ್ಥಳದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸರ್ಕಾರಿ ಮೂಲಗಳ ಪ್ರಕಾರ ಶಂಕಿತನು ಈ ಹಿಂದೆ ಸ್ವಯಂ ರಕ್ಷಣಾ ಪಡೆಯ ಸದಸ್ಯನಾಗಿದ್ದನು ಎಂದು ತಿಳಿದು ಬಂದಿದೆ.

ಜಪಾನ್‌ನಲ್ಲಿ ಬಂದೂಕಿನ ಪರವಾನಗಿ ಅಷ್ಟು ಸುಲಭವೇ?

ಜಪಾನ್‌ನಲ್ಲಿ ಬಂದೂಕಿನ ಪರವಾನಗಿ ಅಷ್ಟು ಸುಲಭವೇ?

ಜಗತ್ತಿನಲ್ಲಿ ಕಠಿಣ ಬಂದೂಕು ನಿಯಂತ್ರಣ ಕಾನೂನುಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಜಪಾನ್ ಕೂಡ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಈ ದೇಶದಲ್ಲಿ ಬಂದೂಕಿನ ಪರವಾನಗಿ ಪಡೆದುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. 125 ಮಿಲಿಯನ್ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಇಂಥ ಗುಂಡಿನ ದಾಳಿಯಿಂದ ಸಾವನ್ನಪ್ಪಿದವರ ಸಂಖ್ಯೆಯು ಎಂದಿಗೂ ಎರಡಂಕಿಯನ್ನು ಮುಟ್ಟಿಲ್ಲ. ಸ್ವತಃ ಜಪಾನ್ ಪ್ರಜೆಗಳೇ ಬಂದೂಕಿನ ಪರವಾಗನಿ ಪಡೆದುಕೊಳ್ಳಬೇಕಾದರೆ ಅದೊಂದು ಸುದೀರ್ಘ ಮತ್ತು ಸಂಕೀರ್ಣ ಪ್ರಕ್ರಿಯೆ ಹೊಂದಿರುತ್ತದೆ.

ಬಂದೂಕಿನ ಪರವಾನಗಿ ಪಡೆದುಕೊಳ್ಳಬೇಕಾದರೆ ಮೊದಲಿಗೆ ಶೂಟಿಂಗ್ ಅಸೋಸಿಯೇಷನ್‌ನಿಂದ ಶಿಫಾರಸನ್ನು ಪಡೆದುಕೊಳ್ಳಬೇಕು. ತದನಂತರ ಕಟ್ಟುನಿಟ್ಟಾದ ಪೊಲೀಸ್ ತಪಾಸಣೆಗೆ ಒಳಗಾಗಬೇಕು ಎಂಬ ಷರತ್ತು ಇರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+