ವರ್ಣಬೇಧ ನೀತಿಗೆ ಸಡ್ಡು ಹೊಡೆದ ಸರದಾರ ಒಬಾಮ

Posted By:
Subscribe to Oneindia Kannada

ಅಮೆರಿಕ ಕಂಡ ಜನಪ್ರಿಯ ಅಧ್ಯಕ್ಷರಲ್ಲೊಬ್ಬರಾದ ಬರಾಕ್ ಒಬಾಮ ಅವರ ಅಧ್ಯಕ್ಷಾವಧಿ ಇನ್ನೇನು ಮುಗಿಯುವ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ಅವರು ಬುಧವಾರ ಶಿಕಾಗೋದಲ್ಲಿ ವಿದಾಯದ ಭಾಷಣ ಮಾಡಿದ್ದಾರೆ.

ಅಮೆರಿಕದಂಥ ದೇಶದಲ್ಲಿ ಕಪ್ಪು ವರ್ಣೀಯರ ಬಗ್ಗೆ ಆ ಸಮಾಜದಲ್ಲಿದ್ದ ಅಥವಾ ಈಗಲೂ ಇರುವ ಅನಾದರಣೆ, ಜನಾಂಗೀಯ ಬೇಧ ಇವೆಲ್ಲವುಗಳನ್ನು ನಗುನಗುತ್ತಾ ಎದುರಿಸುತ್ತಲೇ ಬೆಳೆದವರು ಅವರು. ತಾವು ಕಂಡ ಕಡುಕಷ್ಟಗಳ ನಡುವೆಯೂ ಹಂತಹಂತವಾಗಿ ಜೀವನದಲ್ಲಿ ಮೇಲೇರುವ ಮೂಲಕ ಅತ್ಯುನ್ನತ ಹುದ್ದೆಗೆ ಹೋದ ಅವರ ಸಾಧನೆಯೇ ಒಂದು ಸ್ಫೂರ್ತಿಗಾಥೆ.

ಅಮೆರಿಕ ಅಧ್ಯಕ್ಷರಾಗಿ, ನೋಬೆಲ್ ಪ್ರಶಸ್ತಿ ವಿಜೇತರಾಗಿ, ಭಾರತದೊಂದಿಗೆ ಉತ್ತಮ ಸ್ನೇಹ ಹೊಂದಿರುವ ಒಬಾಮ ಅವರ ಜೀವನದ ಪ್ರಮುಖ ಹೆಜ್ಜೆ ಗುರುತುಗಳನ್ನು ಇಲ್ಲಿ ದಾಖಲಿಸಲಾಗಿದೆ.[ಅಧ್ಯಕ್ಷೀಯ ಪದವಿಗೆ ಭಾವುಕ ವಿದಾಯ ಹೇಳಿದ ಬರಾಕ್ ಒಬಾಮಾ]

ಆರಂಭದಲ್ಲೇ ಹಲವಾರು ತಿರುವು

ಆರಂಭದಲ್ಲೇ ಹಲವಾರು ತಿರುವು

1961- ಹವಾಯ್ ನ ಹೊನೊಲುಲುನಲ್ಲಿ ಆ. 4ರಂದು ಬರಾಕ್ ಒಬಾಮಾ ಸೀನಿಯರ್ ಹಾಗೂ ಸ್ಟಾಸ್ಲಿ ಆ್ಯನ್ ಡುನ್ಹಾಮ್ ದಂಪತಿಗೆ ಜನನ. ಆದರೆ, ಜೂನಿಯರ್ ಒಬಾಮ ಇನ್ನೂ ಹೊಟ್ಟೆಯಲ್ಲಿದ್ದಾಗಲೇ ವಿಚ್ಛೇದನ ಪಡೆದ ದಂಪತಿ.
1967- ಲೊಲೊ ಸೊಯೆಟೊರೊ ಅವರನ್ನು ಮದುವೆಯಾದ ಒಬಾಮ ತಾಯಿ. ಹೊಸ ಅಪ್ಪನೊಂದಿಗೆ ಇಂಡೋನೇಷ್ಯಾಕ್ಕೆ ವಲಸೆ.

ಹವಾಯ್ ಗೆ ಪುನರಾಗಮನ

ಹವಾಯ್ ಗೆ ಪುನರಾಗಮನ

1971- ಹುಟ್ಟಿದಾಗಿನಿಂದ ತಂದೆಯ ಮುಖವನ್ನೇ ಕಂಡಿರದಿದ್ದ ಬರಾಕ್ ಒಬಾಮ ಅವರನ್ನು ನೋಡಲು ಬಂದ ಬರಾಕ್ ಒಬಾಮ ಸೀನಿಯರ್. ಜನನವಾಗಿ 10 ವರ್ಷಗಳ ನಂತರ ತಂದೆ, ಮಗನ ಭೇಟಿ.

1971-79 -ಐದನೇ ತರಗತಿಯಲ್ಲಿ ಓದುತ್ತಿದ್ದಾಗ ಹವಾಯ್ ಗೆ ಮರಳಿದ ಒಬಾಮ. ಅಲ್ಲಿ ಅಜ್ಜ-ಅಜ್ಜಿ ಮನೆಯಲ್ಲಿದ್ದುಕೊಂಡು ಓದು ಮುಂದುವರಿಕೆ. ಸುಮಾರು ವರ್ಷಗಳ ಕಾಲ ಅಲ್ಲೇ ನೆಲೆ.

ವಿದ್ಯಾರ್ಥಿ ದೆಸೆಯಲ್ಲೇ ಹೆಸರು

ವಿದ್ಯಾರ್ಥಿ ದೆಸೆಯಲ್ಲೇ ಹೆಸರು

1979- ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ನಲ್ಲಿರುವ ಒಕ್ಸಿಡೆಂಟಲ್ ಕಾಲೇಜಿನಲ್ಲಿ ಎರಡು ವರ್ಷಗಳ ವ್ಯಾಸಂಗ. ಪ್ರತಿಭಾನ್ವಿತ ವಿದ್ಯಾರ್ಥಿಯೆಂಬ ಪಟ್ಟ.

1981-ನ್ಯೂಯಾರ್ಕ್ ನ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಸೇರ್ಪಡೆ. ಅಲ್ಲಿಯೂ ತಮ್ಮ ಪ್ರತಿಭೆ, ಪರಿಶ್ರಮಗಳಿಂದ ಎಲ್ಲರ ಗಮನ ಸೆಳೆದ ಯುವ ವಿದ್ಯಾರ್ಥಿ ಬರಾಕ್ ಒಬಾಮ.

ಪಿತೃ ವಿಯೋಗ, ಪದವಿ

ಪಿತೃ ವಿಯೋಗ, ಪದವಿ

1982- ಕಾರು ಅಪಘಾತದಲ್ಲಿ ಬರಾಕ್ ಒಬಾಮ ಸೀನಿಯರ್ ಸಾವು. ತಂದೆಯನ್ನು ಕಳೆದುಕೊಂಡ ದುಃಖಕ್ಕೆ ಸಿಲುಕಿದ ಒಬಾಮ ಜೂನಿಯರ್.

1983-ಕೊಲಂಬಿಯಾ ವಿಶ್ವವಿದ್ಯಾಲಯದಿಂದ ರಾಜ್ಯ ಶಾಸ್ತ್ರದಲ್ಲಿ ಪದವಿ ಸ್ವೀಕಾರ. ಆನಂತರ, ನ್ಯೂಯಾರ್ಕ್ ನಗರದಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದ ಒಬಾಮ.

ರಾಜಕೀಯ, ಕಾನೂನು ತಜ್ಞ

ರಾಜಕೀಯ, ಕಾನೂನು ತಜ್ಞ

1990- ಹಾರ್ವರ್ಡ್ ಕಾನೂನು ಪರಿಶೀಲನಾ ಸಮಿತಿಯ ಸಂಪಾದಕರಾಗಿ ಆಯ್ಕೆ. ಈ ಪದವಿಗೇರಿದ ಅಮೆರಿಕದ ಮೊಟ್ಟ ಮೊದಲ ಆಫ್ರಿಕಾ ಮೂಲದ ವ್ಯಕ್ತಿಯೆಂಬ ಹೆಗ್ಗಳಿಕೆ.

1991-ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದ ಬರಾಕ್ ಒಬಾಮ. ಇಲ್ಲಿಂದ ಮುಂದಕ್ಕೆ ಕಾನೂನು ಕ್ಷೇತ್ರದಲ್ಲಿ ಸೇವೆ ಆರಂಭ.

ಕುಟುಂಬಸ್ಥರಾದರೂ ಅನಾಥರಾದರು

ಕುಟುಂಬಸ್ಥರಾದರೂ ಅನಾಥರಾದರು

1992-ಇದೇ ವರ್ಷ ಅಕ್ಟೋಬರ್ 8ರಂದು ಮಿಷೆಲ್ ರಾಬಿನ್ಸನ್ ಜತೆ ವಿವಾಹ. ಶಿಕಾಗೋದಲ್ಲೇ ನೆಲೆ. ಅಲ್ಲಿನ ಕಾನೂನು ಸಂಸ್ಥೆಯೊಂದರಲ್ಲಿ ಕೆಲಸ ಹಾಗೂ ಶಿಕಾಗೋ ಕಾನೂನು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕನಾಗಿ ಸೇವೆ.

1996- ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬರಾಕ್ ಒಬಾಮ ತಾಯಿ ಸ್ಟಾಸ್ಲಿ ಆ್ಯ ನ್ ಡುನ್ಹಾಮ್ ನಿಧನ. ತಾಯಿಯ ನಿಧನದಿಂದ ಕೆಲ ಕಾಲ ಖಿನ್ನರಾದ ಬರಾಕ್ ಒಬಾಮ. ಕೆಲ ಕಾಲದ ನಂತರ ಚೇತರಿಕೆ.

ಸೆನೆಟ್ ಗೆ ಆಯ್ಕೆ, ಪುತ್ರಿ ಜನನ

ಸೆನೆಟ್ ಗೆ ಆಯ್ಕೆ, ಪುತ್ರಿ ಜನನ

1996- ಈಲಿಯೊನಿಸ್ ರಾಜ್ಯ ಸೆನೆಟ್ ಗೆ ಮೊದಲ ಬಾರಿಗೆ ಆಯ್ಕೆ. ಅಲ್ಲಿಂದ ಒಬಾಮ ರಾಜಕೀಯ ಜೀವನ ಆರಂಭ. 1998ರಲ್ಲಿ ಎರಡನೇ ಬಾರಿಗೆ ಮರು ಆಯ್ಕೆ.

1999- ಮೊದಲ ಮಗಳಾದ ಮಲಿಯಾ ಒಬಾಮ ಜನನ. ಮೊದಲ ಮಗು ಪಡೆದ ಖುಷಿಯಲ್ಲಿ ತೇಲಾಡಿದ ಬರಾಕ್ ಒಬಾಮ ಹಾಗೂ ಮಿಷೆಲ್ ಒಬಾಮ.

ಕಹಿ, ನಂತರ ಸಿಹಿ

ಕಹಿ, ನಂತರ ಸಿಹಿ

2000- ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಗಾಗಿ ನಡೆದ ಚುನಾವಣೆಯಲ್ಲಿ ಈಲಿಯೊನಿಸ್ ಸೆನೆಟ್ ನಿಂದ ಸ್ಪರ್ಧಿಸಿದ್ದ ಒಬಾಮಗೆ ಸೋಲು.

2001- ದ್ವಿತೀಯ ಪುತ್ರಿ ಜನನ. ಮಗುವಿಗೆ ಸಶಾ ಎಂಬ ಹೆಸರನ್ನಿಟ್ಟ ಒಬಾಮ ದಂಪತಿ. ಇಬ್ಬರು ಮಕ್ಕಳೊಂದಿಗೆ ಸುಖೀ ಜೀವನ.

ರಾಜಕೀಯದಲ್ಲಿ ದಾಪುಗಾಲು

ರಾಜಕೀಯದಲ್ಲಿ ದಾಪುಗಾಲು

2002- ಈಲಿಯೊನಿಸ್ ಸೆನೆಟ್ ಗೆ ಮೂರನೇ ಬಾರಿ ಆಯ್ಕೆ. ರಾಜಕೀಯ ನಾಯಕ ಹಾಗೂ ನೇತಾರನಾಗಿ ಹೆಸರು ಮಾಡಿದ ಒಬಾಮ.

2008- ಡೆಮಾಕ್ರಟಿಕ್ ಪಕ್ಷದಿಂದ ಅಮೆರಿಕದ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿಗಾಗಿ ನಡೆದ ಮತದಾನದಲ್ಲಿ ವಿಜಯಿ. ಅಮೆರಿಕ ಅಧ್ಯಕ್ಷ ಪದವಿ ಅಭ್ಯರ್ಥಿಯಾಗಿ ಪಕ್ಷದಿಂದ ಘೋಷಣೆ.

ಜನಪ್ರಿಯತೆಯ ಸುಗ್ಗಿ

ಜನಪ್ರಿಯತೆಯ ಸುಗ್ಗಿ

2008- ಅಮೆರಿಕದ 44ನೇ ಅಧ್ಯಕ್ಷರಾಗಿ ಆಯ್ಕೆ. ಈ ಪದವಿಗೇರಿದ ಅಮೆರಿಕದ ಮೊಟ್ಟಮೊದಲ ಆಫ್ರಿಕಾ-ಅಮೇರಿಕನ್ ಎಂಬ ಹೆಗ್ಗಳಿಕೆ.

2009- ವಿಶ್ವ ಶಾಂತಿ ಪಾಲನೆಗಾಗಿ ಶ್ರಮಿಸಿದ ಹಿನ್ನೆಲೆಯಲ್ಲಿ ಪ್ರತಿಷ್ಠಿತ ನೋಬೆಲ್ ಪಾರಿತೋಷಕಕ್ಕೆ ಭಾಜನ.

2012- ಅಗಾಧ ಜನಪ್ರಿಯತೆ ಸಂಪಾದಿಸುವ ಮೂಲಕ, ನವೆಂಬರ್ 6ರಂದು ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಬರಾಕ್ ಒಬಾಮ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Out going president of America Barak obama's life story is an inspirational one.
Please Wait while comments are loading...