ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೀಕರ ಪ್ರವಾಹ: ಜಾರ್ಜಿಯಾ ರಸ್ತೆಯಲ್ಲಿ ಹುಲಿ, ಸಿಂಹ ಓಡಾಟ

|
Google Oneindia Kannada News

ಜಾರ್ಜಿಯಾ, ಜೂ. 15: ಜಾರ್ಜಿಯಾದಲ್ಲಿ ವ್ಯಾಪಕ ಪ್ರವಾಹ ಉಂಟಾಗಿದ್ದು ಮೃಗಾಲಯದಲ್ಲಿದ್ದ ಸಿಂಹ, ಹುಲಿ ಮತ್ತು ನೀರುಕುದುರೆಗಳು ತಪ್ಪಿಸಿಕೊಂಡಿವೆ. ಟಿಬಿಲಿಸಿ ನಗರದಾದ್ಯಂತ ಅಲೆದಾಡುತ್ತಿದ್ದು ಪ್ರವಾಹಕ್ಕೆ ಸಿಲುಕಿದ್ದ ನಾಗರಿಕರಿಗೆ ಪ್ರಾಣಿಗಳ ಭಯ ಉಂಟಾಗಿದೆ.

ಭೀಕರ ಪ್ರವಾಹಕ್ಕೆ 20 ಕ್ಕೂ ಅಧಿಕ ಜನ ಪ್ರಾಣ ತೆತ್ತಿದ್ದಾರೆ. ಪೊಲೀಸರು ಮತ್ತು ಸೈನಿಕರು ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದು, ಪ್ರಾಣಿಗಳನ್ನು ಕಂಡರೆ ಹತ್ಯೆ ಮಾಡಲಾಗುತ್ತಿದೆ. ಅಲ್ಲದೇ ಕೆಲ ಪ್ರಾಣಿಗಳನ್ನು ವಾಪಸ್ ಮೃಗಾಲಯಕ್ಕೆ ತಂದು ಬಿಡಲಾಗುತ್ತಿದೆ.[ಅಕಾಲಿಕ ಮಳೆಗೆ ಕಣಿವೆ ರಾಜ್ಯ ತತ್ತರ, ಯೋಧರೇ ರಕ್ಷಿಸಿ!]

zoo

ಪ್ರಾಣಿಗಳನ್ನು ಪತ್ತೆ ಮಾಡುವ ಕಾರ್ಯ ನಡೆದಿದೆ. ಮೃಗಾಲಯ ಸಂಪೂರ್ಣ ನಾಶವಾಗಿದೆ . ಇದುವರೆಗೆ 20 ತೋಳಗಳು, ಎಂಟು ಸಿಂಹ, ಹುಲಿ, ನರಿಗಳು ಮತ್ತು ಚಿರತೆಗಳನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಪೆಂಗ್ವಿನ್‌ ಮತ್ತಿ ನೀರಾನೆಗಳನ್ನು ರಕ್ಷಣೆ ಮಾಡಲಲು ಸಾಧ್ಯವಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.[ಜಮ್ಮುವಿನ ಮಳೆ ಆರ್ಭಟದ ಚಿತ್ರಗಳು]

ಪ್ರವಾಹಕ್ಕೆ ಸಿಲುಕಿ ತಪ್ಪಿಸಿಕೊಂಡವರು ಒಂದು ಕಡೆ, ಮೃಗಾಲಯದಿಂದ ಹೊರಬಿದ್ದ ಕಾಡುಪ್ರಾಣಿಗಳ ಭಯ ಇನ್ನೊಂದು ಕಡೆ. ಒಟ್ಟಿನಲ್ಲಿ ನಾಗರಿಕರ ರಕ್ಷಣಾ ಕಾರ್ಯಾಚರಣೆ ನಡೆಸಲು ಅಡ್ಡಿ ಎದುರಾಗಿದೆ.

ಜಾರ್ಜಿಯಾ ಎಲ್ಲಿದೆ?
ಏಷ್ಯಾ ಮತ್ತು ಯುರೋಪ್ ಖಂಡಗಳನ್ನು ಸಂಧಿಸುವಲ್ಲಿ ಜಾರ್ಜಿಯಾ ಇದೆ. ಸೋವಿಯತ್ ಆಡಳಿತ ಇಲ್ಲಿದ್ದು ಕೆಲ ಸಮಯದ ಹಿಂದೆ ಕ್ರಿಶ್ಚಿಯನ್ನರ ಮೇಲೆ ಮತ್ತು ಪ್ರಾರ್ಥನಾ ಮಂದಿರಗಳ ಮೇಲೆ ಕಮ್ಯೂನಿಸ್ಟರು ದಾಳಿ ಮಾಡಿದ್ದರು.

English summary
Residents of Tbilisi, Georgia, were warned to stay off the streets, lest they encounter one of the lions, tigers, bears or other beasts set free from the city zoo after floodwaters devastated the center of the capital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X