ಎಬೋಲಾ ಮಾರಿಗೆ ಅಮೆರಿಕಾದಲ್ಲಿ ಮೊದಲ ಬಲಿ
ಡಲ್ಲಾಸ್, ಅ. 9: ಮಾರಕ ಕಾಯಿಲೆ ಎಬೋಲಾಕ್ಕೆ ಅಮೆರಿಕಾದಲ್ಲಿ ಮೊದಲ ಬಲಿಯಾಗಿದೆ. ಆಫ್ರಿಕಾ ಖಂಡದ ಲಿಬೇರಿಯಾ ಮೂಲದ ಥಾಮಸ್ ಏರಿಕ್ ಡುಂಕನ್ ಎಬೋಲಾ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಡಲ್ಲಾಸ್ ಆಸ್ಪತ್ರೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದೊಂದು ದುರ್ದೈವದ ಸಂಗತಿಯಾಗಿದ್ದು ಬುಧವಾರ ಬೆಳಗಿನ ಜಾವ ಏರಿಕ್ ಡುಂಕನ್ ಮೃತಪಟ್ಟಿದ್ದಾರೆ. ಸೆಪ್ಟೆಂಬರ್ 20ರಂದು ಲಿಬೇರಿಯಾದಿಂದ ಟೆಕ್ಸಾಸ್‌ಗೆ ಆಗಮಿಸಿದ್ದ ಡುಂಕನ್ ಅವರಿಗೆ ಸಣ್ಣ ಪ್ರಮಾಣದ ಜ್ವರವಿತ್ತು. ಆಸ್ಪತ್ರೆಗೆ ದಾಖಲಾದ ಅವರಿಗೆ ಔಷಧ ನೀಡಿ ಕಳುಹಿಸಲಾಗಿತ್ತು ಎಂದು ಆಸ್ಪತ್ರೆ ವಕ್ತಾರ ವೆಂಡಲ್ ವಾಟ್ಸನ್ ತಿಳಿಸಿದ್ದಾರೆ.[ಎಬೋಲಾ ಆರ್ಭಟ ಹತ್ತಿಕ್ಕಲು ಸಾಧ್ಯವಾಗುತ್ತಿಲ್ಲ: ವಿಶ್ವಸಂಸ್ಥೆ]

ಆದರೆ ರೋಗ ಗುಣಮುಖವಾಗದೆ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದು. ನಂತರ ಪರೀಕ್ಷಿಸಿದಾಗ ಎಬೋಲಾ ಕಾಯಿಲೆ ಲಕ್ಷಣಗಳಿಂದ ಬಳಲುತ್ತಿದ್ದುದು ಕಂಡು ಬಂತು. ಪಶ್ಚಿಮ ಆಫ್ರಿಕಾವನ್ನು ಕಂಗೆಡಿಸಿ ಕೆಲ ದಿನಗಳ ಹಿಂದಷ್ಟೇ ಅನೇಕ ಜನರನ್ನು ಬಲಿಪಡೆದ ಎಬೋಲಾ ಡಂಕನ್ ಅವರಿಗೂ ತಗಲಿತ್ತು ಮಾಹಿತಿ ನೀಡಿದ್ದಾರೆ.
ಕಳೆದ ಮಾರ್ಚ್ ನಿಂದ ಇಲ್ಲಿಯವರೆಗೆ ಆಫ್ರಿಕಾ ಖಂಡದ ಲಿಬೇರಿಯಾ, ಸಿರಿಯಾ, ಮತ್ತು ಗುನೇಷಿಯಾನದಲ್ಲಿ ಸುಮಾರು 3,400 ಜನ ಎಬೋಲಾ ಮಾರಿಗೆ ಬಲಿಯಾಗಿದ್ದಾರೆ. ಅಲ್ಲಿ ವಾಸಿಸುವುದಕ್ಕೆ ಹೆದರಿ ಕೆಲವರು ಪಶ್ಚಿಮ ಆಫ್ರಿಕಾದಿಂದ ಅಮೆರಿಕಾಕ್ಕೆ ವಲಸೆ ಬಂದಿದ್ದಾರೆ. ಆದರೆ ನಿರ್ದಿಷ್ಟವಾಗಿ ಎಬೋಲಾ ಗುಣಲಕ್ಷಣದಲ್ಲಿ ಮೊದಲ ಸಾವು ಇದಾಗಿದೆ ಎಂದು ವಿಶ್ವ ಸಂಸ್ಥೆಯ ಆರೋಗ್ಯ ಸಮತಿ ವರದಿ ಹೇಳಿದೆ.[ಎಬೋಲಾ ವೈರಾಣು ಭೀತಿ 'ಸೆಕ್ಸ್'ಗೂ ಕೊಕ್ಕೆ]
ಆದರೆ ಸಾವೀಗೀಡಾದ ಡಂಕನ್ ಎಬೋಲಾ ಕಾಯಿಲೆಗೆ ಒಳಗಾದವರ ಸಂಪರ್ಕ ಪಡೆದಿರಲಿಲ್ಲ. ಆತ ವಿಮಾನ ನಿಲ್ದಾಣದಿಂದ ನೇರವಾಗಿ ಆಗಮಿಸಿದ್ದ. ಆದರೂ ಆತನಿಗೆ ರೋಗ ಹೇಗೆ ತಗುಲಿತು ? ಎಂಬ ಪ್ರಶ್ನೆ ಮೂಡಿದೆ ಎಂದು ಹೇಳಿದೆ.
ಮೃತಪಟ್ಟ ಡಂಕನ್ ಸಂಪರ್ಕದಲ್ಲಿದ ಎಲ್ಲರನ್ನು 21ದಿನಗಳ ಕಾಲ ವಿವಿಧ ಪರೀಕ್ಷೆಗೆ ಒಳಪಡಿಸಲಾಗುವುದು. ಮಾರಕ ಕಾಯಿಲೆ ದೇಶದೊಳಕ್ಕೆ ಬಂದಿದ್ದರೆ ಬೇರು ಸಮೇತ ಕಿತ್ತು ಹಾಕಲಾಗುವುದು ಎಂದು ಅಮೆರಿಕದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications