ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಲ್ಲಿ ಮೊದಲ ಮಂಕಿಪಾಕ್ಸ್‌ ಪತ್ತೆ: ಕೆನಡಾಕ್ಕೆ ಪ್ರಯಾಣಿಸಿದ್ದ ಸೋಂಕಿತ

|
Google Oneindia Kannada News

ಮಾಂಟ್ರಿಯಲ್ ಮೇ 19: ಯುಎಸ್‌ನಲ್ಲಿ ಮಂಕಿಪಾಕ್ಸ್‌ನ ಮೊದಲ ಪ್ರಕರಣ ದಾಖಲಾಗಿದ್ದು ಸೋಂಕಿತ ವ್ಯಕ್ತಿ ಇತ್ತೀಚೆಗೆ ಕೆನಡಾಕ್ಕೆ ಪ್ರಯಾಣಿಸಿದ್ದರು ಎಂದು ತಿಳಿದು ಬಂದಿದೆ. ಉತ್ತರ ಅಮೆರಿಕಾ ಮತ್ತು ಯುರೋಪ್‌ನ ಆರೋಗ್ಯ ಅಧಿಕಾರಿಗಳು ಮೇ ತಿಂಗಳ ಆರಂಭದಿಂದ ಡಜನ್‌ಗಟ್ಟಲೆ ಶಂಕಿತ ಅಥವಾ ದೃಡಪಟ್ಟ ಮಂಕಿಪಾಕ್ಸ್ ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ. ಆಫ್ರಿಕಾದ ಕೆಲವು ಭಾಗಗಳಲ್ಲಿ ಈ ರೋಗ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಮೇ 6 ರಿಂದ ಬ್ರಿಟನ್ ಒಂಬತ್ತು ಪ್ರಕರಣಗಳನ್ನು ದೃಢಪಡಿಸಿದೆ ಮತ್ತು ಅಮೆರಿಕಾದಲ್ಲಿ ಬುಧವಾರ ಮೊದಲ ಮಂಕಿಪಾಕ್ಸ್‌ ಪ್ರಕರಣ ದಾಖಲಾಗಿದೆ. ಯುಎಸ್‌ನ ಪೂರ್ವ ರಾಜ್ಯವಾದ ಮ್ಯಾಸಚೂಸೆಟ್ಸ್‌ನ ಸೋಂಕಿತ ವ್ಯಕ್ತಿ ಕೆನಡಾಕ್ಕೆ ಭೇಟಿ ನೀಡಿದ್ದರು ಎಂದು ತಿಳಿದು ಬಂದಿದೆ. ಬಳಿಕ ಇವರಲ್ಲಿ ಮಂಕಿಪಾಕ್ಸ್‌ ವೈರಸ್‌ ಪತ್ತೆಯಾಗಿದೆ. ಹೀಗಾಗಿ ಮಂಕಿಪಾಕ್ಸ್ ಭೀತಿ ಭಾರತಕ್ಕೂ ಶುರು ಮಾಡಿದೆ. ಸ್ಪೇನ್ ಮತ್ತು ಪೋರ್ಚುಗಲ್‌ನಲ್ಲಿ 40 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳನ್ನು ಪತ್ತೆಯಾಗಿದೆ. ಮಂಕಿಪಾಕ್ಸ್‌ನ ಶಂಕಿತ ಪ್ರಕರಣಗಳನ್ನು ತನಿಖೆ ಮಾಡಲಾಗುತ್ತಿದೆ.

ಯುಕೆಯಲ್ಲಿ ಮಂಕಿಪಾಕ್ಸ್‌ನ 2 ಪ್ರಕರಣ ಪತ್ತೆ: ಈ ರೋಗದ ಬಗ್ಗೆ ಇಲ್ಲಿದೆ ವಿವರಯುಕೆಯಲ್ಲಿ ಮಂಕಿಪಾಕ್ಸ್‌ನ 2 ಪ್ರಕರಣ ಪತ್ತೆ: ಈ ರೋಗದ ಬಗ್ಗೆ ಇಲ್ಲಿದೆ ವಿವರ

ಬ್ರಿಟನ್‌ನಲ್ಲಿ ಈ ವೈರಸ್‌ ಪತ್ತೆಯಾಗಿದೆ. ನೈಜೀರಿಯಾ ಪ್ರವಾಸ ಮುಗಿಸಿ ವಾಪಸಾದ ವ್ಯಕ್ತಿಗೆ ಮಂಕಿ ಪಾಕ್ಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. UK ಯ ಆರೋಗ್ಯ ಸಂರಕ್ಷಣಾ ಸಂಸ್ಥೆ ಇದನ್ನು ವೈರಲ್ ಸೋಂಕು ಎಂದು ವಿವರಿಸಿದೆ. ಇದು ಜನರ ನಡುವೆ ಸುಲಭವಾಗಿ ಹರಡುವುದಿಲ್ಲ, ಆದರೆ ವೈರಸ್ ಇಲಿಗಳಂತಹ ಸೋಂಕಿತ ಜೀವಿಗಳಿಂದ ಮನುಷ್ಯರಿಗೆ ಹರಡುತ್ತದೆ ಎನ್ನಲಾಗುತ್ತದೆ. ಮಂಕಿಪಾಕ್ಸ್ ಅಪರೂಪದ ಕಾಯಿಲೆಯಾಗಿದ್ದು, ಇದು ಮಂಕಿಪಾಕ್ಸ್ ವೈರಸ್ ಸೋಂಕಿನಿಂದ ಉಂಟಾಗುತ್ತದೆ.

First Monkey Pox Detection in America: Infected Travelled to Canada

ಬಿರುಕು ಬಿಟ್ಟ ಚರ್ಮ, ಉಸಿರಾಟದ ಪ್ರದೇಶ, ಕಣ್ಣು, ಮೂಗು ಅಥವಾ ಬಾಯಿಯ ಮೂಲಕ ವೈರಸ್ ದೇಹವನ್ನು ಪ್ರವೇಶಿಸಬಹುದು. ಅಷ್ಟೇ ಅಲ್ಲ, ಹಾಸಿಗೆ ಮತ್ತು ಬಟ್ಟೆಯಂತಹ ಕಲುಷಿತವಾಗಿರುವ ವಸ್ತುಗಳ ಸಂಪರ್ಕದ ಮೂಲಕವೂ ವೈರಸ್ ಹರಡುತ್ತದೆ. ಹಾಸಿಗೆ ಮತ್ತು ಬಟ್ಟೆಯಂತಹ ಕಲುಷಿತವಾಗಿರುವ ವಸ್ತುಗಳ ಸಂಪರ್ಕದ ಮೂಲಕವೂ, ಪ್ರಾಣಿಗಳಿಂದಲೂ ಹರಡಬಹುದು. ಇದರಿಂದ ಬಳಲುತ್ತಿರುವ ವ್ಯಕ್ತಿ ಜ್ವರದ ಲಕ್ಷಣಗಳನ್ನು ಹೊಂದಿರುತ್ತಾನೆ. ಹೆಚ್ಚಿನ ಜನರು ವಾರಗಳಲ್ಲಿ ಚೇತರಿಸಿಕೊಳ್ಳುತ್ತಾರೆ, ಆದರೆ ಪರಿಸ್ಥಿತಿಯು ಹದಗೆಡಬಹುದು. ಸಿಡಿಸಿ ಪ್ರಕಾರ, ಮಂಕಿಪಾಕ್ಸ್ ಅನ್ನು ಮೊದಲು 1958 ರಲ್ಲಿ ಕಂಡುಹಿಡಿಯಲಾಯಿತು.

First Monkey Pox Detection in America: Infected Travelled to Canada

ಸೋಂಕು ತಗುಲಿದ ಬಳಿಕ 1 ರಿಂದ 3 ದಿನಗಳಲ್ಲಿ ದೇಹದಲ್ಲಿ ರಾಶಸ್ ಆಗುತ್ತವೆ. ಇದು ಮುಖ, ದೇಹದ ಇತರ ಭಾಗಗಳಿಗೆ ಹರಡುತ್ತದೆ. ಗಾಯಗಳು ಗಟ್ಟಿಯಾಗುತ್ತವೆ ಮತ್ತು ಅವುಗಳಲ್ಲಿ ನೋವು ಇರುತ್ತದೆ. ರೋಗವು ಸಾಮಾನ್ಯವಾಗಿ 2 ರಿಂದ 4 ವಾರಗಳವರೆಗೆ ಇರುತ್ತದೆ. ವೈರಸ್ ಬೆನ್ನು ನೋವು, ಜ್ವರ, ತಲೆನೋವು, ಸ್ನಾಯು ನೋವು, ಊದಿಕೊಂಡ ದುಗ್ಧರಸ ಗ್ರಂಥಿಗಳು, ಶೀತ ಮತ್ತು ಆಯಾಸವನ್ನು ಉಂಟುಮಾಡಬಹುದು. ಚಿಕನ್‌ಪಾಕ್ಸ್‌ ತರಹದ ದದ್ದು ದೇಹದಾದ್ಯಂತ ಹರಡುತ್ತದೆ. ಇದು ಮುಖದ ಮೇಲೆ ಪ್ರಾರಂಭವಾಗುತ್ತದೆ.

English summary
First case of Monkeypox has been registered in the US, and it is learned that the infected person has recently traveled to Canada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X