ಡೊನಾಲ್ಡ್ ಟ್ರಂಪ್ ಒಡೆತನದ ಟ್ರಂಪ್ ಟವರ್ ನಲ್ಲಿ ಬೆಂಕಿ ಅವಘಡ

Posted By:
Subscribe to Oneindia Kannada

ನ್ಯೂಯಾರ್ಕ್‌, ಜನವರಿ 08: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಐಶಾರಾಮಿ ಬಹುಮಹಡಿ ಕಟ್ಟಡ ಟ್ರಂಫ್ ಟವರ್‌ನಲ್ಲಿ ಸೋಮವಾರ ಬೆಳಿಗ್ಗೆ ಬೆಂಕಿ ಹೊತ್ತಿಕೊಂಡಿದ್ದು, ಯಾವುದೇ ಸಾವು-ನೋವು ವರದಿಯಾಗಿಲ್ಲ.

ಬಟಾಬಯಲಾಯ್ತು ಡೊನಾಲ್ಡ್ ಟ್ರಂಪ್ ಎಂಬ ಆವೇಶದ ಕಿಡಿಯ ಗುಟ್ಟು!

ನ್ಯೂಯಾರ್ಕ್‌ ನಗರದಲ್ಲಿರುವ 58 ಅಂತಸ್ತುಗಳ ಐಶಾರಾಮಿ ಬಹುಮಹಡಿ ಕಟ್ಟಡ ಟ್ರಂಪ್ ಟವರ್ ನ ಮೇಲಿನ ಮಹಡಿಗಳಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ, ಆದರೆ ಜೀವ ಹಾನಿ ಆಗಿಲ್ಲ. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ.

Fire accident in Trump Tower

ಟ್ರಂಪ್ ಟವರ್‌ನಲ್ಲಿ ಡೊನಾಲ್ಡ್ ಟ್ರಂಪ್ ಅವರ ನಿವಾಸ, ಅವರ ರಿಯಲ್ ಎಸ್ಟೇಟ್ ಉದ್ಯಮದ ಕೇಂದ್ರ ಕಚೇರಿ ಸೇರಿದಂತೆ ಹಲವು ಅಂತರರಾಷ್ಟ್ರೀಯ ಸೆಲೆಬ್ರಿಟಿಗಳ ನಿವಾಸ, ಜನಪ್ರಿಯ ಕಂಪೆನಿಗಳ ಕೇಂದ್ರ ಕಚೇರಿಗಳು, ಮಾಲ್‌ಗಳು, ಚಿತ್ರಮಂದಿರ ಎಲ್ಲವೂ ಇವೆ.

ಬೆಂಕಿ ಅವಘಡ ಸಂಭವಿಸಿದಾಗ ಡೊನಾಲ್ಡ್ ಟ್ರಂಪ್ ಅವರು ವಾಷಿಂಗ್ಟನ್‌ನ ಶ್ವೇತಭವನದಲ್ಲಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
America President Donald Trump's Trump Tower had fire accident today in the morning. In the time of fire accident Donald Trump is in Washington. No one get killed or injured in the accident.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ