Get Updates
Get notified of breaking news, exclusive insights, and must-see stories!

60 ಸೆಕೆಂಡ್ ಗಳಲ್ಲಿ 7 ಬರ್ಗರ್ ತಿಂದು ಗಿನ್ನಿಸ್ ದಾಖಲೆ ಮಾಡಿದ!

ಸ್ಪರ್ಧೆಯ ನಿಯಮಗಳನುಸಾರ, ಸ್ಪರ್ಧಾಳು ಒಬ್ಬರಿಗೆ ಒಂದು ನಿರ್ದಿಷ್ಟ ಸಮಯದಲ್ಲಿ ಕೇವಲ ಒಂದು ಬರ್ಗರ್ ಮಾತ್ರ ತಿನ್ನುವ ಅವಕಾಶ ನೀಡಲಾಗಿತ್ತು. ಬರ್ಗರ್ ತಿನ್ನುವಾಗ ಎರಡೂ ಕೈಗಳನ್ನು ಉಪಯೋಗಿಸುವಂತಿರಲಿಲ್ಲ.

ಸಿಂಗಾಪುರ, ಏಪ್ರಿಲ್ 1: ಫಿಲಿಪ್ಪೀನ್ಸ್ ನಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಬರ್ಗರ್ ತಿನ್ನುವ ಸ್ಪರ್ಧೆಯೊಂದರಲ್ಲಿ ಭಾಗವಹಿಸಿದ್ದ 24 ವರ್ಷದ ಫಿಲಿಪ್ಪಿನೋಸ್ ಕೆಲ್ವಿನ್ ಎಂಬಾತ ಒಂದು ನಿಮಿಷದಲ್ಲಿ 7 ದೊಡ್ಡ ಬರ್ಗರ್ ಗಳನ್ನು ತಿಂದು ಗಿನ್ನಿಸ್ ದಾಖಲೆಗೆ ಭಾಜನವಾಗಿದ್ದಾನೆ. ಈ ತಿಂದ ಪ್ರತಿಯೊಂದು ಬರ್ಗರ್ ಕೂಡ 107 ಗ್ರಾಂನಷ್ಟು ತೂಕವಿತ್ತು ಎಂದು ಹೇಳಲಾಗಿದೆ.

ಸ್ಪರ್ಧೆಯ ನಿಯಮಗಳನುಸಾರ, ಸ್ಪರ್ಧಾಳು ಒಬ್ಬರಿಗೆ ಒಂದು ನಿರ್ದಿಷ್ಟ ಸಮಯದಲ್ಲಿ ಕೇವಲ ಒಂದು ಬರ್ಗರ್ ಮಾತ್ರ ತಿನ್ನುವ ಅವಕಾಶ ನೀಡಲಾಗಿತ್ತು. ಬರ್ಗರ್ ತಿನ್ನುವಾಗ ಎರಡೂ ಕೈಗಳನ್ನು ಉಪಯೋಗಿಸುವಂತಿರಲಿಲ್ಲ.

Filipino man sets Guinness record for most hamburgers eaten in one minute

ಕೇವಲ ಬಲಗೈ ಅಥವಾ ಎಡಗೈನಲ್ಲಿ ಮಾತ್ರ ಬರ್ಗರ್ ಹಿಡಿದು ತಿನ್ನಬೇಕಿತ್ತು. ಮತ್ತೊಂದು ಕೈಯಲ್ಲಿ ನೀರು ಅಥವಾ ಪಾನೀಯ ತುಂಬಿದ ಲೋಟ ಹಿಡಿಯಬಹುದಾಗಿತ್ತು.

ಇನ್ನು, ಬರ್ಗರ್ ಮೇಲೆ ಟೊಮ್ಯಾಟೊ ಕೆಚಪ್, ಚೀಸ್ ಗಳಂಥ ಯಾವುದಾದರೂ ಒಂದು ಲೇಪನವನ್ನು ಹಚ್ಚಲು ಮಾತ್ರ ಅವಕಾಶವಿತ್ತು.

ಈ ಸ್ಪರ್ಧೆಯಲ್ಲಿ ಸುಮಾರು ಸಾಕಷ್ಟು ಸ್ಪರ್ಧಿಗಳು ಬಂದಿದ್ದರಾದರೂ, ಸ್ಪರ್ಧೆ ಆರಂಭವಾದ 15ರಿಂದ 30 ಸೆಕೆಂಡ್ ಗಳಲ್ಲಿ ಹಲವಾರು ಜನರು ಸ್ಪರ್ಧೆಯಿಂದ ಹಿಂದಕ್ಕೆ ಸರಿದರು. ಕೊನೆಯ ಕ್ಷಣಗಳಲ್ಲಿ ಉಳಿದವರು ಫಿಲಿಪ್ಪಿನೋಸ್ ಹಾಗೂ ರಿಕಾರ್ಡೋ ಫ್ರಾನ್ಸಿಸ್ಕೋ. ಈ ಇಬ್ಬರಲ್ಲಿ ಕೊನೆಗೆ ಜಯ ಗಳಿಸಿದ ಫಿಲಿಪ್ಪಿಯಾನೋಸ್ ಜಯ ಗಳಿಸಿದರೆ, ರಿಕಾರ್ಡೋ ಅವರು, 5 ಬರ್ಗರ್ ತಿನ್ನುವ ಮೂಲಕ ರನ್ನರ್ ಆಪ್ ಆದರು.

ರನ್ನರ್ ಅಪ್ ಆಗಿದ್ದಕ್ಕೆ, ರಿಕಾರ್ಡೋ ಗೆ ನಿರಾಸೆ ಏನೂ ಆಗಿಲ್ಲ. ಕಳೆದ ವರ್ಷ ಅವರು, 12 ಇಂಚು ಪಿಜ್ಜಾವನ್ನು 60 ಸೆಕೆಂಡ್ ಗಳಲ್ಲಿ ತಿಂದು ಬರೆದ ದಾಖಲೆ ಈಗಲೂ ಅವರ ಹೆಸರಿನಲ್ಲೇ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+