• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಗ್ರರ ವಿರುದ್ಧ ಹೋರಾಟ: ಫ್ರಾನ್ಸಿಗೆ ಸಾಧ್ಯ, ಭಾರತಕ್ಕೆ ಸಾಧ್ಯವಿಲ್ಲವೇ?

By ವಿಕಾಸ್ ನಂಜಪ್ಪ
|

ಫ್ರಾನ್ಸಿನ ಪತ್ರಿಕೆ 'ಚಾರ್ಲಿ ಹೆಬ್ಡೂ' ಕಚೇರಿ ಮೇಲೆ ಕಲಾಶ್ನಿಕೋವ್ ಹಾಗೂ ರಾಕೆಟ್ ಲಾಂಚರ್ ಮೂಲಕ ಉಗ್ರರು ದಾಳಿ ನಡೆಸಿ ಕನಿಷ್ಠ 12 ಜನರನ್ನು ಕೊಂದಿದ್ದಾರೆ. ವಿವಾದಾತ್ಮಕ ವ್ಯಂಗಚಿತ್ರಗಳನ್ನು ಪ್ರಕಟಿಸುತ್ತಿದ್ದ ಚಾರ್ಲಿ ಹೆಬ್ಡೂ ವಿರುದ್ಧ ಇಸ್ಲಾಮಿಕ್ ಮೂಲಭೂತವಾದಿಗಳು ಅನೇಕ ಬಾರಿ ಕಿಡಿಕಾರಿದ್ದರು.

ಎರಡನೇ ಮಹಾಯುದ್ಧದ ನಂತರ ಫ್ರಾನ್ಸಿನ ಮೇಲೆ ನಡೆದ ಅತ್ಯಂತ ಬರ್ಬರ ದಾಳಿ ಇದಾಗಿದೆ. ಅದರೆ, ಉಗ್ರರ ವಿರುದ್ಧ ಫ್ರಾನ್ಸ್ ಸಿಡಿದೆದ್ದು ಸಮರ ಸಾರಿದೆ. ಭಯೋತ್ಪಾದನೆ ಸಹಿಸಿಕೊಂಡಿರುವ ದೇಶಗಳ ಪೈಕಿ ಭಾರತ 6ನೇ ಸ್ಥಾನದಲ್ಲಿದೆ. [ತಾನಾಗಿಯೇ ಪೊಲೀಸ್ ಠಾಣೆಗೆ ಬಂದು ಶರಣೆಂದ ಉಗ್ರ]

ಭಾರತದ ನೆಲದಲ್ಲೂ ಅನೇಕ ಬಾರಿ ದೊಡ್ಡ ಪ್ರಮಾಣದಲ್ಲಿ ವಿಧ್ವಂಸಕ ಕೃತ್ಯಗಳು ನಡೆದಿವೆ. 26/11, ಸಂಸತ್ತಿನ ಮೇಲೆ ದಾಳಿ ನಡೆದಿದೆ ಆದರೆ, ಉಗ್ರರ ವಿರುದ್ಧ ಪ್ರತೀಕಾರ ಹಾಗೂ ಪ್ರಕರಣದ ತನಿಖೆ ಮಾತ್ರ ಉತ್ತಮ ಮಾರ್ಗದಲ್ಲಿ ಸಾಗಿಲ್ಲ.

ಫ್ರಾನ್ಸಿನಲ್ಲಿ ಘಟನೆ ನಡೆದ 24 ಗಂಟೆಯೊಳಗೆ ಶಂಕಿತ ಗನ್ ಮ್ಯಾನ್ ಗಳ ಭಾವಚಿತ್ರವನ್ನು ರಿಲೀಸ್ ಮಾಡಿದ್ದಾರೆ. ಮೂರನೇ ವ್ಯಕ್ತಿಯನ್ನು ಬಂಧಿಸಲಾಗಿದೆ. ಉಗ್ರರ ವಿರುದ್ಧ ಹೋರಾಟಕ್ಕೆ ಅಲ್ಲಿನ ಸಾರ್ವಜನಿಕರಲ್ಲದೆ ಸರ್ಕಾರವೂ ಬದ್ಧವಾಗಿದೆ.

ಆದರೆ, ಇಲ್ಲಿ ಕಥೆಯೇ ಬೇರೆ. ಉದಾಹರಣೆಗೆ ಇತ್ತೀಚಿನ ಬೆಂಗಳೂರಿನ ಚರ್ಚ್ ಸ್ಟ್ರೀಟ್ ಸ್ಫೋಟವನ್ನೇ ತೆಗೆದುಕೊಳ್ಳಿ. ಪೊಲೀಸರಿಗೆ ತನಿಖೆ ಮುಂದುವರೆಸಲು ಸರಿಯಾದ ಮಾರ್ಗವೇ ಸಿಗುತ್ತಿಲ್ಲ. ಎನ್ ಐಎ ಹಾಗೂ ಸ್ಥಳೀಯ ಪೊಲೀಸರ ನಡುವಿನ ಗೊಂದಲದಿಂದ ರೆಡಿಯಾಗಿರುವ ಶಂಕಿತರ ಸ್ಕೆಚ್ ಗಳ ನಿಖರತೆ ಪರೀಕ್ಷಿಸಿಲ್ಲ. ಪಾಕಿಸ್ತಾನದ ಬೋಟ್ ಪ್ರಕರಣಕ್ಕೆ ಬಂದರೆ, ಮಾಧ್ಯಮ ಹಾಗೂ ರಾಜಕೀಯ ಪಂಗಡಗಳ ನಡುವಿನ ಭಿನ್ನಾಭಿಪ್ರಾಯದ ಸ್ಫೋಟವೇ ಎದ್ದುಕಾಣುತ್ತದೆ. ಅಸಲಿಗೆ ಈ ಆಪರೇಷನ್ ಬಗ್ಗೆ ಜನರು ಕೇಳುವ ಸಾಮಾನ್ಯ ಪ್ರಶ್ನೆಗೂ ಉತ್ತರ ಸಿಕ್ಕಿಲ್ಲ.

ಅಸಲಿಗೆ ಸಮಸ್ಯೆ ಇರುವುದೆಲ್ಲಿ?

ತನಿಖಾಧಿಕಾರಿಗಳನ್ನು ನಿಯಂತ್ರಿಸಲು ಯತ್ನಿಸುವ ರಾಜಕೀಯ ಇ‌ಚ್ಛಾಶಕ್ತಿಗಳು, ಉದ್ಯಮಿಗಳು, ಘಟನೆ ನಡೆದ ಮೇಲೆ ಯಾರು ತನಿಖೆ ಮಾಡಬೇಕು ಎಂಬ ಜಿಜ್ಞಾಸೆಯಲ್ಲೇ ಕಾಲದೂಡುವುದು, ಎನ್ ಐಎ ಅಥವಾ ಸ್ಥಳೀಯ ಪೊಲೀಸ್ ಹೀಗೆ ತಳಮಟ್ಟದಿಂದ ಸಮಸ್ಯೆ ಎಲ್ಲೆಡೆ ಗೋಚರಿಸುತ್ತದೆ. [ಮುಂಬೈ ದಾಳಿ ರುವಾರಿ ಹೆಡ್ಲಿಗೆ 35 ವರ್ಷ ಶಿಕ್ಷೆ]

ಯಾವ ಸಂಸ್ಥೆ ತನಿಖೆ ನಡೆಸಬೇಕು ಎಂಬುದು ನಿರ್ಧಾರವಾಗುವಷ್ಟರಲ್ಲಿ ಉಗ್ರರು ಘಟನೆ ನಡೆದ ನಗರದಿಂದ ಸುಲಭವಾಗಿ ಎಸ್ಕೇಪ್ ಆಗಿಬಿಟ್ಟಿರುತ್ತಾರೆ. ಜೊತೆಗೆ ಯಾವ ಗುಂಪು ಈ ಕೃತ್ಯ ಎಸಗಿದೆ. ಅದು ನಿಷೇಧಿತ ಗುಂಪೇ? ಅಲ್ಲವೇ? ಎಂಬುದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಾಗುತ್ತದೆ.

ನ್ಯೂಯಾರ್ಕ್ ದಾಳಿ ಸಂದರ್ಭದಲ್ಲಿ ಯುಎಸ್ ನಲ್ಲಿ ನಡೆಸಿದ ಕಾರ್ಯಚಾರಣೆ ಇಲ್ಲಿ ಉಲ್ಲೇಖಾರ್ಹ. ಬಾಂಬ್ ಇಟ್ಟವನನ್ನು ಟಾರ್ಗೆಟ್ ಮಾಡಿ ಅವನ ಪ್ರೊಫೈಲ್ ರಿಲೀಸ್ ಮಾಡಲಾಯಿತು ಇಲ್ಲಿನಂತೆ ಯಾವ ಸಂಘಟನೆಗೆ ಸೇರಿದವ ಎಂದು ಹುಡುಕಾಟ ನಡೆಸಲಿಲ್ಲ. ಇದರಿಂದ ಯುಎಸ್ ಕಾರ್ಯಾಚರಣೆ ಫಲನೀಡಿತು. ಆತ ಯಾವುದೇ ಸಂಘಟನೆಗೆ ಸೇರದೆ ಒಂಟಿ ತೋಳ(lone wolf) ನಾಗಿದ್ದ.

ಎನ್ ಐಎ ಏನು ಮಂಗಳದಿಂದ ಬಂದಿದೆಯೇ?

ಈ ರೀತಿ ರಾಷ್ಟ್ರೀಯ ತನಿಖಾ ದಳದ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ರಾಜ್ಯ ಪೊಲೀಸ್ ವಲಯದಲ್ಲಿ ಅಧಿಕಾರಿಗಳು ಎನ್ ಐಎ ಸಾಮರ್ಥ್ಯವನ್ನು ಪ್ರಶ್ನಿಸುತ್ತಿದ್ದಾರೆ. [ವ್ಯಂಗ್ಯಚಿತ್ರ ಪತ್ರಿಕಾ ಕಚೇರಿಯಲ್ಲಿ ಹತ್ಯಾಕಾಂಡ]

ಅವರೇನು ಮಂಗಳ ಗ್ರಹದಿಂದ ಉದುರಿದ್ದಾರಾ? ಅವರು ಕೂಡಾ ನಮ್ಮಂತೆ ಪೊಲೀಸರಲ್ಲವೇ? ಎಂಬ ಮಾತುಗಳು ಕೇಳಿಸುತ್ತಿದೆ. ಏಜೆನ್ಸಿಗಳ ನಡುವಿನ ಮತ್ಸರ, ಈರ್ಷ್ಯೆಗೆ ತನಿಖೆ ದಿಕ್ಕು ಅಯೋಮಯವಾಗುತ್ತಿರುವುದಂತೂ ನಿಜ.

ಎನ್ ಐಐ ಹಾಗೂ ರಾಜ್ಯ ಪೊಲೀಸರ ನಡುವೆ ಸಹಕಾರದ ಕೊರತೆ ಕಂಡು ಬಂದಿದೆ. ತನಿಖೆ ವಿಳಂಬಕ್ಕೆ ಇದು ಮುಖ್ಯ ಅಂಶ ಎನಿಸಿದೆ.

ತಜ್ಞರ ಕೊರತೆ

ವೈಜ್ಞಾನಿಕ ತಳಹದಿ ಮೇಲೆ ಭಯೋತ್ಪಾದಕರನ್ನು ಮಟ್ಟ ಹಾಕಲು ಬೇಕಾದ ಪರಿಣತರ ತಂಡ ನಮ್ಮಲಿಲ್ಲ. ಸೈಬರ್ ಕಣ್ಗಾವಲು, ಫೋರೆನ್ಸಿಕ್ ಹಾಗೂ ಡಿಕೋಡ್ ತಜ್ಞರ ಸಾಕಷ್ಟಿಲ್ಲ. ಹಲವು ಬಾರಿ ಖಾಸಗಿ ಸಂಸ್ಥೆಗಳ ನೆರವು ಪಡೆಯಲಾಗುತ್ತದೆ. [ಐಫೆಲ್ ಗೋಪುರದ ಮೇಲೆ ಉಗ್ರರ ಕಣ್ಣು]

ಒಂದು ಸಮೀಕ್ಷೆ ಪ್ರಕಾರ ಸುಮಾರು 500 ಎಥಿಕಲ್ ಹ್ಯಾಕರ್ಸ್ ಗಳನ್ನು ನೇಮಕ ಮಾಡಿಕೊಂಡು ಸೈಬರ್ ದಾಳಿ ನಿಯಂತ್ರಿಸಲು ಯತ್ನಿಸಲಾಗುತ್ತದೆ. ಆದರೆ, ಹ್ಯಾಕಿಂಗ್ ವಿಷಯ ಹಾಗಿರಲಿ, ಇಂಟರ್ನೆಟ್ ನಲ್ಲಿ ಜಿಹಾದಿಗಳು ಜಾಲ ಹರಡುತ್ತಿರುವ ವೇಗವನ್ನು ನಮ್ಮ ತನಿಖಾ ಸಂಸ್ಥೆ ಸರಿಗಟ್ಟಲು ಸದ್ಯಕ್ಕಂತೂ ಸಾಧ್ಯವಿಲ್ಲವಾಗಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಕಾರ

ಉಗ್ರರ ವಿರುದ್ಧದ ತನಿಖೆ ನಡೆಸುವಾಗ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಕಾರ ಅಗತ್ಯ. ಬೇರೆ ಬೇರೆ ರಾಜ್ಯಗಳ ಪೊಲೀಸರ ಜೊತೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಹೇಗೆ ಬಾಂಧವ್ಯ ಹೊಂದಿದೆ. ಆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಒಳ್ಳೆ ಮೈತ್ರಿ ಇದೆಯೇ? ಎಂಬುದು ಮುಖ್ಯವಾಗುತ್ತದೆ. [ಚರ್ಚ್ ಸ್ಟ್ರೀಟ್ ನಲ್ಲಿ ಬಾಂಬ್ ಇಟ್ಟವ ಬಿಹಾರದಲ್ಲಿ ಸೆರೆ]

ಯುಎಸ್ ಹಾಗೂ ಫ್ರಾನ್ಸ್ ನಲ್ಲಿ ದಾಳಿ ನಡೆದರೆ ಇಡೀ ದೇಶವೇ ಹಂತಕನ ಬಲಿ ಪಡೆಯುವ ತನಕ ಐಕ್ಯ ರಾಗ ಹಾಡುತ್ತಾ ಹೋರಾಡುತ್ತದೆ. ನಮ್ಮಲ್ಲಿ ಪರಸ್ಪರ ಒಮ್ಮತಕ್ಕೆ ಬರುವಷ್ಟರಲ್ಲಿ ಮತ್ತೊಂದೆಡೆ ದುರಂತ ಸಂಭವಿಸಿರುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India stands at number 6 when it comes to being hit by terror. While we have seen a spate of attacks on Indian soil over the past several years which includes an attack on Parliament and also 26/11, the picture when it comes to investigations is not a very good one.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more