ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚರ್ಚ್ ಸ್ಟ್ರೀಟ್ ನಲ್ಲಿ ಬಾಂಬ್ ಇಟ್ಟವ ಬಿಹಾರದಲ್ಲಿ ಸೆರೆ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜ.2: ನಗರದ ಚರ್ಚ್ ಸ್ಟ್ರೀಟ್ ನಲ್ಲಿ ಡಿ.28ರಂದು ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ತಂಡ ಶಂಕಿತ ವ್ಯಕ್ತಿಯೊಬ್ಬನನ್ನು ಬಿಹಾರದಲ್ಲಿ ಬಂಧಿಸಿದೆ. ಎನ್ ಐಎ ತಂಡದ ಅಧಿಕಾರಿಗಳು ಶಂಕಿತ ವ್ಯಕ್ತಿಯ ವಿಚಾರಣೆಯನ್ನು ಕೈಗೊಂಡಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಜೆಹನಾಬಾದ್ ಮೂಲದ ಶಂಕಿತ ವ್ಯಕ್ತಿಯ ವಿವರಗಳು ಇನ್ನೂ ಲಭ್ಯವಾಗಿಲ್ಲ. ಅದರೆ, ಎನ್ ಐಎ ತಂಡ ಚರ್ಚ್ ಸ್ಟ್ರೀಟ್ ಸ್ಫೋಟಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಿರುವ ಬಗ್ಗೆ ರಾಜ್ಯ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಬಲ್ಲ ಮೂಲಗಳ ಪ್ರಕಾರ ಬಂಧಿತ ವ್ಯಕ್ತಿಯ ಮೇಲೆ ಶಂಕೆ ಮೂಡಿದ್ದು, ವಿಚಾರಣೆ ಬಳಿಕವಷ್ಟೇ ಆರೋಪಿ ಎಂದು ಹೆಸರಿಸಬಹುದು ಎನ್ನಲಾಗಿದೆ. [ಬೆಂಗಳೂರಿನಲ್ಲಿ ಭೀತಿ ಹುಟ್ಟು ಹಾಕಿದ್ದು ಅಂಜುಮನ್]

ಬಿಹಾರದ ಮೇಲೆ ಕಣ್ಣು
ಬಿಹಾರದಲ್ಲಿ ನೆಲೆ ನಿಂತು ಉಗ್ರರ ಚಟುವಟಿಕೆಗಳನ್ನು ನಡೆಸುತ್ತಿರುವ ತಂಡವೇ ಚರ್ಚ್ ಸ್ಟ್ರೀಟ್ ನಲ್ಲೂ ಬಾಂಬ್ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ಪಾಟ್ನ, ಬೋಧ್ ಗಯಾ ಹಾಗೂ ಚೆನ್ನೈನ ರೈಲು ಸ್ಫೋಟಕ್ಕೆ ಕಾರಣವಾದ ತಂಡವೇ ಬಿಹಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಳಿವು ಸಿಕ್ಕಿದೆ. ಅದರೆ, ಇದೇ ತಂಡ ಚರ್ಚ್ ಸ್ಟ್ರೀಟ್ ದಾಳಿಗೆ ಕಾರಣ ಎಂದು ಹೇಳಲು ಎನ್ ಐಎ ತಂಡ ಈ ಸಮಯಕ್ಕೆ ಸಿದ್ಧವಿಲ್ಲ. ವಿಚಾರಣೆ ಬಳಿಕ ಸಂಪೂರ್ಣ ವಿವರ ಲಭ್ಯವಾಗಲಿದೆ. ಸದ್ಯಕ್ಕೆ ಬಿಹಾರದ ಮೇಲೆ ಕಣ್ಣು ನೆಟ್ಟಿದೆ. [ಚರ್ಚ್ ಸ್ಟ್ರೀಟ್ ದಾಳಿ ರುವಾರಿ: ಸಿಮಿ? ಅಲ್ ಉಮಾ?]

ಶಂಕಿತ ಉಗ್ರನ ರೇಖಾಚಿತ್ರ
ಶಂಕಿತ ಉಗ್ರನ ರೇಖಾಚಿತ್ರ ಸದ್ಯಕ್ಕೆ ಬಿಡುಗಡೆ ಮಾಡುತ್ತಿಲ್ಲ. ಬಿಹಾರದ ತಂಡದ ಸದಸ್ಯರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಸಾಂದರ್ಭಿಕ ಸಾಕ್ಷಿ, ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಯನ್ನು ಪರಿಗಣಿಸಿ ಮೂವರನ್ನು ಶಂಕಿತರ ಪಟ್ಟಿಗೆ ಸೇರಿಸಲಾಗಿದೆ. ಮೂವರ ರೇಖಾ ಚಿತ್ರಗಳನ್ನು ಬೆಂಗಳೂರಿನ ಪೊಲೀಸರು ಸಿದ್ಧಪಡಿಸಿದ್ದಾರೆ. [ಐಐಎಸ್ಸಿ ದಾಳಿ, ಚರ್ಚ್ ಸ್ಟ್ರೀಟ್ ಸ್ಫೋಟ ಕಾಕತಾಳೀಯ]

Bengaluru Church Street blast: 1 held in Bihar

ಅದರೆ, ಎನ್ ಐಎ ತಂಡದಿಂದ ಖಚಿತ ಮಾಹಿತಿ ಸಿಕ್ಕ ಮೇಲೆ ರೇಖಾ ಚಿತ್ರಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಬಿಳಿ ಬಣ್ಣದ ಜೆನ್ ಕಾರಿನಲ್ಲಿ ಮೂವರು ಬಂದಿದ್ದು ಓರ್ವ ಬಾಂಬ್ ಇದ್ದ ಪ್ಯಾಕೇಟ್ ಎಸೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಅಧಿಕಾರಿಗಳು ಒನ್ ಇಂಡಿಯಾ ಪ್ರತಿನಿಧಿಗೆ ತಿಳಿಸಿದ್ದಾರೆ.

ಖಚಿತ ಮಾಹಿತಿ ಸಿಕ್ಕಿಲ್ಲ
ಈ ಪ್ರಕರಣದ ತನಿಖೆ ನಡೆಸಲು ಬೇಕಾದ ಅಗತ್ಯ ಸುಳಿವುಗಳು ಸಿಕ್ಕಿದ್ದರೂ ಪ್ರಮುಖ ಸಾಕ್ಷಿಗಳ ಕೊರತೆ ಇದೆ. ಹೀಗಾಗಿ ಎನ್ ಐಎ ತಂಡ ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದು, ಎರಡೆರಡು ಬಾರಿ ಖಚಿತಪಡಿಸಿಕೊಂಡ ಮೇಲೆ ಮಾಹಿತಿ ಬಹಿರಂಗಪಡಿಸಲಿದ್ದಾರೆ. ವಾರಂಗಲ್ ಗೆ ತೆರಳಿದ್ದ ಸ್ಥಳೀಯ ಪೊಲೀಸರು ಬರಿಗೈಯಲ್ಲಿ ವಾಪಸ್ ಆಗಿದ್ದಾರೆ. [ಶಂಕಿತರ ರೇಖಾ ಚಿತ್ರ ಸಿದ್ಧ]

ಚೆನ್ನೈ ಪೊಲೀಸರು ಅಲ್ ಉಮಾ ಸಂಘಟನೆ ಮೇಲೆ ಇಟ್ಟ ಶಂಕೆಯೂ ಹುಸಿಯಾಗಿದೆ. ಯಾವುದೇ ಪ್ರಮುಖ ಸಂಘಟನೆಗಳ ನೆರವಿಲ್ಲದೆ ಈ ಕೃತ್ಯ ಎಸಗಿರುವ ಶಂಕೆಯೂ ಇದೆ.

English summary
The National Investigating Agency will question one person arrested by the Bihar police on the suspicion that he could have had a role to play in the Bengaluru Church Street blasts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X