ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಮಾರಿ ಎಬೋಲಾ ತಡೆಗೆ ಒಬಾಮಾ ಸೂತ್ರ

|
Google Oneindia Kannada News

ವಾಷಿಂಗ್ ಟನ್, ಅ. 16: ಮಹಾಮಾರಿ ಎಬೋಲಾ ವಿರುದ್ಧ ಹೋರಾಡಲು ಯುರೋಪಿನ ರಾಷ್ಟ್ರಗಳ ನಾಯಕರು ಒಂದಾಗಬೇಕು ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕರೆ ನೀಡಿದ್ದಾರೆ. ವಿಡಿಯೋ ಸಂವಾದವೊಂದರಲ್ಲಿ ಮಾತನಾಡಿದ ಒಬಾಮಾ, ಜರ್ಮನಿ, ಫ್ರಾನ್ಸ್, ಇಂಗ್ಲೆಂಡ್, ಇಟಲಿ ರಾಷ್ಟ್ರಗಳು ಈ ಬಗ್ಗೆ ಗಂಭೀರ ಚಿಂತನೆ ಮಾಡಬೇಕಿದೆ ಎಂದು ಹೇಳಿದ್ದಾರೆ.

ಪಶ್ಚಿಮ ಆಫ್ರಿಕಾದಲ್ಲಿ ಮಹಾಮಾರಿ ಅನೇಕರನ್ನು ಬಲಿ ತೆಗೆದುಕೊಂಡಿರುವುದು ದುರ್ದೈವ. ವಿಶ್ವಕ್ಕೆ ಇದು ಮಾರಕವಾಗುವಂತೆ ಗೋಚರವಾಗುತ್ತಿದೆ. ಹಾಗಾಗಿ ಎಲ್ಲ ದೇಶಗಳು ರೋಗ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.[ಎಬೋಲಾ ಮಾರಿಗೆ ಅಮೆರಿಕಾದಲ್ಲಿ ಮೊದಲ ಬಲಿ]

ಈ ಬಗ್ಗೆ ಗುರುವಾರ ಮಾಹಿತಿ ನೀಡಿದ ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಜೋಷ್ ಐರ್ನೆಸ್ಟ್, ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರತಿಯೊಬ್ಬರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಬೇಕಾಗಿದೆ. ಮಾರಕ ಕಾಯಿಲೆ ವೈರಸ್‌ ತಾಗಿರುವ ಶಂಕೆ ವ್ಯಕ್ತವಾದರೆ ಅಂಥವರನ್ನು ಸೂಕ್ತ ಚಿಕಿತ್ಸೆಗೆ ಗುರಿಪಡಿಸಬೇಕು. ಆಡಳಿತ ಮತ್ತು ಭದ್ರತೆಯಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

Fight against Ebola: Obama seeks greater commitment

ವಿಡಿಯೋ ಸಂವಾದ ಮುಕ್ತಾಯದ ನಂತರ ಒಂದೊಂದೇ ದೇಶಗಳು ಮುಂಜಾಗೃತಾ ಕ್ರಮ ತೆಗೆದುಕೊಳ್ಳಲು ಮುಂದಾಗಿವೆ. ರೋಗ ತಡೆ ಮತ್ತು ಜಾಗೃತಿಗೆ ಸಕಲ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದಾಗಿ ಫ್ರಾನ್ಸ್‌ ಘೋಷಿಸಿದೆ. ಪಶ್ಚಿಮ ಆಫ್ರಿಕಾ ಭಾಗದಿಂದ ಆಗಮಿಸುವವರನ್ನು ವಿಮಾನ ನಿಲ್ದಾಣದಲ್ಲೇ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಅಮೆರಿಕ ತಿಳಿಸಿದೆ.

ಅಲ್ಲದೇ ಒಬಾಮಾ ಜಪಾನ್ ಪ್ರಧಾನಿ ಶಿಂಜೋ ಅಬೇ ಜತೆಗೆ ದೂರವಾಣಿಯಲ್ಲಿ ಮಾತನಾಡಿದ್ದು ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ. ನ್ಯೂಯಾರ್ಕ್, ನ್ಯೂ ಜೆರ್ಸಿ, ವಾಷಿಂಗ್ ಟನ್, ಚಿಕಾಗೋ ಮತ್ತು ಅಟ್ಲಾಂಟಾ ವಿಮಾನ ನಿಲ್ದಾಣಗಳಲ್ಲಿ ರೋಗ ಪತ್ತೆ ತಪಾಸಣೆ ನಡೆಯುತ್ತಿದೆ.[ಎಬೋಲಾ ಆರ್ಭಟ ಹತ್ತಿಕ್ಕಲು ಸಾಧ್ಯವಾಗುತ್ತಿಲ್ಲ: ವಿಶ್ವಸಂಸ್ಥೆ]

ಮಾರಕ ಕಾಯಿಲೆಗೆ ಪ್ರಪಂಚದಾದ್ಯಂತ 8,900ಮ ಜನ ತುತ್ತಾಗಿದ್ದಾರೆ. ಲಿಬೇರಿಯಾ, ಸೀಯರಾ ಲಿಯೋನ್ ಮುಂತಾದ ದೇಶಗಳಲ್ಲಿ ರೋಗ ತನ್ನ ರೌದ್ರ ರೂಪ ತೋರಿಸಿ ಅನೇಕರ ಪ್ರಾಣ ಬಲಿಪಡೆದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಹೇಳಿದೆ.

English summary
US President Barack Obama has urged European leaders to make a greater commitment in the global fight against Ebola during a video conference with the leaders of Germany, France, Italy and Britain. The impact of the Ebola epidemic in West Africa was tragic but it also constituted a threat to international security, said the president.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X