ಬ್ರೆಜಿಲ್ : ಫೀಫಾ ವಿಶ್ವಕಪ್ 2014 ಟೂರ್ ಗೈಡ್

ಬೆಂಗಳೂರು, ಜೂ.4: ದಕ್ಷಿಣ ಅಮೆರಿಕ ಹಾಗೂ ಲ್ಯಾಟಿನ್ ಅಮೆರಿಕ ಪ್ರದೇಶದ ಅತಿ ದೊಡ್ಡ ರಾಷ್ಟ್ರ ಬ್ರೆಜಿಲ್ ನಲ್ಲಿ ಈಗ ಫುಟ್ಬಾಲ್ ವಿಶ್ವಕಪ್ ಸಂಭ್ರಮ ಮನೆ ಮಾಡಿದೆ. ಬ್ರೆಜಿಲ್ ನ 12 ನಗರಗಳಲ್ಲಿ ಕ್ರೀಡಾಂಗಣಗಳಲ್ಲಿ ಜೂ.12 ರಿಂದ ಜು.13 ರ ತನಕ ಫುಟ್ಬಾಲ್ ಪಂದ್ಯಾವಳಿಗಳು ನಡೆಯಲಿವೆ.

ಈ ಬಾರಿ ವಿಶ್ವಕಪ್ ಅತ್ಯಂತ ದುಬಾರಿಯ ಫುಟ್ಬಾಲ್ ಟೂರ್ನಮೆಂಟ್ ಎನಿಸಿದ್ದು ಇದರ ಜತೆಗೆ ಬಡತನದ ಕಪ್ಪು ಛಾಯೆ ಆವರಿಸಿಕೊಂಡಿದೆ.ವಿಶ್ವಕಪ್ ವಿರುದ್ಧ ಜನ ಹೋರಾಟ ನಡೆಸುತ್ತಿದ್ದು, ಪಂದ್ಯಾವಳಿಗಳಿಗೆ ಅಡ್ಡಿ ಪಡಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ.

'ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗ್ಯಾಕೆ ಮಲ್ಲಿಗೆ' ಎಂಬಂತೆ ಬಡತನ, ಹಸಿವೆಯ ನಡುವೆ ಸುಮಾರು 85,211 ಕೋಟಿ ರೂ ವೆಚ್ಚದ ಟೂರ್ನಿಯನ್ನು ನಡೆಸಲು ಫೀಫಾ ಸಿದ್ಧವಾಗಿದೆ. ಫೀಫಾ ಗೋ ಹೋಮ್ ಎಂಬ ನಿರಾಶ್ರಿತರ ಕೂಗಿನ ನಡುವೆ ವಿ ಆರ್ ಒನ್ ಎಂಬ ಗೀತೆ ಮೊಳಗುತ್ತಿದೆ. ಫೀಫಾ ವಿಶ್ವಕಪ್ 2014 ಟೂರ್ ಗೈಡ್ ಇಲ್ಲಿದೆ ನೋಟ್ ಮಾಡ್ಕೊಳ್ಳಿ...

FIFA World Cup 2014 Tournament Guide

* ವಿಶ್ವಕಪ್ ಪಂದ್ಯಗಳು ನಡೆಯುವ ದಿನಾಂಕ : ಜೂನ್ 12 ರಿಂದ ಜುಲೈ 13
* ಅತಿಥೇಯ ರಾಷ್ಟ್ರ: ಬ್ರೆಜಿಲ್, 1950 ರ ನಂತರ ಎರಡನೇ ಬಾರಿಗೆ ಈ ಅವಕಾಶ ಸಿಕ್ಕಿದೆ.
* 20ನೇ ಬಾರಿ ಟೂರ್ನಿ: 1950ರ ಮೊದಲ ವಿಶ್ವಕಪ್ ನಂತರ 20ನೇ ಬಾರಿಗೆ ಟೂರ್ನಿ ಆಯೋಜನೆಗೊಂಡಿದೆ.
* ಇದೇ ಮೊದಲು : ಇದೇ ಮೊದಲ ಬಾರಿಗೆ ಗೋಲ್ ಲೈನ್ ತಂತ್ರಜ್ಞಾನವನ್ನು ಫೀಫಾ ವಿಶ್ವಕಪ್ 2014ರಲ್ಲಿ ಬಳಸಲಾಗುತ್ತಿದೆ.
* ಅತಿ ಹೆಚ್ಚು ಕಪ್ ಎತ್ತಿದ ದೇಶ: ಬ್ರೆಜಿಲ್ 5 (1958, 1962, 1970, 1994, 2002)
* ಅತಿ ಹೆಚ್ಚು ಗೋಲು : ಬ್ರೆಜಿಲಿನ ರೋನಾಲ್ಡೋ 15(ಮೂರು ವಿಶ್ವಕಪ್ ಸೇರಿ)
* ತಂಡಗಳು : 32 ದೇಶಗಳು
* ಕ್ರೀಡಾಂಗಣಗಳು : 12 ನಗರದ 12 ಕ್ರೀಡಾಂಗಣ ರಿಯೋ ಡಿಜನೈರೋ, ಬೆಲೊ ಹೊರಿಜಾಂಟೆ, ಮನಾಸ್, ಬ್ರಾಸಿಲಿಯಾ, ಸಾವೊ ಪೊಲೊ, ಕೂರಿಟಿಬಾ, ಸಾಲ್ವಡರ್, ಕ್ಯೂಬಿಯಾ, ರೆಕಿಫೆ, ಪೊರ್ಟೋ ಅಲೆರ್ಗ್ರೆ, ಫೋಟಾಲೆಝಾ, ನಟಾಲ್
* ಆರಂಭಿಕ ಪಂದ್ಯ: ಜೂ.12: ಬ್ರೆಜಿಲ್ vs ಕ್ರೋವೆಷಿಯಾ
* ಕಳೆದ ಬಾರಿಯ ಚಾಂಪಿಯನ್ : ಸ್ಪೇನ್
* ಅಧಿಕೃತ ಮ್ಯಾಚ್ ಬಾಲ್ : ಅಡಿಡಾಸ್ ಸಂಸ್ಥೆ ತಯಾರಿಸಿರುವ 'ಅಡಿಡಾಸ್ ಬ್ರಸೂಕಾ' ಬ್ರಸೂಕಾ ಎಂದರೆ ಬ್ರೆಜಿಲಿಯನ್ ಎಂದರ್ಥ. ಬ್ರೆಜಿಲಿಯನ್ನರ ಜೀವನಶೈಲಿ, ಸಂಸ್ಕೃತಿ ಬಿಂಬಿಸುವ ಪದವನ್ನು ಚೆಂಡಿಗೆ ಇಡಲಾಗಿದೆ.
* ಅಧಿಕೃತ ಲಾಂಛನ : ಫುಲೆಕೋ..ಬ್ರೆಜಿಲ್ ಪೂರ್ವ ಭಾಗ ಆರ್ಮೆಡಿಲ್ಲೋ

* ಪ್ರಶಸ್ತಿಗಳು: ಫ್ಲೇರ್ ಪ್ಲೇ ಟ್ರೋಫಿ; ಚಿನ್ನ, ಬೆಳ್ಳಿ ಹಾಗೂ ಕಂಚಿನ ಬೂಟುಗಳು; ಚಿನ್ನ, ಬೆಳ್ಳಿ, ಕಂಚಿನ ಬಾಲುಗಳು; ಚಿನ್ನದ ಗ್ಲೌವ್ಸ್, ಉದಯೋನ್ಮುಖ ಆಟಗಾರ
* ಒಟ್ಟಾರೆ ಬಹುಮಾನದ ಮೊತ್ತ : 576 ಮಿಲಿಯನ್ ಡಾಲರ್
* ವಿಜೇತ ತಂಡ : 35 ಮಿಲಿಯನ್ ಯುಎಸ್ ಡಾಲರ್
* ರನ್ನರ್ ಅಪ್ : 25 ಮಿಲಿಯನ್ ಯುಎಸ್ ಡಾಲರ್
* ಮೂರನೇ ಸ್ಥಾನ : 22 ಮಿಲಿಯನ್ ಯುಎಸ್ ಡಾಲರ್
* ನಾಲ್ಕನೇ ಸ್ಥಾನ : 20 ಮಿಲಿಯನ್ ಯುಎಸ್ ಡಾಲರ್
* ಕ್ವಾಟರ್ ಫೈನಲ್ ನಲ್ಲಿ ಎಲಿಮಿನೇಟೆಡ್(4 ತಂಡಗಳು): 4 ಮಿಲಿಯನ್ ಯುಎಸ್ ಡಾಲರ್
* ರೌಂಡ್ 16 ನಲ್ಲಿ ಎಲಿಮಿನೇಟೆಡ್(8 ತಂಡಗಳು): 9 ಮಿಲಿಯನ್ ಯುಎಸ್ ಡಾಲರ್
* ಗ್ರೂಪ್ ಹಂತದಲ್ಲಿ ಎಲಿಮಿನೇಟೆಡ್ (16 ತಂಡಗಳು): 8 ಮಿಲಿಯನ್ ಯುಎಸ್ ಡಾಲರ್
* ಒಟ್ಟು 8 ಗುಂಪುಗಳು : ಪ್ರತಿ ಗುಂಪಿನ ಟಾಪ್ 2 ತಂಡಗಳು ನಾಕೌಟ್ (16ರ ಹಂತ) ತಲುಪಲಿವೆ.
* ಗುಂಪು ಎ : ಬ್ರೆಜಿಲ್, ಕ್ರೋವೆಷಿಯಾ, ಮೆಕ್ಸಿಕೋ, ಕೆಮರೂನ್
* ಗುಂಪು ಬಿ : ಸ್ಪೇನ್, ನೆದರ್ಲೆಂಡ್, ಚಿಲಿ, ಆಸ್ಟ್ರೇಲಿಯಾ
* ಗುಂಪು ಸಿ: ಕೊಲಂಬಿಯಾ, ಗ್ರೀಸ್, ಐವರಿ ಕೋಸ್ಟ್, ಜಪಾನ್
* ಗುಂಪು ಡಿ: ಉರುಗ್ವೆ, ಕೋಸ್ಟರೀಕಾ, ಇಂಗ್ಲೆಂಡ್, ಇಟಲಿ
* ಗುಂಪು ಈ: ಸ್ವಿಟ್ಜರ್ಲೆಂಡ್, ಈಕ್ವಡಾರ್, ಫ್ರಾನ್, ಹೊಂಡರಾಸ್
* ಗುಂಪು ಎಫ್ : ಅರ್ಜೆಂಟೀನಾ, ಬೊಸ್ನಿಯಾ ಹಾಗೂ ಹರ್ಜಗೊವಿನಾ, ಇರಾನ್, ನೈಜೀರಿಯಾ
* ಗುಂಪು ಜಿ : ಜರ್ಮನಿ, ಪೋರ್ಚುಗಲ್, ಘಾನಾ, ಯುಎಸ್ಎ
* ಗುಂಪು ಎಚ್ : ಬೆಲ್ಜಿಯಂ, ಅಲ್ಜೀರಿಯಾ, ರಷ್ಯಾ, ದಕ್ಷಿಣ ಕೊರಿಯಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+