Get Updates
Get notified of breaking news, exclusive insights, and must-see stories!

ಉಗ್ರರ ಮೇಲೆ ಪತ್ತೆದಾರಿಕೆ ಮಾಡಲು ಹೋಗಿ ಉಗ್ರನನ್ನೇ ಮದ್ವೆ ಆದಳು!

ಐಎಸ್ಐಎಸ್ ಉಗ್ರರ ಮೇಲೆ ಕಣ್ಣಿಡಲು, ಅವರ ಚಲನವಲನಗಳ ಬಗ್ಗೆ ಬೇಹುಗಾರಿಕೆ ನಡೆಸಲು 2015ರಲ್ಲಿ ಈಕೆಯನ್ನು ನೇಮಿಸಲಾಗಿತ್ತು.

ವಾಷಿಂಗ್ಟನ್, ಮೇ 3: ಆಕೆಯ ಹೆಸರು ಡೆನಿಯೆಲಾ ಗ್ರೀನ್. ಅಮೆರಿಕದ ಪ್ರತಿಷ್ಠಿತ ತನಿಖಾ ಸಂಸ್ಥೆಯಾದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ನಲ್ಲಿ (ಎಫ್ ಬಿಐ) ಭಾಷಾಂತರಕಾರ್ತಿ. ಆದರೀಗ, ಆಕೆ ಐಎಸ್ಐಎಸ್ ಉಗ್ರನೊಬ್ಬನ ಹೆಂಡತಿ!

ಐಎಸ್ಐಎಸ್ ಉಗ್ರರ ಮೇಲೆ ಕಣ್ಣಿಡಲು, ಅವರ ಚಲನವಲನಗಳ ಬಗ್ಗೆ ಬೇಹುಗಾರಿಕೆ ನಡೆಸಲು ಈಕೆಯನ್ನು ನೇಮಿಸಲಾಗಿತ್ತು. ಆದರೆ, ಈಕೆ ಆ ಕೆಲಸ ಮಾಡುತ್ತಲೇ ಐಎಸ್ಐಸ್ ಸಂಘಟನೆಗೆ ಸೇರಿಕೊಂಡಿದ್ದ ಜರ್ಮನಿ ಮೂಲದ ವ್ಯಕ್ತಿಯ ಮೇಲೆ ವ್ಯಾಮೋಹ ಬೆಳೆಸಿಕೊಂಡಳು. ಆತನಿಗೆ ಮನಸೋತು ಆತನನ್ನು ಮದುವೆಯಾದಳು!

FBI Translator Daniela Greene Married ISIS Fighter She Spied On

ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಆಕೆಯ ತಲಾಷ್ ನಲ್ಲಿದ್ದ ಎಫ್ ಬಿಐಗೆ ಈಗ ಆಕೆ ಐಎಸ್ ಐಎಸ್ ಉಗ್ರನನ್ನೇ ಮದುವೆಯಾಗಿರುವ ದಿಗ್ಭ್ರಾಂತಗೊಳಿಸುವ ಸುದ್ದಿ ಸಿಕ್ಕಿದೆ. ಇದೀಗ ಆತನೊಂದಿಗೆ ಆಕೆ ಸಿರಿಯಾದಲ್ಲಿ ನೆಲೆಸಿದ್ದಾಳೆಂದು ಎಫ್ ಬಿಐ ಹೇಳಿದೆ.

ಇದೆಲ್ಲಾ ಆಗಿದ್ದು, 2014ರಲ್ಲಿ. ಅದುವರೆಗೂ ಭಾಷಾಂತರಕಾರರಾಗಿದ್ದ ಡೆನಿಯೇಲಾ ಅವರನ್ನು ಐಎಸ್ಐಎಸ್ ಉಗ್ರರ ಮೇಲಿನ ಬೇಹುಗಾರಿಕೆಗೆ ನಿಯೋಜಿಸಲಾಯಿತು.

ಅಲ್ಲಿಂದ ಸುಮಾರು ತಿಂಗಳುಗಳ ಕಾಲ ಆಕೆ ಐಎಸ್ ಐಸ್ ನೆರಳಿರುವ ಹಲವಾರು ತಾಣಗಳಿಗೆ ತೆರಳಿ, ಅಲ್ಲಿಂದ ಹಲವಾರು ಕಡೆ ಸಂಚರಿಸಿ ಎಫ್ ಬಿಐಗೆ ಮಾಹಿತಿ ನೀಡುತ್ತಲೇ ಸಾಗಿದ್ದಳು. ಆದರೆ, 2014ರಲ್ಲಿಯೇ ಆಕೆ ನಾಪತ್ತೆಯಾಗಿದ್ದಳು.

2015ರಲ್ಲಿ ಡೆಟ್ರಾಯಿಟ್ ನಲ್ಲಿ ಇರುವ ಎಫ್ ಬಿಐ ಕಚೇರಿಗೆ ಸಂದೇಶವೊಂದನ್ನು ಕಳುಹಿಸಿದ್ದ ಆಕೆ, ಜರ್ಮನಿಗೆ ತೆರಳುತ್ತಿದ್ದು ಅಲ್ಲಿರುವ ತನ್ನ ಹೆತ್ತವರನ್ನು ನೋಡಿಕೊಂಡು ಬರುವುದಾಗಿ ತಿಳಿಸಿದ್ದಳು. ಎಫ್ ಬಿಐಗೆ ಆಕೆ ನೀಡಿದ ಕೊನೆಯ ಸಂದೇಶವದು. ಅಲ್ಲಿಂದ ಮುಂದಕ್ಕೆ ಆಕೆ ಎಲ್ಲಿ ಹೋದಳು, ಏನಾದಳು ಎಂಬ ಕಿಂಚಿತ್ತಾದ ಮಾಹಿತಿಯೂ ಲಭ್ಯವಾಗಿರಲಿಲ್ಲ.

ಈ ಬಗ್ಗೆ ಎಫ್ ಬಿಐ ಪ್ರತ್ಯೇಕವಾಗಿ ತನಿಖೆ ಕೈಗೊಂಡಿತು. ಆ ತನಿಖಾ ವರದಿಯ ಪ್ರಕಾರ, ಈಕೆ ಉಗ್ರರ ಚಲನವಲನಗಳನ್ನು ಗಮನಿಸುತ್ತಿದ್ದ ವೇಳೆ ಆಕೆಯ ಕಣ್ಣಿಗೆ ಬಿದ್ದಿದ್ದ ಡೆನ್ನಿಸ್ ಕಸ್ಪೆಟ್ ಎಂಬಾತನನ್ನು ವರಿಸಿದ್ದಾಳೆ. ವರ್ಷಗಳ ಹಿಂದೆಯೇ ಆತ ಐಎಸ್ಐಎಸ್ ಉಗ್ರರೊಂದಿಗೆ ಗುರುತಿಸಿಕೊಂಡಿದ್ದಾನೆ.

2015ರಲ್ಲಿ ಅಮೆರಿಕ ಸರ್ಕಾರ ಆತ ಉಗ್ರನೆಂದು ಘೋಷಿಸಿದೆ. ಆದರೆ, ಅದಕ್ಕೂ ಮುನ್ನವೇ ಡೇನಿಯೇಲಾ ಆತನನ್ನು ವರಿಸಿದ್ದಾಳೆ. ಗೂಢಾಚಾರಣಿಯಾಗಿ ಅದೊಮ್ಮೆ ಟರ್ಕಿಗೆ ಹೋಗಿದ್ದಾಗ ಆತನ ಸೌಂದರ್ಯಕ್ಕೆ ಮನ ಸೋತಿದ್ದಾಗಿ ಆಕೆ ತನ್ನ ಗೆಳೆತಿಯೊಬ್ಬಳ ಬಳಿ ಹೇಳಿಕೊಂಡಿರುವುದನ್ನೂ ಎಫ್ ಬಿಐ ಪತ್ತೆ ಹಚ್ಚಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+