ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್‌ಬುಕ್ ಒಳಜಗಳ, ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಿದ ಸಹ ಸಂಸ್ಥಾಪಕ

|
Google Oneindia Kannada News

ವಾಷಿಂಗ್ಟನ್ ,ಮೇ 10: ಸಾಮಾಜಿಕ ಜಾಲತಾಣ ದೈತ್ಯ ಕಂಪನಿ ಫೇಸ್‌ಬುಕ್‌ನ್ನು ಅಮೆರಿಕ ಸರ್ಕಾರ ಕೂಡಲೇ ನಿಯಂತ್ರಿಸಬೇಕಾದ ಅನಿವಾರ್ಯತೆ ಇದೆ ಎಂದು ಸಹ ಸಂಸ್ಥಾಪಕ ಕ್ರಿಸ್ ಹ್ಯೂಜಸ್ ಹೇಳಿದ್ದಾರೆ.

ಅಮೆರಿಕ ದೈನಿಕ ಒಂದರಲ್ಲಿ ವಿಸ್ತೃತ ಲೇಖನ ಬರೆದಿರುವ ಕ್ರಿಸ್ ಕೆಲವು ವರ್ಷಗಳ ಹಿಂದೆ ನಾವು ಆರಂಭಿಸಿದ ಫೇಸ್‌ಬುಕ್ ಈಗ ಉಳಿದಿಲ್ಲ, ಮಾರ್ಕ್ ಜುಕರ್ ಬರ್ಗ್ ಫೇಸ್‌ಬುಕ್ 35 ಲಕ್ಷ ಕೋಟಿ ರೂಗಳಿಗೂ ಅಧಿಕ ಬೆಲೆ ಬಾಳುತ್ತಿದೆ.

ಫೇಸ್‌ಬುಕ್, ವಾಟ್ಸಪ್, ಇನ್‌ಸ್ಟಾಗ್ರಾಂ ಮೂಲಕ ನೂರಾರು ಕೋಟಿ ಬಳಕೆದಾರರ ಮಾಹಿತಿಯನ್ನು ಫೇಸ್‌ಬುಕ್ ಸಂಸ್ಥೆ ಸಂಗ್ರಹಿಸುತ್ತಿದೆ. ಅಮೆರಿಕ ಹಾಗೂ ವಿಶ್ವದ ಅತಿ ಪ್ರಭಾವಿ ಕಂಪನಿಗಳ ಪಟ್ಟಿಯಲ್ಲಿ ಫೇಸ್‌ಬುಕ್ ಇದೆ.

Facebook co-founder urges american government to intervention

ಆದರೆ ಫೇಸ್‌ ಅಥವಾ ಮಾರ್ಕ್ಸ್ ಜುಕರ್ ಬರ್ಗ್‌ ಅಮೆರಿಕ ಸರ್ಕಾರಕ್ಕೆ ಉತ್ತರದಾಯಿತ್ವವಾಗಿಲ್ಲ. ಅಮೆರಿಕದ ಶೇ.60ಕ್ಕೂ ಅಧಿಕ ಜನ ಫೇಸ್‌ಬುಕ್ ಬಳಕೆದಾರರಾಗಿದ್ದಾರೆ. ಇದು ಚುನಾವಣೆ ಮೇಲೆ ಗಂಭೀರ ಪರಿಣಾಮವನ್ನು ಬೀರುವ ವಿಚಾರವಾಗಿದೆ. ಕೂಡಲೇ ಅಮೆರಿಕ ಸರ್ಕಾರ ಮಧ್ಯ ಪ್ರವೇಶಿಸಿ ಕಠಿಣ ನಿಯಮಗಳ ಮೂಲಕ ಫೇಸ್‌ಬುಕ್‌ನ್ನು ನಿಯಂತ್ರಿಸಬೇಕಿದೆ ಎಂದು ಕ್ರಿಸ್ ಹೇಳಿದ್ದಾರೆ.

ಕ್ಯಾಂಬ್ರಿಜ್ ಅನಾಲಿಟಿಕಾ ಹಾಗೂ ಬಳಕೆದಾರರ ಮಾಹಿತಿ ಸೋರಿಕೆ ಸೇರಿದಂತೆ ಇತರೆ ಕೆಲ ವಿವಾದಗಳನ್ನು ಕೂಡ ಕ್ರಿಸ್ ಉಲ್ಲೇಖಿಸಿದ್ದಾರೆ. ಫೇಸ್‌ಬುಕ್ ಸಂಸ್ಥಾಪಕರ ಈ ಮಾತು ಕಂಪನಿ ಒಳ ಜಗಳವೋ ಅಥವಾ ಅಮೆರಿಕದ ಮೇಲಿನ ಕಾಳಜಿಯೋ ಎನ್ನುವುದು ಇನ್ನೂ ತಿಳಿದುಬಂದಿಲ್ಲ.

English summary
Mark Zuckerberg's power and staggering influence go far beyond that of anyone else in the private sector or in government opined Facebook co-founder chris Hughes while calling for the government to break up the track gaint.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X