ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಕ್ವೆಟ್ಟಾದ ಆಸ್ಪತ್ರೆಯಲ್ಲಿ ಸ್ಫೋಟ, 93 ಸಾವು

By Mahesh
|
Google Oneindia Kannada News

ಕರಾಚಿ(ಪಾಕಿಸ್ತಾನ), ಆಗಸ್ಟ್ 08: ಕ್ವೆಟ್ಟಾದ ಬಲೂಚಿಸ್ತಾನ ಪ್ರಾಂತ್ಯದಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಬೆಳಗ್ಗೆ ಬಾಂಬ್ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ 93ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 120ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಬಹುತೇಕ ಮಂದಿ ವಕೀಲರು ಎಂದು ತಿಳಿದು ಬಂದಿದೆ.

ಬಲೋಚಿಸ್ತಾನ ವಕೀಲರ ಸಂಘದ ಅಧ್ಯಕ್ಷ ವಕೀಲ ಬಿಲಾಲ್ ಅನ್ವರ್ ಕಾಸಿ ಅವರನ್ನು ಅಪರಿಚಿತನೊಬ್ಬ ಗುಂಡು ಹಾರಿಸಿ ಹತ್ಯೆ ಮಾಡಿದ ಬೆನ್ನಲ್ಲೇ ಆಸ್ಪತ್ರೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ.

Explosion in Pakistan hospital; 55 killed, over 100 injured

ಆಸ್ಪತ್ರೆಯ ತುರ್ತು ಸೇವಾ ವಿಭಾಗದ ಬಳಿ ಬಿಲಾಲ್ ಅನ್ವರ್ ಅವರ ಮೃತದೇಹವನ್ನು ತರುತ್ತಿದ್ದಂತೆ ಭಾರಿ ಸ್ಫೋಟ ಸಂಭವಿಸಿದೆ. ಈ ಸಂದರ್ಭದಲ್ಲಿ ವಕೀಲರು, ಪತ್ರಕರ್ತರು ಈ ಘಟನಾ ಸ್ಥಳದಲ್ಲಿದ್ದರು.

ಮಿಲಿಟರಿ ಸಮವಸ್ತ್ರ ಧರಿಸಿದ್ದ ಮುಸುಕುಧಾರಿಯೊಬ್ಬ ಕ್ವೆಟ್ಟಾದ ಮಾನ್ನೋ ಜಾನ್ ಮಾರ್ಗದಲ್ಲಿರುವ ಮೆಂಗಲ್ ಚೌಕ್ ಬಳಿ ಗುಂಡಿನ ದಾಳಿ ನಡೆಸಿದ್ದ ನಂತರ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೂ ನುಗ್ಗಿದ ದುಷ್ಕರ್ವಿುಗಳು ಅಲ್ಲಿಯೂ ಗುಂಡಿನ ದಾಳಿ ನಡೆಸಿದ್ದಲ್ಲದೆ, ಬಾಂಬ್ ಎಸೆದಿದ್ದಾರೆ.

Explosion in Pakistan hospital; 55 killed, over 100 injured

ಬಿಲಾಲ್ ಅನ್ವರ್ ಕಾಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿರುವುದನ್ನು ಸುದ್ದಿ ಮಾಡಲು ತೆರಳಿದ್ದ ಆಜ್ ಟಿವಿ ವರದಿಗಾರ ಶೆಹಜಾದ್ ಅಹಮ್ಮದ್ ಸಾವನ್ನಪ್ಪಿದ್ದಾರೆ. ಗಾಯಗೊಂಡವರ ಪೈಕಿ ವಕೀಲರು, ಪೊಲೀಸರು ಹಾಗೂ ಪತ್ರಕರ್ತರು ಅಧಿಕ ಸಂಖ್ಯೆಯಲ್ಲಿದ್ದಾರೆ. 20 ಮಂದಿಯ ದೇಹ ಸ್ಥಿತಿ ಗಂಭೀರವಾಗಿದೆ ಎಂದು ಬಲೂಚಿಸ್ತಾನದ ಸರ್ಕಾರಿ ವಕ್ತಾರ ಅನ್ವರ್ ಹಕ್ ಹೇಳಿದ್ದಾರೆ. (ಪಿಟಿಐ)

English summary
At least 55 people, mostly lawyers, were today killed and over 100 others injured when a powerful bomb ripped through a government-run hospital in Quetta in Pakistan's restive southwestern Balochistan province, in a suspected suicide attack followed by gunfire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X