Donald Trump: ಡೊನಾಲ್ಡ್ ಟ್ರಂಪ್ ವಿರುದ್ಧ ಬೃಹತ್ ಪ್ರತಿಭಟನೆಗೆ ಸಜ್ಜಾದ ಅಮೆರಿಕ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿಕೊಳ್ಳುತ್ತಿರುವ ಎಡವಟ್ಟು ಸ್ವತಃ ಅಮೆರಿಕದ ಪ್ರಜೆಗಳಿಗೆ ಇಷ್ಟವಾಗುತ್ತಿಲ್ಲ. ಒಂದು ಕಡೆ ಜಾಗತಿಕವಾಗಿ ಕೂಡ ಡೊನಾಲ್ಡ್ ಟ್ರಂಪ್ ಅವರ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೊಂದು ಕಡೆ ಸ್ವತಃ ಅಮೆರಿಕದಲ್ಲಿ ಟ್ರಂಪ್ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಇದೀಗ ಕಿಚ್ಚು ಹೊತ್ತಿಸಿವೆ. ಇಷ್ಟೆಲ್ಲದರ ನಡುವೆ ಇದೀಗ ದಿಢೀರ್ ಬೃಹತ್ ಪ್ರತಿಭಟನೆ ಮೂಲಕ ಡೊನಾಲ್ಡ್ ಟ್ರಂಪ್ ಅವರಿಗೆ ಶಾಕ್ ನೀಡಲು ಹಲವು ಸಂಘಟನೆಗಳು ಸಜ್ಜಾಗಿವೆ.

ಡೊನಾಲ್ಡ್ ಟ್ರಂಪ್ ಅಮೆರಿಕದ ಅತ್ಯಂತ ವಿವಾದಾತ್ಮಕ ಅಧ್ಯಕ್ಷ ಎಂಬ ಕೆಟ್ಟ ಹೆಸರು ಕೂಡ ಪಡೆದಿದ್ದಾರೆ. 2016ರ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದ ವೇಳೆ ಭಾರಿ ದೊಡ್ಡ ದೊಡ್ಡ ವಿವಾದ ಮೈಮೇಲೆ ಎಳೆದುಕೊಂಡು ಪರದಾಡಿದ್ದರು. ಆ ನಂತರ ಸೋತು ಹೋಗಿ, ಮತ್ತೆ ಇದೀಗ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಹೀಗಿದ್ದರೂ, ಡೊನಾಲ್ಡ್ ಟ್ರಂಪ್ ಮಾತ್ರ ಬದಲಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಇಂತಹ ಸಂದಿಗ್ಧ ಸಮಯದಲ್ಲೇ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಲಿದೆ.

Explore The 50501 Movement and Its Protests Against Trump

ಟ್ರಂಪ್ ವಿರುದ್ಧ '50501' ಪ್ರತಿಭಟನೆ!

ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವು ಬದಲಾವಣೆ ಆಗಿವೆ. ಹೀಗೆ ಡೊನಾಲ್ಡ್ ಟ್ರಂಪ್ ಆಡಳಿತ ಬಂದ ನಂತರ ಮಾಡಿಕೊಂಡಿರುವ ಬದಲಾವಣೆ ಭಾರಿ ದೊಡ್ಡ ಬಿರುಗಾಳಿ ಎಬ್ಬಿಸಿದ್ದು, ತಿಕ್ಕಾಟ ಕೂಡ ಶುರುವಾಗಿದೆ. ಇದೇ ಕಾರಣಕ್ಕೆ ಈಗ ಟ್ರಂಪ್ ವಿರುದ್ಧ '50501' ಚಳುವಳಿ ನಡೆಸಲು ಸಿದ್ಧತೆ ನಡೆಸಲಾಗಿದೆ. ಹಾಗಾದರೆ ಏನಿದು '50501' ಚಳುವಳಿ? ಡೊನಾಲ್ಡ್ ಟ್ರಂಪ್ ವಿರುದ್ಧ ಈ ರೀತಿ ಪ್ರತಿಭಟನೆ ಏಕೆ? ಮುಂದೆ ಓದಿ.

'50501' ಚಳುವಳಿ ಎಂದರೆ, 50 ರಾಜ್ಯ, 50 ಪ್ರತಿಭಟನೆ & 1 ದಿನ ಎಂದು ಅರ್ಥ. ಹೀಗೆ ಡೊನಾಲ್ಡ್ ಟ್ರಂಪ್ ವಿರುದ್ಧ ಅಮೆರಿಕದ 50 ರಾಜ್ಯಗಳಲ್ಲಿ ಒಂದೇ ದಿನ 50 ಪ್ರತಿಭಟನೆಯನ್ನ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಏಪ್ರಿಲ್ 19 ರಂದು ಪ್ರತಿಭಟನೆ ನಡೆಸಲು ತಯಾರಿ ಕೈಗೊಳ್ಳಲಾಗಿದ್ದು, ಅಮೆರಿಕದಲ್ಲಿ ಭಾರಿ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ.

ಯಾವ ಯಾವ ಸಂಘಟನೆಗಳ ಬಲ?

ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ನಡೆಯುವ ಪ್ರತಿಭಟನೆಗೆ ಈಗ ಕಾರ್ಮಿಕ ಸಂಘಟನೆಗಳು, ಎಲ್‌ಜಿಬಿಟಿ ಕಮ್ಯುನಿಟಿ ಸೇರಿದಂತೆ ಮಾನವ ಹಕ್ಕುಗಳ ಸಂಘಟನೆಗಳು ಕೂಡ ಸಾಥ್ ನೀಡಲಿವೆ ಎಂಬ ಮಾಹಿತಿ ಇದೆ. ವಕೀಲರ ಸಂಘ, ಚುನಾವಣಾ ಸಂಘಟನೆಗಳು ಕೂಡ ಸಾಥ್ ನೀಡಿವೆ. ಈ ಮೂಲಕ ಅಮೆರಿಕದಲ್ಲಿ ಮತ್ತೊಂದು ಸುತ್ತಿನ ರಕ್ತರಹಿತ ಕ್ರಾಂತಿ ಗ್ಯಾರಂಟಿ ಎನ್ನಲಾಗಿದ್ದು, ಭಾರಿ ಭದ್ರತೆ ಕೈಗೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+