ಯುದ್ಧದ ಸಾವಿನ ಸಂಖ್ಯೆ ಬಗ್ಗೆ ತಪ್ಪು ಲೆಕ್ಕ ಕೊಟ್ಟ ಇಸ್ರೇಲ್?
ಹಮಾಸ್ ಉಗ್ರರು ಹಾಗೂ ಇಸ್ರೇಲ್ ಸೇನೆ ಮಧ್ಯೆ ಯುದ್ಧಕ್ಕೆ ಕಾರಣವಾಗಿದ್ದ ದಾಳಿ ಕುರಿತು ಇಸ್ರೇಲ್ ಸೇನೆ ತಪ್ಪು ಮಾಹಿತಿ ನೀಡಿದ ಆರೋಪ ಕೇಳಿಬಂದಿದೆ. ಗಾಜಾ ನಗರ ರಕ್ತಪಾತದ ಸಮಯದಲ್ಲೇ ಇಸ್ರೇಲ್ ಹೇಳಿಕೆ ಸಂಚಲನ ಸೃಷ್ಟಿಮಾಡಿದೆ. ಹಾಗಾದರೆ ಇಸ್ರೇಲ್ ಸೇನೆಯು ನೀಡಿದ್ದ ತಪ್ಪು ಮಾಹಿತಿ ಏನು? ಇದರಿಂದ ಯುದ್ಧ ಮತ್ತಷ್ಟು ಭೀಕರವಾಗಿದ್ದು ಏಕೆ? ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ನಿಮಗೆಲ್ಲಾ ಗೊತ್ತಿರುವಂತೆ ಕಳೆದ ತಿಂಗಳು ಅಂದ್ರೆ, ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ವಿರುದ್ಧ 5000 ರಾಕೆಟ್ ಉಡಾಯಿಸಿ, ಅಟ್ಟಹಾಸ ಮೆರೆದಿದ್ದರು. ಹಾಗೇ ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರ, ಬಾಂಬ್ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ದರು. ರೊಚ್ಚಿಗೆದ್ದ ಇಸ್ರೇಲ್ ಸೇನೆ ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಹಾಗೇ ಈ ದಾಳಿಯ ವೇಳೆ ಇಸ್ರೇಲ್ ಕಡೆ, 1400 ಜನರು ಮೃತಪಟ್ಟಿದ್ದಾರೆ ಎಂದು ತಪ್ಪು ಮಾಹಿತಿ ನೀಡಿತ್ತಂತೆ ಇಸ್ರೇಲ್ ಸೇನೆ. ಹೀಗಿದ್ದಾಗ ಅಸಲಿ ಸಾವಿನ ಸಂಖ್ಯೆ ಹೊರಬಿದ್ದಿದ್ದು ಆಕ್ರೋಶ ಮೊಳಗಿದೆ.

ಇಸ್ರೇಲ್ ಕಡೆ ಸತ್ತಿದ್ದು ಎಷ್ಟು ಜನ?
ಅಂದಹಾಗೆ ಇಲ್ಲಿಯತನಕ ಇದ್ದ ಲೆಕ್ಕಾಚಾರದ ಪ್ರಕಾರ, ಹಮಾಸ್ ಉಗ್ರರು & ಇಸ್ರೇಲ್ ಸೇನೆ ನಡುವೆ ನಡೆಯುತ್ತಿರುವ ಭೀಕರ ಕಾಳಗದಲ್ಲಿ 11,000 ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಜನರು ಸೇರಿ ಇಸ್ರೇಲ್ ಕಡೆಯೂ 1,400 ಪ್ರಜೆಗಳು ಮೃತಪಟ್ಟಿದ್ದಾರೆ ಅಂತಾ ಹೇಳಲಾಗಿತ್ತು. ಆದ್ರೆ ಈಗ ಇಸ್ರೇಲ್ ದೇಶದಲ್ಲಿ ಮೃತಪಟ್ಟ ಜನರ ಸಂಖ್ಯೆ ಬಗ್ಗೆ ಅಸಲಿಯತ್ತು ಬಯಲಾಗಿದೆ. ಖುದ್ದು ಇಸ್ರೇಲ್ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಇಷ್ಟುದಿನ ಹಮಾಸ್ ಉಗ್ರರು ತಮ್ಮ ದೇಶದ ಮೇಲೆ ದಾಳಿ ನಡೆಸಿದಾಗ 1,400 ಜನರು ಮೃತಪಟ್ಟಿದ್ದಾರೆ ಅಂತಿದ್ದ ಇಸ್ರೇಲ್, ಇದೀಗ ನೋಡಿದ್ರೆ ಮೃತಪಟ್ಟ ಜನರ ಸಂಖ್ಯೆ 1,200 ಅಂತಿದೆ. ಇದು ಆಕ್ರೋಶಕ್ಕೆ ಕಾರಣವಾಗಿದೆ.
ಮುಂದಿನ ಪರಿಸ್ಥಿತಿ ಏನು?
ಈ ಕುರಿತು ಇಸ್ರೇಲ್ ವಿದೇಶಾಂಗ ಇಲಾಖೆ ಮಾಹಿತಿ ನೀಡಿದ್ದು ಸಂಚಲನ ಸೃಷ್ಟಿಮಾಡಿದೆ. ಯಾಕಂದ್ರೆ ಈ ಹಿಂದೆ 1,400ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಅಂತ ಇಸ್ರೇಲ್ ಸೇನೆಯ ಯೋಧರು ಹಮಾಸ್ ವಿರುದ್ಧ ಯುದ್ಧಕ್ಕೆ ನುಗ್ಗಿದ್ದರು. ಆದರೆ ಇದೀಗ ನೋಡಿದ್ರೆ ಸತ್ತಿರುವ ಜನರ ಸಂಖ್ಯೆಯೇ ಕಡಿಮೆ ಆಗಿದೆ. ಮತ್ತೊಂದು ಕಡೆ ಪ್ಯಾಲೆಸ್ತೀನ್ ಅಥವಾ ಗಾಜಾ ನಗರ ನೆಲದಲ್ಲಿ ಮೃತಪಟ್ಟವರ ಸಂಖ್ಯೆ ಕ್ಷಣಕ್ಷಣಕ್ಕೂ ಏರಿಕೆ ಕಾಣುತ್ತಿದೆ. ಹೀಗೆ ಎಲ್ಲಾ ಕೈಮೀರಿ ಹೋಗುತ್ತಿದ್ದು, ಮುಂದೆ ಏನಾಗಲಿದೆ? ಅನ್ನೋ ಚಿಂತೆ ಶುರುವಾಗಿದೆ. ಈಗಾಗಲೇ ಭಾಗಶಃ ಗಾಜಾ ನಗರದ ಮೇಲೆ ಇಸ್ರೇಲ್ ಹಿಡಿತ ಸಾಧಿಸಿದೆ.












Click it and Unblock the Notifications