UK ಸಂಸತ್ ಚುನಾವಣೆ: ಅತಂತ್ರ ಸಂಸತ್ತಿನ ಸೂಚನೆ ನೀಡಿದ ಸಮೀಕ್ಷೆಗಳು
ಈ ಬಾರಿಯ ಯುಕೆ ಸಂಸತ್ ಚುನಾವಣೆಯು ಮುಗಿದಿದ್ದು ಫಲಿತಾಂಶ ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ. ಆದರೆ, ಅದಕ್ಕೂ ಮುನ್ನವೇ ಚುನಾವಣೋತ್ತರ ಸಮೀಕ್ಷೆಗಳು ಅಲ್ಲಿ ಅತಂತ್ರ ಸಂಸತ್ ಉಂಟಾಗುವ ಸಾಧ್ಯತೆಯಿದೆ ಎಂದು ಹೇಳಿವೆ. ಹಾಗಾಗಿ, ಫಲಿತಾಂಶ ಮತ್ತಷ್ಟು ಕುತೂ
ಲಂಡನ್, ಜೂನ್ 9: ಬ್ರಿಟನ್ ನ ಸಂಸತ್ ಚುನಾವಣೆ ನೆನ್ನೆಯಷ್ಟೇ ಮುಗಿದಿದ್ದು, ಇದೀಗ ಅಲ್ಲಿನ ಮಾಧ್ಯಮಗಳಲ್ಲೆಲ್ಲಾ ಚುನಾವಣೋತ್ತರ ಸಮೀಕ್ಷೆಗಳ ಭರಾಟೆ ವಿಜೃಂಭಿಸುತ್ತಿವೆ.
ಬಹುತೇಕ ಚುನಾವಣಾ ಸಮೀಕ್ಷೆಗಳು ಈ ಬಾರಿಯ ಚುನಾವಣೆ ಅಲ್ಲಿ ಅತಂತ್ರ ಸಂಸತ್ತನ್ನು ಸೃಷ್ಟಿಸುತ್ತವೆ ಎಂದು ಹೇಳಿವೆ. ಅರ್ಥಾತ್, ಅಲ್ಲಿ ಯಾವುದೇ ಪಕ್ಷಕ್ಕೂ ಅಧಿಕಾರ ಗದ್ದುಗೆ ಹಿಡಿಯಲು ಬೇಕಾದ ಸ್ಪಷ್ಟ ಬಹುಮತ ಸಿಗುವುದಿಲ್ಲ ಎಂದು ಹೇಳಲಾಗಿದೆ.

ಹಾಲಿ ಬ್ರಿಟನ್ ಪ್ರಧಾನಿ ಥೆರೇಸಾ ಮೇ ಅವರ ಕನ್ಸರ್ವೇಟಿವ್ ಪಕ್ಷ ಹಾಗೂ ಅವರ ಪ್ರಮುಖ ಪ್ರತಿಸ್ಪರ್ಧಿ ಲೇಬರ್ ಪಾರ್ಟಿಯ ನಾಯಕ ಜೆರೆಮಿ ಕಾರ್ಬಿನ್ ಅವರಿಬ್ಬರ ನಡುವೆ ಭಾರೀ ಪೈಪೋಟಿಯಿರುವುದರಿಂದಲೇ ಈ ಬಾರಿಯ ಚುನಾವಣೆಯ ಫಲಿತಾಂಶವು ಯುಕೆ ಸಂಸತ್ತನ್ನು ಅತಂತ್ರ ಸ್ಥಿತಿಗೆ ತಂದು ನಿಲ್ಲಿಸುತ್ತದೆ ಎನ್ನಲಾಗಿದೆ.
ಯುಕೆ ಸಂಸತ್ತಿನಲ್ಲಿ ಒಟ್ಟು ಇರುವ ಸ್ಥಾನಗಳ ಸಂಖ್ಯೆ 650. ಸಮೀಕ್ಷೆಗಳ ಪ್ರಕಾರ, ಕನ್ಸರ್ವೇಟಿವ್ ಪಾರ್ಟಿ 314 ಸ್ಥಾನ ಗೆಲ್ಲುತ್ತದೆ. ಲೇಬರ್ ಪಾರ್ಟಿ 266 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಲಾಗಿದೆ. ಅಧಿಕಾರ ಗದ್ದುಗೆ ಹಿಡಿಯಲು ಯಾವುದೇ ಪಕ್ಷಕ್ಕೆ 326 ಸ್ಥಾನಗಳು ಬೇಕಿವೆ.












Click it and Unblock the Notifications