ಅಮೆರಿಕ ವಿರುದ್ಧ ಮುನಿಸಿಕೊಂಡ ಯುರೋಪ್ ಒಕ್ಕೂಟ? ಕಾರಣ ಇವರೇ... Iran And Israel
ಇಸ್ರೇಲ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದು, ತಾನು ಮಾಡಿಕೊಂಡ ಎಡವಟ್ಟಿಗೆ ಬೆಲೆ ತೆರಬೇಕು ಅಂತಾ ಅತ್ತ ಇರಾನ್ ದಾಳಿ ಮಾಡುತ್ತಿದೆ. ಮತ್ತೊಂದು ಕಡೆ, ಇಸ್ರೇಲ್ ಜೊತೆಗೆ ನಿಂತಿರುವ ಅಮೆರಿಕ, ಇರಾನ್ ನಾಶ ಆಗಿ ಹೋಗಬೇಕು ಅಂತಿದೆ. ಹೀಗೆ ಇರಾನ್ & ಇಸ್ರೇಲ್ ವಾರ್ ನೋಡಿ ಇಡೀ ಪ್ರಪಂಚ ಭಯದಲ್ಲಿ ದಿನ ದೂಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇಂತಹ ಭಾರಿ ಗಂಭೀರ ಸ್ಥಿತಿಯಲ್ಲಿ ಅಮೆರಿಕ ವಿರುದ್ಧ ಯುರೋಪ್ ಒಕ್ಕೂಟ ಕೂಡ ರೊಚ್ಚಿಗೆದ್ದಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಹೌದು, ಇರಾನ್ & ಇಸ್ರೇಲ್ ಯುದ್ಧ ಪಾಶ್ಚಿಮಾತ್ಯ ದೇಶಗಳ ನಡುವೆಯೇ ಬೆಂಕಿಯ ಕಿಡಿ ಹೊತ್ತಿಸಿಬಿಟ್ಟಿದೆ. ಇರಾನ್ & ಇಸ್ರೇಲ್ ತಾವು ಕಚ್ಚಾಡುವುದೂ ಅಲ್ಲದೆ ಮತ್ತೊಂದು ಕಡೆ ಜಗತ್ತಿನ ವಿವಿಧ ದೇಶಗಳ ನಡುವೆ ಕೂಡ ಬೆಂಕಿಯ ಕಿಡಿ ಹೊತ್ತಿಸಿವೆ. ಹೀಗಾಗಿ ಇರಾನ್ & ಇಸ್ರೇಲ್ ಯುದ್ಧ ಆದಷ್ಟು ಬೇಗ ನಿಲ್ಲಲಿ ಎನ್ನುವ ಒತ್ತಾಯ ಕೇಳಿ ಬರುತ್ತಿದೆ. ಆದರೆ ಏನೇ ಮಾಡಿದರೂ ಇಸ್ರೇಲ್ ಪರವಾಗಿ ನಿಲ್ಲುತ್ತಿರುವ ಅಮೆರಿಕ ವಿರುದ್ಧ ಕೂಡ ಯುರೋಪ್ ಒಕ್ಕೂಟ ರೊಚ್ಚಿಗೆದ್ದಿದೆ. ಹಿಂಗೆ ಮಾಡುತ್ತಿದ್ದರೆ ಭವಿಷ್ಯದಲ್ಲಿ ಇದು ಎಲ್ಲರಿಗು ಕೂಡ ಸಮಸ್ಯೆ ತರಲಿದೆ ಅನ್ನೋ ಆರೋಪ ಕೇಳಿ ಬರುತ್ತಿದೆ.

ಅಮೆರಿಕ ವಿರುದ್ಧ ಮುನಿಸಿಕೊಂಡ ಯುರೋಪ್ ಒಕ್ಕೂಟ?
ಯುರೋಪ್ ಒಕ್ಕೂಟ ಬಲಿಷ್ಠವಾಗಿದ್ದು, ಯುರೋಪ್ ಒಕ್ಕೂಟದ ಸಹಾಯ ಇಲ್ಲದೆ ಅಮೆರಿಕ ಬದುಕುವುದು ಕೂಡ ಕಷ್ಟ. ಯಾಕಂದ್ರೆ ಅಮೆರಿಕ & ಯುರೋಪ್ ಎರಡೂ ಒಂದೇ ಮುಖದ ಎರಡು ನಾಣ್ಯಗಳ ರೀತಿ ಬದುಕಿದ್ದವು. ಆದರೆ ಇತ್ತೀಚಿನ ಪರಿಸ್ಥಿತಿಗಳು ಎರಡೂ ದೇಶಗಳ ನಡುವೆ ಬೆಂಕಿಯ ಕಿಡಿ ಹೊತ್ತಿಸಿಬಿಟ್ಟಿದೆ, ಅಲ್ಲದೆ ಎರಡೂ ಒಕ್ಕೂಟ ವ್ಯವಸ್ಥೆಗಳ ನಡುವೆ ಭಾರಿ ಕಲಹ ಶುರುವಾಗಿದೆ. ಇಂತಹ ಸಮಯದಲ್ಲಿಯೇ ಇಸ್ರೇಲ್ ಕೂಡ ಮನಸ್ಸಿಗೆ ಬಂದ ರೀತಿ ಆಡುತ್ತಾ ಪರಿಸ್ಥಿತಿಯನ್ನು ಇನ್ನಷ್ಟು ಕಗ್ಗಂಟಾಗಿಸಿರುವ ಆರೋಪ ಕೇಳಿ ಬಂದಿದೆ.
ಅಣ್ವಸ್ತ್ರ ದಾಳಿಯ ಭಯದಲ್ಲಿ ಯುರೋಪ್?
ಯುರೋಪ್ ಒಕ್ಕೂಟ ಈಗ ಇಸ್ರೇಲ್ & ಇರಾನ್ ಯುದ್ಧದ ಬಗ್ಗೆ ಸಾಕಷ್ಟು ಚಿಂತೆ ಮಾಡುವಂತೆ ಆಗಿದೆ. ಹೌದು, ಇಸ್ರೇಲ್ & ಇರಾನ್ ನಡುವೆ ಪೂರ್ಣ ಪ್ರಮಾಣದ ಯುದ್ಧ ಶುರುವಾಗಿ ಇಡೀ ಜಗತ್ತು ಸರ್ವನಾಶವಾಗಿ ಹೋಗುವ ಮುನ್ಸೂಚನೆ ಸಿಕ್ಕಿದೆ. ಯಾಕಂದ್ರೆ ಈಗ ಇರಾನ್ ಕೈಯಲ್ಲಿ ಅಣ್ವಸ್ತ್ರಗಳು ಇವೆ, ಹಾಗೇ ಇಸ್ರೇಲ್ ಕೂಡ ಅಮೆರಿಕ ಸೇನೆಯ ಬೆಂಬಲ ಪಡೆದು ನ್ಯೂಕ್ಲಿಯರ್ ಅಂದ್ರೆ ಪರಮಾಣು ಬಾಂಬ್‌ನ ಹಾಕುವ ಸಾಮರ್ಥ್ಯ ಹೊಂದಿದೆ.
ಈ ಕಾರಣಕ್ಕೆ ಈಗ ಆತಂಕ ಹೆಚ್ಚಾಗಿದ್ದು, ಇಸ್ರೇಲ್ & ಇರಾನ್ ನಡುವಿನ ಯುದ್ಧದಲ್ಲಿ ಈಗ ಯಾರು ಯಾರ ಪರವಾಗಿ ಇದ್ದಾರೆ? ಅನ್ನೋ ಚರ್ಚೆ ಕೂಡ ಶುರುವಾಗಿದೆ. ಆದರೆ ಇದೇ ಸಮಯದಲ್ಲಿ ಯುರೋಪಿಯನ್ ಯುನಿಯನ್ ಇದೀಗ ಅಮೆರಿಕದ ನಡೆ & ಇಸ್ರೇಲ್ ವರ್ತನೆ ವಿರುದ್ಧ ಆಕ್ರೋಶಗೊಂಡಿದ್ದು. ಕೂಡಲೇ ಈ ವಿಚಾರದಲ್ಲಿ ಸೂಕ್ತ ನಿಲುವು ತೆಗೆದುಕೊಳ್ಳಿ ಎಂಬ ಆಗ್ರಹ ಮಾಡುತ್ತಿದೆ. ಆದರೆ ಇದರ ಹೊರತಾಗಿಯೂ ಇರಾನ್ ಮಾತ್ರ ತನ್ನ ಶತ್ರು ಇಸ್ರೇಲ್ ವಿರುದ್ಧ ಮತ್ತಷ್ಟು ದಾಳಿ ತೀವ್ರಗೊಳಿಸಿದೆ.












Click it and Unblock the Notifications