2 ಹೆಂಡತಿ ಅಥವಾ ಜೈಲು, ನಿಮ್ಮ ಆಯ್ಕೆ ಯಾವುದು?

ನವದೆಹಲಿ, ಫೆಬ್ರವರಿ, 02: ಮದುವೆ ಆಗದವರಿಗೆ ಮದುವೆ ಆಗಿಲ್ಲ ಅನ್ನೋ ಚಿಂತೆ, ಮದುವೆಯಾದವರಿಗೆ ಯಾಕಾದ್ರೂ ಮದುವೆಯಾದೆವೋ ಎನ್ನೋ ಚಿಂತೆ! ಇದೆಲ್ಲ ಒತ್ತಟ್ಟಿಗಿರಲಿ ಭಾರತದಲ್ಲಿ ಕಾನೂನು ಬದ್ಧವಾಗಿ ಎಷ್ಟು ಮದುವೆ ಆಗಬಹುದು? ಒಂದು ಮದುವೆ ಆಗಬಹುದು.

ಆದರೆ ಆಫ್ರಿಕಾದ ದೇಶವೊಂದು ತನ್ನ ಪುರುಷವಾಸಿಗಳಿಗೆ ಕಟ್ಟುನಿಟ್ಟಿನ ಆದೇಶ(ಅವಕಾಶ) ನೀಡಿದೆ. ಎರಡು ಅಥವಾ ಅದಕ್ಕಿಂತ ಹೆಚ್ಚಿನ ಮದುವೆಯಾಗಿ, ಇಲ್ಲವಾದರೆ ಜೈಲೂಟ ತಿನ್ನಲು ಸಿದ್ಧರಾಗಿ ಎಂದು ತಿಳಿಸಿದೆ. ಕೆಲವರಿಗೆ ಸಿಹಿ ಸಂಗತಿಯಾಗಿದ್ದರೆ ದಿನ ಕಳೆದಂತೆ ಭಾರವೂ ಆಗಬಹುದು. ಒಂದೇ ಹೆಂಡತಿ ಕಾಟ ತಾಳಲಾರದವರ ಪರಿಸ್ಥಿತಿ ಯಾರಿಗೂ ಬೇಡ ಬಿಡಿ.[ಬೆಂಗಳೂರಿಗರು ಜಾತ್ಯತೀತರಾಗುವುದು ಇನ್ನೂ ಬಹುದೂರ!]

eritrea-govt-tells-marry-two-wives-or-be-jailed

ಆದರೆ ಚಿಕ್ಕ ದೇಶ ಏರಿಟ್ರಿಯಾ ಸರ್ಕಾರ ಎರಡು ಮದುವೆ ಕಾಯ್ದೆ ಜಾರಿಗೆ ತಂದಿದೆ. ಇಲ್ಲಿ ಪುರುಷ ಅನಿವಾರ್ಯವಾಗಿ ಎರಡು ಮದುವೆಯಾಗಬೇಕು. ಒಂದು ವೇಳೆ ಮೊದಲ ಪತ್ನಿ ಇದಕ್ಕೆ ವಿರೋಧ ವ್ಯಕ್ತಪಡಿಸಿದರೆ ಪತಿ-ಪತ್ನಿ ಇಬ್ಬರೂ ಜೈಲು ಸೇರಬೇಕಾಗುತ್ತದೆ.[ಏಳು ಜನ್ಮಗಳ ಅನುಬಂಧ ಬೆಸೆಯುವ 'ಸಪ್ತಪದಿ'ಯ ಮಹತ್ವ]

ಎರಡು ಮದುವೆ ಕಾನೂನಿಗೆ ಕಾರಣ?
ದೇಶದಲ್ಲಿ ಪುರುಷರ ಸಂಖ್ಯೆ ಕಡಿಮೆಯಾಗಿ ಹೋಗಿದೆ. ಇಥಿಯೋಪಿಯಾದೊಂದಿಗೆ ನಡೆದ ಯುದ್ದದಲ್ಲಿ ದೇಶದ 150,000 ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇದರ ಪರಿಣಾಮವೇ ಈ ಹೊಸ ಕಾನೂನು. ಕೆಂಪು ಸಮುದ್ರದ ದಂಡೆಯ ಮೇಲಿರುವ ದೇಶದಲ್ಲಿ ಹೊಸ ಕಾನೂನು ಬಂದಿರುವುದಲ್ಲದೇ ಜನಸಂಖ್ಯಾ ಸ್ಫೋಟಕ್ಕೂ ಒತ್ತು ನೀಡಬೇಕು ಎಂದು ತಿಳಿಸಲಾಗಿದೆಯಂತೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+