ಟ್ರಂಪ್ ಮಗನ ಉರುಗ್ವೆ ಟ್ರಿಪ್ ಗೆ 67 ಲಕ್ಷ ರು. ಖರ್ಚು!!!

Posted By:
Subscribe to Oneindia Kannada

ವಾಷಿಂಗ್ಟನ್, ಫೆಬ್ರವರಿ 4: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ ಎರಿಕ್ ಟ್ರಂಪ್ ಅವರು, ಇತ್ತೀಚೆಗೆ ಕೈಗೊಂಡ ಉರುಗ್ವೆ ದೇಶದ ಪ್ರವಾಸಕ್ಕಾಗಿ 1,00,000 ಅಮೆರಿಕನ್ ಡಾಲರ್ (ಸುಮಾರು 67 ಲಕ್ಷ ರು.) ಖರ್ಚಾಗಿದೆಯಂತೆ.

ಈ ಮೊತ್ತದಲ್ಲಿ ಅಧಿಕ ಮೊತ್ತ ಎರಿಕ್ ಗಾಗಿ ನೀಡಲಾದ ಸೀಕ್ರೇಟ್ ಸರ್ವೀಸ್ ಸೇವೆಗಳಿಗೆ ಖರ್ಚಾಗಿದೆಯೆಂದು ಹೇಳಲಾಗಿದೆ. ಈ ಪ್ರವಾಸವನ್ನು ಟ್ರಂಪ್ ಅವರ ಕಂಪನಿಯೇ ವಹಿಸಿಕೊಂಡಿದ್ದಾಗಿ ಹೇಳಲಾಗಿದೆ. ಇದೇ ತಿಂಗಳ ಆರಂಭದಲ್ಲಿ ಎರಿಕ್ ಅವರು ಉರುಗ್ವೆಗೆ ಭೇಟಿ ನೀಡಿದ್ದರು.

Eric Trump's Trip To Uruguay Cost Taxpayers Rs.67 Lakhs in Hotel Bills

ಆದರೆ, ಇದನ್ನು ನಿಧಾನವಾಗಿ ತೆರಿಗೆದಾರರ ಮೇಲೆಯೇ ಹೇರುತ್ತಾರೆಂಬ ಅನುಮಾನವನ್ನು ಅಲ್ಲಿನ ಕೆಲ ಮಾಧ್ಯಮಗಳು ವ್ಯಕ್ತಪಡಿಸಿವೆ. ಆದರೆ, ಇದಕ್ಕೆ ಈಗಾಗಲೇ ಸ್ಪಷ್ಟೀಕರಣಕೊಟ್ಟಿರುವ ಎರಿಕ್, ತಮ್ಮ ಕಂಪನಿಯ ವ್ಯವಹಾರಗಳನ್ನು ಸರ್ಕಾರದ ವ್ಯವಹಾರಗಳೊಂದಿಗೆ ಎಂದಿಗೂ ಸಮ್ಮಿಳಿತ ಮಾಡುವುದಿಲ್ಲ ಎಂದಿದ್ದಾರೆ. ಆದರೂ, ಇನ್ನು ಮುಂದೆ ಕಂಪನಿಯ ಕೆಲವಾರು ಐಶಾರಾಮಿ ಖರ್ಚುಗಳು ಪರೋಕ್ಷವಾಗಿ ತೆರಿಗೆದಾರರ ಜೇಬಿಗೆ ಕತ್ತರಿ ಹಾಕಬಹುದು ಎಂಬ ವದಂತಿಗಳೂ ಗಾಢವಾಗಿ ಹರಡಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
When the president-elect's son Eric Trump jetted to Uruguay in early January for a Trump Organization promotional trip, U.S. taxpayers were left footing a bill of nearly $100,000.
Please Wait while comments are loading...