Elon Musk: ಸರ್ಕಾರಿ ನೌಕರರ ಮೇಲೆ ಹೆಚ್ಚಾಯ್ತು ಒತ್ತಡ, ಮಸ್ಕ್ ಖಡಕ್ ವಾರ್ನಿಂಗ್!
ಅಮೆರಿಕ ಸರ್ಕಾರ ಮುನ್ನಡೆಸಲು ಅಧಿಕಾರ ಪಡೆದುಕೊಂಡಿರುವ ಎಲಾನ್ ಮಸ್ಕ್ ಹಲವಾರು ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದ್ದಾರೆ. ಅದರಲ್ಲೂ ಅಮೆರಿಕದ ಸರ್ಕಾರಿ ನೌಕರರಿಗೆ ಈಗ ಎಲಾನ್ ಮಸ್ಕ್ ಹಾಕುತ್ತಿರುವ ರೂಲ್ಸ್ ಸಹಿಸಿಕೊಳ್ಳಲು ಆಗುತ್ತಿಲ್ಲ. ದಿನಕ್ಕೊಂದು ಹೊಸ ಹೊಸ ನಿಯಮ ಹೇರಿ ಆತಂಕ ಹುಟ್ಟಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇಂತಹ ಸಮಯದಲ್ಲೇ ಮತ್ತೊಂದು ಎಚ್ಚರಿಕೆ ಸಂದೇಶವನ್ನು ಸರ್ಕಾರಿ ನೌಕರರಿಗೆ ಮಸ್ಕ್ ರವಾನಿಸಿದ್ದು ಸಂಚಲನ ಸೃಷ್ಟಿ ಮಾಡಿದೆ.
ಅಮೆರಿಕದ ಶ್ರೀಮಂತ ಉದ್ಯಮಿಯಾಗಿ, ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಮಸ್ಕ್‌ಗೆ ಡೊನಾಲ್ಡ್ ಟ್ರಂಪ್ ಅವರ ಸ್ನೇಹ ಸಿಕ್ಕಿದೆ. ಹೀಗೆ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಆಗುವಲ್ಲಿ ಎಲಾನ್ ಮಸ್ಕ್ ಅವರ ಶ್ರಮ ಕೂಡ ಹೆಚ್ಚಾಗಿದೆ. ಅದರಲ್ಲೂ ಡೊನಾಲ್ಡ್ ಟ್ರಂಪ್ ಗೆಲ್ಲಬೇಕು ಅಂತಾ, ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದ್ದರು ಎಲಾನ್ ಮಸ್ಕ್. ಹೀಗಿದ್ದಾಗ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಉತ್ತಮ ಸ್ಥಾನಮಾನ ಕೂಡ ಸಿಕ್ಕಿದೆ. ಇದೇ ಸಮಯದಲ್ಲಿ ಅಮೆರಿಕದ ಸರ್ಕಾರಿ ನೌಕರರಿಗೆ ಚಳಿ ಬಿಡಿಸುತ್ತಿದ್ದಾರೆ ಮಸ್ಕ್!

ನೌಕರರ ಕೆಲಸದ ಮಾಹಿತಿ ಬೇಕೆ ಬೇಕು!
ಸರ್ಕಾರಿ ನೌಕರಿ ಅಂದ್ರೆ ಸುಖವಾಗಿ ಇರಬಹುದು ಅನ್ನೋ ಕಾಲಮಾನ ಹೋಗಿದ್ದು, ಇದೀಗ ಖಾಸಗಿ ಸಂಸ್ಥೆಗಳನ್ನೂ ಮೀರಿ ಸರ್ಕಾರಿ ಕೆಲಸಗಳಲ್ಲಿ ದುಡಿಯಬೇಕಿದೆ. ಇದು ಭಾರತದಲ್ಲಿ ಮಾತ್ರವಲ್ಲ ಅಮೆರಿಕದಲ್ಲೂ ಜಾರಿಗೆ ಬಂದಿದೆ. ಅಮೆರಿಕದ ಸರ್ಕಾರಿ ನೌಕರರು ಇಕ್ಕಟ್ಟಿನಲ್ಲಿ ಒದ್ದಾಡುತ್ತಿದ್ದು, ಟ್ರಂಪ್ ಸರ್ಕಾರ ಜಾರಿಗೆ ತರುತ್ತಿರುವ ಹೊಸ ನಿಯಮಗಳನ್ನು ನಿಭಾಯಿಸಲು ಆಗದೆ ನರಳಿದ್ದಾರೆ. ಇಂತಹ ಸಮಯದಲ್ಲೇ ಅಮೆರಿಕದ ಸರ್ಕಾರಿ ನೌಕರರಿಗೆ ಮಸ್ಕ್ ಖಡಕ್ ಸೂಚನೆ ನೀಡಿದ್ದು, ಪ್ರತಿಯೊಬ್ಬ ಸರ್ಕಾರಿ ನೌಕರ ತಾನು ಮಾಡುವ ಕೆಲಸದ ಬಗ್ಗೆ ಮಾಹಿತಿ ನೀಡಲು ಸೂಚಿಸಿದ್ದಾರೆ.
ಒಟ್ನಲ್ಲಿ ಎಲಾನ್ ಮಸ್ಕ್ ಅವರ ಹೊಸ ಆದೇಶದ ಬಗ್ಗೆ ಭಾರಿ ಚರ್ಚೆಗಳು ಶುರುವಾಗಿವೆ. ಈ ಬಗ್ಗೆ ಪರ & ವಿರೋಧದ ಮಾತುಗಳು ಕೂಡ ಕೇಳಿ ಬರುತ್ತಿವೆ. ಅಲ್ಲದೆ ಮಸ್ಕ್ ಹೀಗೆ ಮಾಡಿ ಸರ್ಕಾರಿ ನೌಕರರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪ ಕೂಡ ಮಾಡಲಾಗುತ್ತಿದೆ. ಹೀಗಿದ್ದಾಗ ಅಮೆರಿಕದಲ್ಲಿ ನೌಕರರ ಹೋರಾಟಗಳು ಆರಂಭ ಆಗಲಿವೆಯಾ? ಎಂಬ ಪ್ರಶ್ನೆಯೂ ಮೂಡಿದೆ.
1,600 ಕೆಲಸಗಾರರು ದಿಢೀರ್ ವಜಾ?
ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿ, ಅಂದರೆ ಅಮೆರಿಕದ ಹೊರಗಡೆ ಬೇರೆ ದೇಶಗಳಿಗೆ ಸಹಾಯ ಮಾಡಲು ಸೃಷ್ಟಿಯಾಗಿರುವ ಸಂಸ್ಥೆ USAID ಆಗಿದೆ. ಆದರೆ ಇದೇ ಸಂಸ್ಥೆ ಮೇಲೆ ಟ್ರಂಪ್ & ಜೊತೆಗಾರರ ಕಣ್ಣು ಬಿದ್ದಿದೆ ಎಂಬ ಆರೋಪ ಕೇಳಿಬಂದಿದೆ. ಅಮೆರಿಕ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವ ಈ ಸಂಸ್ಥೆಯಿಂದ ನೌಕರರನ್ನು ಮನೆಗೆ ಕಳುಹಿಸುವ ಕೆಲಸ ಭರ್ಜರಿಯಾಗಿ ಸಾಗಿದೆ. ಸಂಸ್ಥೆಯಲ್ಲಿ ಸಾವಿರಾರು ಜನರು ಕೆಲಸ ಮಾಡುತ್ತಿದ್ದರು, ಆದರೆ ಈ ಪೈಕಿ ಕೆಲವೇ ಕೆಲವು ನೌಕರರನ್ನು ಉಳಿಸಿಕೊಂಡು 1,600 ಜನರನ್ನು ದಿಢೀರ್ ವಜಾ ಮಾಡಿರುವ ಆರೋಪ ಕೇಳಿಬಂದಿದೆ.












Click it and Unblock the Notifications