13.5 ಕೆಜಿ ತೂಕ ಇಳಿಸಿಕೊಂಡ ಎಲೋನ್ ಮಸ್ಕ್: ಇಲ್ಲಿದೆ ಅವರೇ ನೀಡಿದ ಟಿಪ್ಸ್
ನವದೆಹಲಿ, ನವೆಂಬರ್ 19: ಟ್ವಿಟ್ಟರ್ ಸಿಇಒ ಎಲೋನ್ ಮಸ್ಕ್ ಇತ್ತೀಚಿಗೆ ಸಖತ್ ಸುದ್ದಿ ಮಾಡುತ್ತಿದ್ದಾರೆ. ಅವರು ಕುಳಿತರೂ ಸುದ್ದಿ, ನಿಂತರೂ ಸುದ್ದಿ ಆಗುತ್ತಿದೆ. ಇದರ ಮಧ್ಯೆ ತೂಕ ಇಳಿಸಿಕೊಂಡಿರುವ ಎಲೋನ್ ಮಸ್ಕ್, ಅದರ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಗ್ರೀಸ್‌ನ ವಿಹಾರ ನೌಕೆಯೊಂದರಲ್ಲಿ ಎಲೋನ್ ಮಸ್ಕ್ ಶರ್ಟ್ ಇಲ್ಲದೇ ವಿಹರಿಸುವ ಚಿತ್ರಗಳನ್ನು ಶೇರ್ ಮಾಡಿಕೊಂಡಿದ್ದರು. ಈ ಫೋಟೋಗಳು ವೈರಲ್ ಆಗಿದ್ದರ ಬೆನ್ನಲ್ಲೇ ತಾವು 13.5 ಕೆಜಿ ತೂಕ ಕಳೆದುಕೊಂಡಿರುವುದಾಗಿ ಎಲೋನ್ ಮಸ್ಕ್ ಇತ್ತೀಚೆಗೆ ಹೇಳಿದ್ದಾರೆ.
ಎಲೋನ್ ಮಸ್ಕ್ ತೂಕ ಕಳೆದುಕೊಂಡಿರುವ ಕುರಿತು ಅನುಯಾಯಿಯೊಬ್ಬರು ಪ್ರತಿಕ್ರಿಯಿಸಿದಾಗ, ಟ್ವಿಟರ್ ಮುಖ್ಯಸ್ಥರು ಅದಕ್ಕೆ ಉತ್ತರ ಕೊಟ್ಟಿದ್ದಾರೆ. ಸುಮಾರು 13.5 ಕೆಜಿ ತೂಕ ಕಳೆದುಕೊಂಡಿರುವುದಾಗಿ ಉಲ್ಲೇಖಿಸಿದ್ದಾರೆ.

ಎಲೋನ್ ಮಸ್ಕ್ ತೂಕ ಇಳಿಸಲು ಮಾಡಿದ್ದೇನು?
ಟ್ವಿಟ್ಟರ್ ಸಿಇಒ ಎಲೋನ್ ಮಸ್ಕ್ ತಮ್ಮ ತೂಕವನ್ನು ತಗ್ಗಿಸಿಕೊಳ್ಳುವುದಕ್ಕೆ ಯಾವ ಆಹಾರವನ್ನು ಸೇವಿಸಿದರು. ಯಾವ ಆಹಾರವು ಹೆಚ್ಚು ಉಪಯುಕ್ತವಾಗಿತ್ತು ಎಂಬುದಕ್ಕೆ ಉತ್ತರವನ್ನು ಕೊಟ್ಟಿದ್ದಾರೆ. ಉಪವಾಸ ಮಾಡುವುದರ ಜೊತೆಗೆೆ ಮಾಂಸಹಾರ ಹಾಗೂ ರುಚಿಕರ ಆಹಾರದಿಂದ ಅಂತರ ಕಾಯ್ದುಕೊಂಡಿರುವುದೇ ತಮ್ಮ ತೂಕ ತಗ್ಗಿಸಿಕೊಳ್ಳಲು ಕಾರಣವಾಯಿತು ಎಂದು ಎಲೋನ್ ಮಸ್ಕ್ ಬರೆದುಕೊಂಡಿದ್ದಾರೆ.

ಎರಡು ಇಂಜೆಕ್ಷನ್ ಮೂಲಕ ತೂಕ ಇಳಿಕೆ
ವಯಸ್ಕರಲ್ಲಿ ದೀರ್ಘಕಾಲದ ತೂಕ ನಿರ್ವಹಣೆಗಾಗಿ ಓಝೆಂಪಿಕ್ ಮತ್ತು ವೆಗೋವಿ ಎಂಬ ಚುಚ್ಚುಮದ್ದುಗಳನ್ನು ತೆಗೆದುಕೊಂಡಿದ್ದೇನೆ. ಈ ಎರಡು ಚುಚ್ಚುಮದ್ದುಗಳಿಂದ ಸ್ಥೂಲಕಾಯತೆ ಅಥವಾ ಹೆಚ್ಚುವರಿ ತೂಕವನ್ನು ಕಡಿತಗೊಳಿಸಲು ಸಾಧ್ಯವಾಗುತ್ತದೆ. ಇದರ ಜೊತೆಗೆ ತಮ್ಮ ತೂಕವನ್ನು ಪರೀಕ್ಷಿಸಲು ಉಪವಾಸ ಮಾಡುತ್ತಿದ್ದೆ ಎಂದು ಮಸ್ಕ್ ಅಕ್ಟೋಬರ್‌ನಲ್ಲಿ ತಿಳಿಸಿದ್ದರೂ, ಅದನ್ನು ಕಡಿಮೆ ಮಾಡಲು ಚುಚ್ಚುಮದ್ದನ್ನು ತೆಗೆದುಕೊಂಡಿರುವುದು ಇದೇ ಮೊದಲು ಎಂದು ಉಲ್ಲೇಖಿಸಿದ್ದಾರೆ.

ಎಲೋನ್ ಮಸ್ಕ್‌ಗೆ ತಂದೆ ಮಾಡಿದ ಆಹಾರ ಪಾಠ
ಕೆಟ್ಟದಾಗಿ ಮಿತಿಯಿಲ್ಲದೇ ತಿನ್ನುತ್ತಿದ್ದ ಎಲೋನ್ ಮಸ್ಕ್ ವೈಖರಿಯನ್ನು ಅವರ ತಂದೆ ಎರೋಲ್ ಮಸ್ಕ್ ಟೀಕಿಸಿದ್ದರು. ತನ್ನ ಬಿಲಿಯನೇರ್ ಮಗನು ತೂಕವನ್ನು ಇಳಿಸಿಕೊಳ್ಳಬೇಕು. ಅದಕ್ಕಾಗಿ ಗಾರ್ಸಿನಿಯಾ ಕ್ಯಾಂಬೋಜಿಯಾ ಎಂಬ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂಬುದು ಅವರ ತಂದೆಯ ಸಲಹೆಯಾಗಿತ್ತು. ಎಲೋನ್ ಮಸ್ಕ್ ತೂಕವನ್ನು ಕಳೆದುಕೊಳ್ಳಬೇಕು ಎಂಬುದು ತಮ್ಮ ತಂದೆ ಬಯಕೆಯೂ ಆಗಿತ್ತು ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.
ಏಕೆಂದರೆ ದೂರದರ್ಶನದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ 79 ವರ್ಷದ ಎರೋನ್ ಮಸ್ಕ್, ಮಗನ ಬಗ್ಗೆ ಹೇಳಿದ್ದರು. "ಎಲೋನ್ ಮಸ್ಕ್ ಉತ್ತಮವಾಗಿದ್ದಾನೆ, ತುಂಬಾ ಬಲಿಷ್ಠವಾಗಿದ್ದಾನೆ, ಆದರೆ ಕೆಟ್ಟದಾಗಿ ತಿನ್ನುತ್ತಾನೆ," ಎಂದು ಹೇಳಿದ್ದರು.

ಎಲೋನ್ ಮಸ್ಕ್ ವರ್ಕೌಟ್ ಬಗ್ಗೆ ಹೇಳುವುದೇನು?
"ವರ್ಕೌಟ್ ಮಾಡುವುದರ ಬಗ್ಗೆ ಟ್ವಿಟ್ಟರ್ ಸಿಇಒ ಎಲೋನ್ ಮಸ್ಕ್ ಹೇಳಿದ್ದಾರೆ. ನನಗೆ ವರ್ಕೌಟ್ ಮಾಡುವುದು ಎಂದರೆ ಸ್ವಲ್ಪವೂ ಇಷ್ಟವಾಗುವುದಿಲ್ಲ, ಆದರೆ ಅದೀಗ ಅನಿವಾರ್ಯ ಎನ್ನುವ ಹಾಗೆ ಆಗಿದೆ. ನನಗೆ ಇಷ್ಟವಿಲ್ಲದಿದ್ದರೂ, ಉತ್ತಮ ದೇಹಾಕೃತಿಯಾಗಿ ವರ್ಕೌಟ್ ಮಾಡಲೇಬೇಕಾದ ಅನಿವಾರ್ಯತೆಯಿದೆ," ಎಂದು ಎಲೋನ್ ಮಸ್ಕ್ ಹೇಳಿದ್ದಾರೆ.












Click it and Unblock the Notifications