ಬನ್ನಿ.. ಬನ್ನಿ.. ಬೇಗ ಬನ್ನಿ.. ಕಮಲಾ ಹ್ಯಾರಿಸ್‌ಗೆ ಶ್ರೀಮಂತ ಉದ್ಯಮಿ ಚಾಲೆಂಜ್?
ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಾವು ಏರಿದ್ದು, ಎಲ್ಲೆಲ್ಲೂ ಇದರ ಬಗ್ಗೆಯೇ ಭಾರಿ ಚರ್ಚೆ ಶುರುವಾಗಿದೆ. ಅಮೆರಿಕ ಚುನಾವಣೆ ಪ್ರತಿಬಾರಿ ಕೂಡ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತೆ. ಯಾಕಂದ್ರೆ ಅಮೆರಿಕದ ಅಧ್ಯಕ್ಷರು ಜಗತ್ತಿನ ಅತ್ಯಂತ ಪವರ್‌ಫುಲ್ ಮನುಷ್ಯ ಎಂಬ ಪ್ರತೀತಿ ಕಳೆದ ಒಂದು ಶತಮಾನ ಅಂದ್ರೆ 100 ವರ್ಷಗಳಿಂದ ಕೂಡ ಇದೆ. ಹೀಗಿದ್ದಾಗಲೇ ಅಮೆರಿಕದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದ್ದು, ಕಮಲಾ ಹ್ಯಾರಿಸ್ ಅವರಿಗೆ ಜಗತ್ತಿನ ಶ್ರೀಮಂತ ಉದ್ಯಮಿ ಏನು ಹೇಳಿದ್ದಾರೆ ಗೊತ್ತಾ?
ಈಗಿನ ಪರಿಸ್ಥಿತಿ ನೋಡಿದರೆ ಅಮೆರಿಕದ ಬಹುತೇಕ ರಾಜ್ಯಗಳಲ್ಲಿ ಕಮಲಾ ಹ್ಯಾರಿಸ್ ಅವರ ಪರವಾಗಿ ಹೆಚ್ಚಿನ ಬೆಂಬಲ ಸಿಗುತ್ತಿದೆ. ಅದರಲ್ಲೂ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಕಮಲಾ ಹ್ಯಾರಿಸ್ ಅವರ ಪರ ಸುಮಾರು 100 ಕೋಟಿ ರೂಪಾಯಿ ಸಂಗ್ರಹ ಆಗಿದ್ದು, ಈ ರೀತಿ ಚುನಾವಣೆಗಾಗಿ ನಿಧಿ ಸಂಗ್ರಹ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಇದು ಮಾತ್ರವಲ್ಲ ದಿನದಿಂದ ದಿನಕ್ಕೆ, ಕಮಲಾ ಹ್ಯಾರಿಸ್ ಪರವಾಗಿ ಬೆಂಬಲ ಹೆಚ್ಚಾಗುತ್ತಿದೆ. ಹೀಗಿದ್ದಾಗ ಪ್ರಪಂಚದ ಹಾಲಿ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಕಮಲಾ ಹ್ಯಾರಿಸ್ ಅವರನ್ನ ನೇರ ಸಂದರ್ಶನಕ್ಕೆ ಆಹ್ವಾನಿಸಿದ್ದಾರೆ!

ಕಮಲಾರ ಬಗ್ಗೆ ಮಸ್ಕ್ ಹೇಳಿದ್ದೇನು?
ಕಮಲಾ ಹ್ಯಾರಿಸ್ ಚುನಾವಣೆಯಲ್ಲಿ ಗೆಲುವು ಸಾಧಿಸುವ ಸಿದ್ಧತೆಯಲ್ಲಿ ಇದ್ದಾರೆ. ಮತ್ತೊಂದು ಕಡೆ ಡೊನಾಲ್ಡ್ ಟ್ರಂಪ್ ಅವರು ಮತ್ತೊಂದು ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆಗಲು ಬೇಕಾದ ಎಲ್ಲಾ ಪ್ರಯತ್ನ ನಡೆಸುತ್ತಿದ್ದಾರೆ. ಹೀಗಾಗಿ ಇಬ್ಬರಲ್ಲಿ ಯಾರಿಗೆ ಗೆಲುವು? ಯಾರಿಗೆ ಸೋಲು ಎಂಬುದರ ಚರ್ಚೆ ನಡೆಯುವಾಗಲೇ, ಡೊನಾಲ್ಡ್ ಟ್ರಂಪ್ ಅವರ ಸಂದರ್ಶನವನ್ನು ನಡೆಸಿದ್ದ ಎಲಾನ್ ಮಸ್ಕ್, ಇದೀಗ ಕಮಲಾ ಹ್ಯಾರಿಸ್ ಅವರಿಗೂ ಆಹ್ವಾನ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಎಲಾನ್ ಮಸ್ಕ್, 'Happy to host Kamala on an 𝕏 Spaces too' ಎಂದು ಬರೆದುಕೊಂಡಿದ್ದಾರೆ. ಎಲಾನ್ ಮಸ್ಕ್ ಟ್ವೀಟ್ ಈಗ ಸಂಚಲನ ಸೃಷ್ಟಿಸಿದೆ.
Happy to host Kamala on an 𝕏 Spaces too
— Elon Musk (@elonmusk) August 13, 2024
ಡೊನಾಲ್ಡ್ ಟ್ರಂಪ್ ಹೇಳಿದ್ದು ಏನು?
ಅಮೆರಿಕದಲ್ಲಿ 2024ರ ಅಧ್ಯಕ್ಷೀಯ ಚುನಾವಣೆಗೆ ಸಕಲ ಸಿದ್ಧತೆ ಸಾಗಿದ್ದು, ಪ್ರಚಾರ ಕಾರ್ಯ ಕೂಡ ಅಬ್ಬರದಿಂದ ನಡೆದಿದೆ. ಇಂತಹ ಸ್ಥಿತಿಯಲ್ಲಿ ಡೊನಾಲ್ಡ್ ಟ್ರಂಪ್ & ಅಮೆರಿಕದ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ನಡುವೆ ಮಹತ್ವದ ಸಂದರ್ಶನ ನಡೆದಿದ್ದು, ಸಂದರ್ಶನದ ವೇಳೆ ಡೊನಾಲ್ಡ್ ಟ್ರಂಪ್ ತಮ್ಮ ಮೇಲೆ ಗುಂಡಿನ ದಾಳಿ ನಡೆದು ಕಿವಿಗೆ ಬುಲೆಟ್ ಬಡಿದಾಗ ಏನೆಲ್ಲಾ ಆಗಿತ್ತು? ಎಂಬುದನ್ನ ವಿವರಿಸಿದ್ದರು. ತಮ್ಮ ಮೇಲೆ ನಡೆದ ದಾಳಿಯನ್ನ ಡೊನಾಲ್ಡ್ ಟ್ರಂಪ್ ಅವರು 'ಹಾರ್ಡ್ ಹಿಟ್' ಎಂದು ಕರೆದಿದ್ದರು. ಇದೀಗ ಕಮಲಾ ಹ್ಯಾರಿಸ್ ಅವರೂ, ಸಂದರ್ಶನಕ್ಕೆ ಬಂದರೆ ಮತ್ತಷ್ಟು ಕುತೂಹಲ ಮೂಡಲಿದೆ ಅಂತಿದ್ದಾರೆ ನೆಟ್ಟಿಗರು.












Click it and Unblock the Notifications