ಹೈಜಾಕ್ ಡ್ರಾಮಾ ಅಂತ್ಯ, ಅಪಹರಣಕಾರನ ಬಂಧನ

Posted By:
Subscribe to Oneindia Kannada

ಕೈರೋ, ಮಾರ್ಚ್ 29: ಈಜಿಪ್ಟ್ಏರ್ ವಿಮಾನ ಮಂಗಳವಾರ ಬೆಳಗ್ಗೆ ಹೈಜಾಕ್ ಆಗಿದೆ. ಇಲ್ಲಿನ ಕರಾವಳಿ ತೀರದ ಅಲೆಕ್ಸಾಂಡ್ರಿಯಾದಿಂದ ರಾಜಧಾನಿ ಕೈರೋಗೆ ವಿಮಾನ ತೆರಳುತ್ತಿತ್ತು. ವಿಮಾನದಲ್ಲಿ ಒಟ್ಟು 62 ಜನರಿದ್ದಾರೆ. ವಿಮಾನವನ್ನು ಬಲವಂತವಾಗಿ ಸೈಪ್ರಸ್ ನ ಲಾರ್ನಕಾ ವಿಮಾನ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿದೆ.

Cyprus


* ಹೈಜಾಕ್ ಡ್ರಾಮಾ ಅಂತ್ಯ, ಅಪಹರಣಕಾರನ ಬಂಧನ.
* ಹೈಜಾಕ್ ಮಾಡಿದವರು ಡಾ. ಇಬ್ರಾಹಿಂ ಅಲ್ಲ, ಕೈರೋ ವಿಶ್ವ ವಿದ್ಯಾಲಯದ ಇತಿಹಾಸ ವಿಭಾಗದ ಪ್ರೊಫೆಸರ್ ಡಾ. ಸೈಫ್ ಎಲ್ ಡೆನ್ ಮುಸ್ತಫಾ ಎಂದು ತಿಳಿದು ಬಂದಿದೆ.

* ನ್ಯೂಯಾರ್ಕ್ ಗೆ ತೆರಳಬೇಕಿದ್ದ ಡಾ. ಇಬ್ರಾಹಿಂ ಅವರು ವಿವಾಹ ವಿಚ್ಛೇದನ ವಿಷಯವಾಗಿ ತಲೆ ಕೆಡಿಸಿಕೊಂಡಿದ್ದರು. ಹೀಗಾಗಿ ಈ ರೀತಿ ಮಾಡಿರಬಹುದು ಎಂದು ಕುಟುಂಬದ ಮೂಲಗಳು ಹೇಳಿವೆ.

* ವಿಮಾನ ಹೈಜಾಕಿಗೆ ಉಗ್ರರು ಕಾರಣರಲ್ಲ, ಒಡೆದ ಸಂಸಾರ ಕಾರಣ ಎಂದು ಈಜಿಪ್ಟ್ ನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

* ಈಜಿಪ್ಟ್ ಮೂಲದ ಅಮೆರಿಕನ್ ಪ್ರಜೆ ಡಾ. ಇಬ್ರಾಹಿಂ ಸಮಾಹ ಅವರು ಅಲೆಗ್ಸಾಂಡ್ರಿಯಾ ವಿಶ್ವ ವಿದ್ಯಾಲಯದಲ್ಲಿ ಪಶುವೈದ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

* ಡಾ. ಇಬ್ರಾಹಿಂ ಅವರು ತಮ್ಮ ವಿಚ್ಛೇದನ ಪತ್ನಿ ಕೈಲಿ ನಾಲ್ಕು ಪುಟಗಳ ಪತ್ರ ಕಳಿಸಿರುವ ಮಾಹಿತಿ ಇದೆ. ಪತ್ರದಲ್ಲಿ ಏನಿದೆ ಇನ್ನೂ ಬಹಿರಂಗವಾಗಿಲ್ಲ.

Dr. Ibrahim Samaha

* ಮೂಲತಃ ಟರ್ಕಿಯ ಇಸ್ತಾನ್ ಬುಲ್ ನಲ್ಲಿ ವಿಮಾನವನ್ನು ನಿಲ್ಲಿಸಲು ಯತ್ನಿಸಲಾಗಿತ್ತು. ಆದರೆ, ಅಲ್ಲಿ ನಿಲುಗಡೆಗೆ ಆಸ್ಪದ ಸಿಗದ ಕಾರಣ, ಸೈಪ್ರಸ್ ಗೆ ಬರಲಾಯಿತು.

* ಹೈಜಾಕರ್ ಹೆಸರು ಡಾ. ಇಬ್ರಾಹಿಂ ಸಮಹಾ ಬೇಡಿಕೆ ಇನ್ನೂ ಬಹಿರಂಗ ಪಡಿಸಿಲ್ಲ. ಸಿಬ್ಬಂದಿಗಳನ್ನು ಬಿಡುಗಡೆ ಮಾಡಲು ಸಮ್ಮತಿಸುವ ಸಾಧ್ಯತೆ ಕಂಡು ಬಂದಿದೆ. ನಾಲ್ವರು ವಿದೇಶಿಯರಿಗೆ ಪ್ರಾಣಭೀತಿ ಮುಂದುವರೆದಿದೆ.
* ಈ ಸುದ್ದಿಯನ್ನು ಕೇಳಿಸಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

* ಬಿಡುಗಡೆಯಾದ ಮಹಿಳಾ ಪ್ರಯಾಣಿಕರೊಬ್ಬರ ಕೈಲಿ ನಾಲ್ಕು ಪುಟಗಳ ಪತ್ರ ಪತ್ತೆ. ಅರೇಬಿಕ್ ಭಾಷೆಯಲ್ಲಿರುವ ಪತ್ರದಲ್ಲಿ ಬೇಡಿಕೆ ಇರುವ ಬಗ್ಗೆ ಮಾಹಿತಿ ಇರುವ ಸಾಧ್ಯತೆ.

* ಹೈಜಾಕ್ ಮಾಡಿದ ವ್ಯಕ್ತಿಯನ್ನು ಇಬ್ರಾಹಿಂ ಸಮಹಾ ಎಂದು ಗುರುತಿಸಲಾಗಿದೆ.

* ಈಜಿಪ್ಟ್ ಅಧ್ಯಕ್ಷ ಸಿಸಿ ಅವರು ಸೈ ಪ್ರಸ್ ಅಧ್ಯಕ್ಷರಿಗೆ ಕರೆ ಮಾಡಿ ಬೆಳವಣಿಗೆ ಬಗ್ಗೆ ಮಾಹಿತಿ ಪಡೆದಿದ್ದಾರೆ.

* ವಿದೇಶಿ ಪ್ರಯಾಣಿಕರಿಗೆ ಪ್ರಾಣಭೀತಿ, ಹೈಜಾಕರ್ಸ್ ರಿಂದ ಯಾವುದೇ ಬೇಡಿಕೆ ಬಂದಿಲ್ಲ.

* ವಿಮಾನದಲ್ಲಿ ನಾಲ್ಕು ಜನ ವಿದೇಶಿ ಪ್ರಯಾಣಿಕರಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

* ಉಳಿದಂತೆ ಬಹುತೇಕ ಎಲ್ಲಾ ಪ್ರಯಾಣಿಕರನ್ನು ಬಿಡುಗಡೆ ಮಾಡಲಾಗಿದೆ.

* 30 ರಿಂದ 40 ಜನ ಪ್ರಯಾಣಿಕರನ್ನು ಬಿಡುಗಡೆ ಮಾಡಲು ಹೈಜಾಕರ್ಸ್ ಒಪ್ಪಿದ್ದಾರೆ. ಸೈಪ್ರಸ್ ನ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿಗಳ ಪ್ರತಿಕ್ರಿಯೆ.

* ಹೈಜಾಕರ್ಸ್ ಬಳಿ ಶಸ್ತ್ರಾಸ್ತ್ರ ಇರುವ ಬಗ್ಗೆ ಶಂಕೆ, ವಿಮಾನದ ಹತ್ತಿರ ಬಂದರೆ ಸ್ಫೋಟಿಸುವುದಾಗಿ ಬೆದರಿಕೆ.

* ವಿಮಾನ ಎಂಎಸ್ 181ದಲ್ಲಿದ್ದ ಈಜಿಪ್ಟ್ ಮೂಲದ 20 ಪ್ರಯಾಣಿಕರನ್ನು ಬಿಡುಗಡೆ ಮಾಡಲಾಗಿದೆ.

EgyptAir flight hijacked

* ಮಹಿಳೆಯರು ಹಾಗೂ ಮಕ್ಕಳನ್ನು ಮೊದಲಿಗೆ ವಿಮಾನದಿಂದ ಹೊರಕ್ಕೆ ಕಳಿಸಿದ ಹೈಜಾಕರ್ಸ್.

* ಹೈಜಾಕ್ ಮಾಡಿದವರ ಜೊತೆ ಸಂಧಾನ ಮಾತುಕತೆ ಆರಂಭವಾಗಿದೆ.

* ವಿಮಾನದಲ್ಲಿ ಒಟ್ಟು 55 ಜನ ಪ್ರಯಾಣಿಕರು ಹಾಗೂ 7ಜನ ಸಿಬ್ಬಂದಿ ಇದ್ದಾರೆ.

* ವಿಮಾನ ಎಂಎಸ್ 181(ಏರ್ ಬಸ್) ಹೈಜಾಕ್ ಆಗಿರುವುದನ್ನು ಈಜಿಪ್ಟ್ ನ ನಾಗರಿಕ ವಿಮಾನಯಾನ ಪ್ರಾಧಿಕಾರ ದೃಢಪಡಿಸಿದೆ.

* ವಿಮಾನದಲ್ಲಿ ಆತ್ಮಾಹುತಿ ಬಾಂಬರ್ ಇರುವ ಶಂಕೆ ವ್ಯಕ್ತವಾಗಿದೆ.

ಈ ಸುದ್ದಿ ಕುರಿತ ವಿಡಿಯೋ:

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: EgyptAir flight hijacked
English summary
EgyptAir flight from Alexandria to Cairo has been hijacked by Dr. Ibrahim Samaha, American citizen and veterinary doctor originally from Egypt. EgyptAir flight forcefully landed in Larnaca Airport, Cyprus. MS181 is an Airbus and that it has 55 passengers on board and 7 crew members.
Please Wait while comments are loading...