ಈಜಿಪ್ಟ್ ನಲ್ಲಿ ಮಸೀದಿ ಮೇಲೆ ಬಾಂಬ್, ಗುಂಡು ದಾಳಿ: ಕನಿಷ್ಠ 235 ಮಂದಿ ಸಾವು

Posted By:
Subscribe to Oneindia Kannada

ಕೈರೋ, ನವೆಂಬರ್ 24: ಉಗ್ರರು ನಡೆಸಿದ ಬಾಂಬ್ ಹಾಗೂ ಗುಂಡಿನ ದಾಳಿಯಲ್ಲಿ ಕನಿಷ್ಠ 235 ಮಂದಿ ಸಾವನ್ನಪ್ಪಿ, 12 ಮಂದಿ ಗಾಯಗೊಂಡ ಘಟನೆ ಈಜಿಪ್ಟ್ ನ ಮಸೀದಿಯೊಂದರಲ್ಲಿ ಶುಕ್ರವಾರ ಸಂಭವಿಸಿದೆ ಎಂದು ಸರಕಾರಿ ಮಾಧ್ಯಮ ವರದಿ ಮಾಡಿದೆ.

ಯಾವುದೇ ಉಗ್ರಗಾಮಿ ಸಂಘಟನೆ ದಾಳಿ ಈ ದಾಳಿಯ ಹೊಣೆ ಹೊತ್ತಿಕೊಂಡಿಲ್ಲ. ಕಳೆದ ಮೂರು ವರ್ಷಗಳಿಂದ ಈಜಿಪ್ಟ್ ಸೇನೆಯು ಐಎಸ್ ಐಎಸ್ ಉಗ್ರರೊಂದಿಗೆ ಕಾಳಗ ನಡೆಸುತ್ತಿದ್ದು, ಈ ಅವಧಿಯಲ್ಲೇ ನಡೆದ ಭಯಾನಕ ದಾಳಿ ಇದಾಗಿದೆ.

ಬಲೂಚಿಸ್ತಾನದಲ್ಲಿ ಬಾಂಬ್ ಸ್ಫೋಟ, 10 ಸಾವು

ಎಲ್ ಅರಿಶ್ ಗೆ ಪಶ್ಚಿಮಕ್ಕೆ ಇರುವ ಬಿರ್ ಅಲ್-ಅಬೆದ್ ನ ಅಲ್ ರಾದ್ ಮಸೀದಿಯಲ್ಲಿ ನೂರಾರು ರಕ್ತಸಿಕ್ತ ದೇಹಗಳನ್ನು ಹೊದಿಕೆಯಿಂದ ಮುಚ್ಚಿರುವ ಫೋಟೋಗಳನ್ನು ಸರಕಾರಿ ಸ್ವಾಮ್ಯದ ಮಾಧ್ಯಮದಲ್ಲಿ ತೋರಿಸಲಾಗಿದೆ. ಕನಿಷ್ಠ ನೂರಿಪತ್ತು ಮಂದಿ ಮೃತಪಟ್ಟು, ಎಂಬತ್ತು ಮಂದಿ ಗಾಯಗೊಂಡಿರುವುದಾಗಿ ಎಂಇಎನ್ ಎ ವರದಿ ಮಾಡಿದೆ.

Bomb Blast

"ಜನರತ್ತ ಗುಂಡು ಹಾರಿಸಿದ ಅವರು ಮಸೀದಿಯಿಂದ ಹೊರಟರು" ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಆಂಬುಲೆನ್ಸ್ ಕಡೆಗೆ ಕೂಡ ಅವರು ಗುಂಡು ಹಾರಿಸಿದರು ಎಂದು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At least 235 people were killed and dozens more wounded when terrorists set off a bomb and opened fire on people attending prayers at a mosque in Egypt's restive northern Sinai on Friday, state media said.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ