Earthquake: ದೆಹಲಿ, ನೇಪಾಳದಲ್ಲಿ ಪ್ರಬಲ ಭೂಕಂಪ; ಸಾವಿನ ಸಂಖ್ಯೆ 128ಕ್ಕೆ ಏರಿಕೆ!

ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ದೆಹಲಿಗೆ ಹೊಂದಿಕೊಂಡಂತಿರುವ ಹಲವು ನಗರಗಳಲ್ಲಿ ಶುಕ್ರವಾರ ರಾತ್ರಿ (ನವೆಂಬರ್‌ 3) ಪ್ರಬಲ ಭೂಕಂಪ ಸಂಭವಿಸಿದೆ. ದೆಹಲಿ ಹಾಗೂ ಸುತ್ತಮುತ್ತಲಿನ ನಗರಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರವು ಮಾಹಿತಿ ನೀಡಿದೆ.

ನೇಪಾಳದ ಕಠ್ಮಂಡು, ಪಶ್ಚಿಮ ರುಕುಂ, ಜಾಜರಕೋಟ್ ಸೇರಿದಂತೆ ಹಲವೆಡೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ದಾಖಲಾಗಿದೆ. ಘಟನೆಯಲ್ಲಿ 128 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಇನ್ನೂ ತೀವ್ರತೆಯ ಭೂಕಂಪದಿಂದಾಗಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದ್ದು, ಧರೆಗುರುಳಿದ ಹಲವಾರು ಕಟ್ಟಡಗಳ ಅಡಿಯಲ್ಲಿ ಹಲವಾರು ಮಂದಿ ಸಿಲುಕಿದ್ದು ಅವರನ್ನು ಹೊರತಗೆಯುವ ಪ್ರಯತ್ನಗಳು ಸಾಗಿವೆ. ಅಮೆರಿಕದ ಭೂವಿಜ್ಞಾನ ಇಲಾಖೆಯು ಈ ಭೂಕಂಪದ ಕೇಂದ್ರ ಸ್ಥಾನವನ್ನು ದಾಖಲಿಸಿದ್ದು ಅದು ನೇಪಾಳದ ಪಶ್ಚಿಮದ ಗಡಿಭಾಗದಲ್ಲಿ ನೆಲಮಟ್ಟದಿಂದ ಕೆಳಕ್ಕೆ 18 ಕಿ.ಮೀ. ದೂರದಲ್ಲಿತ್ತೆಂದು ಹೇಳಿದೆ.

Earthquake of 6.4 magnitude jolts Nepal; 70 killed, many injured

ಇನ್ನೂ ರಾಷ್ಟ್ರ ರಾಜಧಾನಿ ದೆಹಲಿ-ಎನ್‌ಸಿಆರ್ ಪ್ರದೇಶ, ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಪ್ರಬಲ ಕಂಪನಗಳು ಸಂಭವಿಸಿವೆ. ಭೂಕಂಪನದ ರಾಷ್ಟ್ರೀಯ ಕೇಂದ್ರ (NCS) ಪ್ರಕಾರ, ಭೂಕಂಪವು ಶುಕ್ರವಾರ ರಾತ್ರಿ 11:32 ಕ್ಕೆ 10 ಕಿಮೀ ಆಳದಲ್ಲಿ ಸಂಭವಿಸಿದೆ ಎಂದು ತಿಳಿದು ಬಂದಿದೆ. ಆದರೆ, ಯಾವುದೇ ಕಟ್ಟಡ ಹಾನಿ ಅಥವಾ ಸಾವು ನೋವು ಸಂಭವಿಸಿಲ್ಲ, ಮುಂತಾದ ಕಡೆಗಳಲ್ಲಿ ಕಂಪನದ ಅನುಭವ ಉಂಟಾಗಿದೆ.

ನೇಪಾಳದಲ್ಲಿನ ತೀವ್ರತೆ ಭೂಕಂಪನವನ್ನು ಕಣ್ಣಾರೆ ಕಂಡ ಜನರು, ಭಯಬೀತರಾಗಿದ್ದು, ಭೂಕಂಪ ಪೀಡಿತ ಪ್ರದೇಶಗಳಲ್ಲಿ ಕಟ್ಟಡಗಳು ಉರುಳುತ್ತಿದ್ದುದು, ಅದರ ಅಡಿಗಳಲ್ಲಿ ಜನರು ಸಿಲುಕಿಕೊಂಡು ಜೋರಾಗಿ ಕೂಗಾಡುತ್ತಿದ್ದುದ್ದನ್ನು ಕಣ್ಣಾರೆ ಕಂಡಿದ್ದಾರೆ. ಅಲ್ಲದೇ ಧರೆಗುರುಳಿದ ಕಟ್ಟಡಗಳಲ್ಲಿ ಅನೇಕ ಮಂದಿ ಸಿಲುಕಿದ್ದಾರೆ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ.

ನೇಪಾಳದ ಪಶ್ಚಿಮ ಭಾಗದಲ್ಲಿರುವ ಜಾಜರ್ ಕೋಟ್ ಜಿಲ್ಲೆಯಲ್ಲಿ 26 ಮಂದಿ ಸಾವಿಗೀಡಾಗಿದ್ದಾರೆ, ರುಕ್ಕುಮ್ ಜಿಲ್ಲೆಯಲ್ಲಿ 33 ಮಂದಿ ಸಾವಿಗೀಡಾಗಿದ್ದಾರೆ. ಈಗಾಗಲೇ 70 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಆದರೆ, ಸರ್ಕಾರ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

ಭಾರತದ ಭೂಭಾಗವು, ಯುರೇಷಿಯನ್ ಭೂಭಾಗವನ್ನು ಸ್ಪರ್ಶಿಸಿದ್ದ ಭಾಗದಲ್ಲೇ ನೇಪಾಳ ದೇಶವಿದೆ. ಹಾಗಾಗಿ, ಇಲ್ಲಿ ಪ್ರಾಕೃತಿಕ ವಿಕೋಪಗಳು ಸಾಮಾನ್ಯ ಸಂಗತಿಗಳಾಗಿದ್ದು ಅದರಲ್ಲೂ ವಿಶೇಷವಾಗಿ ಆ ದೇಶ ಆಗಾಗ್ಗೆ ಭೂಕಂಪನಗಳಿಗೆ ಈಡಾಗುತ್ತಿರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸುಮಾರು ಆರು ತಿಂಗಳ ಹಿಂದೆಯೂ ಅಲ್ಲಿ ಒಂದೇ ದಿನ ಎರಡು ಬಾರಿ ಭೂಮಿ ಕಂಪಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+