ಅಮೆರಿಕ; ಅಲಾಸ್ಕ ಬಳಿ 7.4 ತೀವ್ರತೆಯ ಭೂಕಂಪ
ನವದೆಹಲಿ, ಜುಲೈ 16; ಅಮೆರಿಕದ ಅಲಾಸ್ಕ ಬಳಿ 7.4 ತೀವ್ರತೆಯ ಭೂಕಂಪ ಉಂಟಾಗಿದೆ. ಪೆನಿನ್ಸುಲಾ ಪ್ರದೇಶದ ಬಳಿ ಇಂದು ಭೂಕಂಪ ಸಂಭವಿಸಿದೆ ಎಂದು ಯುಎಸ್‌ಜಿಎಸ್ ಹೇಳಿದೆ. ಸುನಾಮಿ ಎಚ್ಚರಿಕೆಯನ್ನು ಸಹ ನೀಡಲಾಗಿದೆ.
ಭಾನುವಾರ ಸಂಭವಿಸಿದ ಭೂಕಂಪದ ಬಗ್ಗೆ ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ಖಚಿತಪಡಿಸಿದೆ. ಭೂಮಿಯಿಂದ 9.3 ಕಿ. ಮೀ. ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ.

7.4 ತೀವ್ರತೆಯ ಭೂಕಂಪ ಸಂಭವಿಸಿರುವುದರಿಂದ ಸುನಾಮಿಯ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಅಲಾಸ್ಕದಲ್ಲಿರುವ ಭೂಕಂಪ ಮಾಪನ ಕೇಂದ್ರ ಅಲಾಸ್ಕ, ಪೆನಿನ್ಸುಲಾ ದ್ವೀಪದದಲ್ಲಿ ಭೂಮಿ ಕಂಪಿಸಿದೆ ಎಂದು ಹೇಳಿದೆ.
ಅಮೆರಿಕದ ಅಲಸ್ಕಾ ದ್ವೀಪದಲ್ಲಿ ಭೂಕಂಪ ಆಗುತ್ತಿರುವುದು ಇದೇ ಮೊದಲಲ್ಲ. ಕಳೆದ ಹಲವಾರು ವರ್ಷಗಳಿಂದ ಅಲಸ್ಕಾ, ಪೆನಿನ್ಸುಲಾ ದ್ವೀಪದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಬಾರಿ ಭೂಕಂಪ ಸಂಭವಿಸಿದೆ. ಆಗ ಸುನಾಮಿಯ ಎಚ್ಚರಿಕೆಯನ್ನು ಸಹ ನೀಡಲಾಗುತ್ತದೆ.
2020ರ ಜುಲೈನಲ್ಲಿ 7.8ರಷ್ಟು ತೀವ್ರತೆಯ ಭೂಕಂಪ ಈ ಭಾಗದಲ್ಲಿ ಸಂಭವಿಸಿತ್ತು. ಆಗಲೂ ಭೂಕಂಪ ಪ್ರಬಲವಾಗಿದ್ದ ಕಾರಣ ದಕ್ಷಿಣ ಅಲಸ್ಕಾ, ಅಲಸ್ಕಾ ಪೆನಿನ್ಸುಲಾ ಮತ್ತು ಅಲ್ಯೂಶಿಯನ್ ದ್ವೀಪಗಳ ಸುತ್ತಲಿನ 300 ಕಿ. ಮೀ. ವಿಸ್ತೀರ್ಣಕ್ಕೆ ಸುನಾಮಿ ಎಚ್ಚರಿಕೆಯನ್ನು ಕೊಡಲಾಗಿತ್ತು.












Click it and Unblock the Notifications