ಪಾಕಿಸ್ತಾನದಲ್ಲಿ ಭೂಕಂಪ: ಓರ್ವ ಬಾಲಕಿ ಸಾವು
ಕ್ವೆಟ್ಟಾ, ಜನವರಿ 31: ಪಾಕಿಸ್ತಾನದ ಕ್ವೆಟ್ಟಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಓರ್ವ ಬಾಲಕಿ ಬಲಿಯಾಗಿದ್ದು, 9 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಭೂಕಂಪದಿಂದಾಗಿ ಮನೆಯ ಮೇಲ್ಛಾವಣಿ ಕುಸಿದ ಪರಿಣಾಮ ಬಾಲಕಿ ಸಾವನ್ನಪ್ಪಿದ್ದಾಳೆ. ರಿಕ್ಟರ್ ಮಾಪನದಲ್ಲಿ 6.9 ತೀವ್ರತೆ ದಾಖಲಾಗಿದೆ.
ರಕ್ಷಣಾ ತಂಡ ಈಗಾಗಲೇ ಆಗಮಿಸಿದ್ದು, ಗಾಯಗೊಂಡವರನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಫ್ಘಾನಿಸ್ತಾನದ ಹಿಂದು ಕುಶ್ ಭುಕಂಪ ಕೇಂದ್ರವಾಗಿದ್ದು, ಪಾಕಿಸ್ತಾನ, ಉಜ್ಬೇಕಿಸ್ತಾನ ಮತ್ತು ಉತ್ತರ ಭಾರತದ ಹಲವೆಡೆಯಲ್ಲೂ ಭುಕಂದ ಅನುಭವವಾಗಿದೆ.













Click it and Unblock the Notifications