ಚೀನಾದಲ್ಲಿ ಭಾರಿ ಭೂಕಂಪ, 8 ಮಂದಿ ಸಾವು
ಚೀನಾದಲ್ಲಿ ಗುರುವಾರದಂದು ಭಾರಿ ಭೂಕಂಪ ಸಂಭವಿಸಿದೆ. ಕ್ಸಿನ್ ಜಿಯಾಂಗ್ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕಂಪಕ್ಕೆ 8 ಮಂದಿ ಬಲಿಯಾಗಿದ್ದು, 20 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಬೀಜಿಂಗ್, ಮೇ 11: ಚೀನಾದಲ್ಲಿ ಗುರುವಾರದಂದು ಭಾರಿ ಭೂಕಂಪ ಸಂಭವಿಸಿದೆ. ಕ್ಸಿನ್ ಜಿಯಾಂಗ್ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕಂಪಕ್ಕೆ 8 ಮಂದಿ ಬಲಿಯಾಗಿದ್ದು, 20 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ರಿಕ್ಚರ್ ಮಾಪಕದಲ್ಲಿ 5.5 ತೀವ್ರತೆ ಕಂಡು ಬಂದಿದೆ. ಪಮೀರ್ ಪ್ಲಾಗೂ ನ ಆಗ್ನೇಯ ಭಾಗ ಭೂಕಂಪದ ಕೇಂದ್ರ ಸ್ಥಾನ ಎಂದು ಗುರುತಿಸಲಾಗಿದೆ. ಅಫ್ಘಾನಿಸ್ತಾನ, ಪಾಕಿಸ್ತಾನ ಹಾಗೂ ತಜಕಿಸ್ತಾನದಿಂದ 1250 ಕಿ. ಮೀ ದೂರದಲ್ಲಿ ಈ ಪ್ರದೇಶವಿದೆ.

ಅತ್ಯಂತ ಪುರಾತನ ಸಿಲ್ಕ್ ರೂಟ್ ಎನಿಸಿಕೊಂಡಿರುವ ಚೀನಾ ಹಾಗೂ ಪಾಕಿಸ್ತಾನದ ಕಷ್ಕರ್ ಹಾದಿಯಲ್ಲಿರುವ ಈ ಪ್ರದೇಶದಲ್ಲಿ ಸುಮಾರು 33 ಸಾವಿರ ಜನಸಂಖ್ಯೆ ಇದೆ.
2003ರಲ್ಲಿ 6.8 ತೀವ್ರತೆಯ ಭೂಕಂಪಕ್ಕೆ ಸರಿ ಸುಮಾರು 268 ಮಂದಿ ಬಲಿಯಾಗಿದ್ದರು. 2008ರಲ್ಲಿ ಚೀನಾ ಅತ್ಯಂತ ಭೂಕಂಪಕ್ಕೆ ಸುಮಾರು 90 ಸಾವಿರ ಮಂದಿ ಮೃತಪಟ್ಟಿದ್ದರು.












Click it and Unblock the Notifications