ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ & ಡೊನಾಲ್ಡ್ ಟ್ರಂಪ್ ಸಮಬಲ!
ಅಮೆರಿಕ ಅಧ್ಯಕ್ಷೀಯ ಚುನಾವಣೆ ನವೆಂಬರ್ 5ನೇ ತಾರೀಖು ನಡೆಯಲಿದೆ. ಇಡೀ ಅಮೆರಿಕ ಇದೀಗ ಚುನಾವಣೆಗೆ ಮತದಾನ ಮಾಡಲು ಸಜ್ಜಾಗಿದೆ. ಇಂತಹ ಸಮಯದಲ್ಲೇ ಕಮಲಾ & ಟ್ರಂಪ್ ನಡುವಿನ ಹೋರಾಟದಲ್ಲಿ ಸಮಬಲ ಕಂಡುಬಂದಿದ್ದು, ಅವಧಿ ಪೂರ್ವ ಮತದಾನ ಪ್ರಕ್ರಿಯೆಯಲ್ಲಿ ಇಬ್ಬರೂ ಸಮ ಮತಗಳನ್ನ ಪಡೆದಿದ್ದು ಭಾರಿ ಭರ್ಜರಿ ಕುತೂಹಲ ಕೆರಳಿದೆ. ಈ ಹಿಂದೆ ಡೊನಾಲ್ಡ್ ಟ್ರಂಪ್ ಅವರನ್ನು ಕಮಲಾ ಹ್ಯಾರಿಸ್ ಹಿಂದಿಕ್ಕಿ ಮುಂದೆ ನುಗ್ಗುತ್ತಿದ್ದರು. ಆದರೆ ದಿಢೀರ್ ಟ್ರಂಪ್ ಪರ ಅಲೆ ಎದ್ದಿದ್ದು, ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸುಮಾರು 200 ವರ್ಷಗಳಿಗೂ ಹೆಚ್ಚು ಇತಿಹಾಸ ಇದ್ದು, ಆಧುನಿಕ ಪ್ರಜಾಪ್ರಭುತ್ವ ಮಾದರಿ ಆಡಳಿತ ಅಳವಡಿಕೆ ಮಾಡಿಕೊಂಡ ಮೊದಲ ದೇಶವೂ ಇದಾಗಿದೆ. ಅಮೆರಿಕ ಜಗತ್ತಿನ ಆರ್ಥಿಕತೆಯಲ್ಲಿ ನಂಬರ್ 1 ಸ್ಥಾನ ಪಡೆದಿದ್ದು, ಯಾವುದೇ ಮೂಲೆಯಲ್ಲಿ ಆಗಿದ್ದರೂ ಅಮೆರಿಕ ವಸ್ತುಗಳು ಸಿಕ್ಕೇ ಸಿಗುತ್ತವೆ. ಹೀಗೆ ಅಮೆರಿಕ ಪ್ರಪಂಚದ ಪ್ರತಿಯೊಂದು ದೇಶಕ್ಕೂ ಅಗತ್ಯವಿರುವ ರಾಷ್ಟ್ರ. ಹೀಗಾಗಿ ಇಂತಹ ದೇಶದಲ್ಲಿ ಅಧ್ಯಕ್ಷೀಯ ಚುನಾವಣೆ ಅಂದ್ರೆ ಅದು ಜಗತ್ತಿಗೆ ನಡೆಯುವ ಚುನಾವಣೆ ರೀತಿ. ಈಗಲೂ ಅಷ್ಟೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಂತಿಮ ಹಂತಕ್ಕೆ ಬಂದು ನಿಂತಿದ್ದು, ಸಂಚಲನ ಸೃಷ್ಟಿಸುವ ಹೊಸ ಮಾಹಿತಿ ಇದೀಗ ಹೊರ ಬಿದ್ದಿದೆ!

50 ರಾಜ್ಯಗಳಲ್ಲಿ ಮತದಾನಕ್ಕೆ ಸಿದ್ಧತೆ!
ಅಮೆರಿಕದ ಒಟ್ಟು 50 ರಾಜ್ಯಗಳು ಇದೀಗ ಮತದಾನಕ್ಕೆ ಸಜ್ಜಾಗಿದ್ದು ಈಗಾಗಲೇ ಅವಧಿ ಪೂರ್ವ ವೋಟಿಂಗ್ ಕೂಡ ಶುರುವಾಗಿದೆ. ಹೀಗೆ ಶುರುವಾಗಿರುವ ಮತದಾನದ ವೇಳೆ ಭಾರತದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಬರೋಬ್ಬರಿ ಶೇಕಡಾ 49 ರಷ್ಟು ಮತ ಪಡೆದಿದ್ದರೆ. ಇದೇ ವೇಳೆ ಡೊನಾಲ್ಡ್ ಟ್ರಂಪ್ ಶೇ. 48 ರಷ್ಟು ಮತ ಪಡೆದಿದ್ದಾರೆ. ಹೀಗಾಗಿ ಬಹುತೇಕ ಇಬ್ಬರ ನಡುವೆ ಸಮಬಲದ ಹೋರಾಟವೂ ಏರ್ಪಟ್ಟಿದೆ. ಮುಂದಿನ ದಿನಗಳಲ್ಲಿ ಟ್ರೆಂಡ್ ಇನ್ನಷ್ಟು ಬದಲಾವಣೆ ಕಂಡು, ಡೊನಾಲ್ಡ್ ಟ್ರಂಪ್ ಪರವಾಗಿ ಅಲೆ ಮೂಡುವ ಮುನ್ಸೂಚನೆ ಇದೀಗ ಸಿಗುತ್ತಿದೆ.
ಎಲಾನ್ ಮಸ್ಕ್ 8 ಕೋಟಿ ಆಫರ್!
ಅಂದಹಾಗೆ ರಿಪಬ್ಲಿಕನ್ ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ಕೆ ಮತ್ತಷ್ಟು ಬಲ ನೀಡಲು & ಈ ಮೂಲಕ ಡೊನಾಲ್ಡ್ ಟ್ರಂಪ್ ಸೇರಿದಂತೆ, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಬೇಕಿರುವ ಎಲ್ಲಾ ಪ್ರಯತ್ನ ಮಾಡಲು ಎಲಾನ್ ಮಸ್ಕ್ ಮುಂದಾಗಿದ್ದಾರೆ. ಇದೇ ಕಾರಣಕ್ಕೆ, ಬೆಂಬಲಿಗರಿಗೆ ಸುಮಾರು 8 ಕೋಟಿ ರೂಪಾಯಿ ಬಹುಮಾನ ಮೊತ್ತವನ್ನು ಕೂಡ ಎಲಾನ್ ಮಸ್ಕ್ ಘೋಷಣೆ ಮಾಡಿದ್ದಾರೆ.
ಹೀಗೆ, ಮಸ್ಕ್ ಬಹುಮಾನ ಘೋಷಣೆ ಮಾಡಿರುವ ವಿಚಾರ ಇದೀಗ ಜಗತ್ತಿನಾದ್ಯಂತ ದೊಡ್ಡ ಸದ್ದು ಕೂಡ ಮಾಡುತ್ತಿದೆ. ಅಲ್ಲದೆ, ಡೊನಾಲ್ಡ್ ಟ್ರಂಪ್ ಅವರಿಗೆ ಈಗ ಮತದಾರರ ಬೆಂಬಲ ಹೆಚ್ಚಾಗುವ ನಿರೀಕ್ಷೆ ಕೂಡ ಮೂಡಿದೆ. ಇದೇ ರೀತಿ ಅಮೆರಿಕದ ದೊಡ್ಡ ದೊಡ್ಡ ಉದ್ಯಮ ನಡೆಸುವವರು ಡೊನಾಲ್ಡ್ ಟ್ರಂಪ್ ಅವರ ಬೆನ್ನಿಗೆ ನಿಂತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಬದಲಾವಣೆಗೆ ಕಾರಣವಾಗುವ ನಿರೀಕ್ಷೆ ದಟ್ಟವಾಗಿದೆ.












Click it and Unblock the Notifications