ಎಣ್ಣೆ ಮಾರಾಟ ಬಂದ್, ಈ 3 ದಿನಗಳ ಕಾಲ ಬಾರ್ & ಎಂಆರ್‌ಪಿ ಬಂದ್... Dry Days And Holidays
ಎಣ್ಣೆ ಅಂದ್ರೆ ಲಿಕ್ಕರ್ ಮಾರಾಟದ ಮೂಲಕ ಸರ್ಕಾರಗಳು ಸಾವಿರಾರು ಕೋಟಿ ರೂಪಾಯಿ ಆದಾಯ ಗಳಿಸಿ ಲಾಭ ಮಾಡುತ್ತವೆ. ಹಾಗೇ ದಿನದಿಂದ ದಿನಕ್ಕೆ, ಎಣ್ಣೆ ಹೊಡೆಯುವವರ ಸಂಖ್ಯೆ ಕೂಡ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಆಗುತ್ತಲೇ ಇದೆ. ಮದ್ಯ ಮಾರಾಟ ಮಾಡುವ ಕಂಪನಿಗಳು ಈ ಮೂಲಕ ಭರ್ಜರಿ ಲಾಭ ಕೂಡ ಮಾಡುತ್ತಿದ್ದಾರೆ. ಅಕಸ್ಮಾತ್ ಒಂದು ದಿನ ಬಾರ್ ಅಥವಾ ಎಂಆರ್‌ಪಿ ಬಂದ್ ಆಗಿಬಿಟ್ಟರೆ ಒದ್ದಾಡುವ ಜನರು ದೊಡ್ಡ ಪ್ರಮಾಣದಲ್ಲಿ ಇದ್ದಾರೆ. ಹೀಗಿದ್ದಾಗ ಎಣ್ಣೆ ಮಾರಾಟ ಬಂದ್ ಆಗಲಿದ್ದು, ಈ 3 ದಿನಗಳ ಕಾಲ ಬಾರ್ & ಎಂಆರ್‌ಪಿ ಬಾಗಿಲು ತೆಗೆಯೋದಿಲ್ಲ...
ಕರ್ನಾಟಕದಲ್ಲಿ ಎಣ್ಣೆ ರೇಟ್ ಜಾಸ್ತಿ ಅಂತ ಕೊರಗುತ್ತಿದ್ದ ಮದ್ಯ ಪ್ರಿಯರು 2026 ಬಜೆಟ್‌ನಲ್ಲಿ ಮದ್ಯದ ಬೆಲೆ ಕಡಿಮೆ ಆಗಬಹುದು ಅಂತಾ ಕಾಯುತ್ತಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ ಎಣ್ಣೆ ರೇಟ್ ಜಾಸ್ತಿ ಎಂದು ಕೊರಗುವವರು ಇದ್ದಾರೆ. ಆದರೆ ಬೇರೆ ರಾಜ್ಯದಲ್ಲಿ ಕ್ವಾಲಿಟಿ ಇಲ್ಲ ಆದರೆ ಕರ್ನಾಟಕದಲ್ಲಿ ಎಣ್ಣೆ ಕ್ವಾಲಿಟಿ ಇದೆ, ಹೀಗಾಗಿ ಬೆಲೆ ಜಾಸ್ತಿ ಎಂದು ಸಮಜಾಯಿಷಿ ಕೊಟ್ಟು ಕುಡಿಯುವವರು ಕೂಡ ಇದ್ದಾರೆ. ಆದರೆ ಇವರೆಲ್ಲರಿಗೂ ಇದೀಗ ದೊಡ್ಡ ಆಘಾತವೇ ಎದುರಾಗಲಿದ್ದು, ಬಾರ್ & ಎಂಆರ್‌ಪಿ ಬಾಗಿಲು ಈ ದಿನ ಬಂದ್ ಆಗಲಿದೆ. ಯಾವ ಯಾವ ದಿನ ಎಣ್ಣೆ ಸಿಗೋದಿಲ್ಲ? ಬನ್ನಿ ತಿಳಿಯೋಣ.

3 ದಿನಗಳ ಕಾಲ ಬಾರ್ & ಎಂಆರ್‌ಪಿ ಬಂದ್!
ಜನವರಿ 26 ಭಾರತದ ಗಣರಾಜ್ಯೋತ್ಸವದ ದಿನ, ಹೀಗಿದ್ದಾಗ ಇಡೀ ದೇಶದಲ್ಲಿ ಸಂಭ್ರಮ ಕಳೆಗಟ್ಟುತ್ತದೆ. ಗಣರಾಜ್ಯೋತ್ಸವ ಆಚರಣೆ ಅದ್ಧೂರಿಯಾಗಿ ನೆರವೇರುತ್ತದೆ, ಹೀಗಾಗಿ ಈ ದಿನ ಎಣ್ಣೆ ಮಾರಾಟವನ್ನು ಎಂದರೆ ಮದ್ಯ ಮಾರಾಟವನ್ನು ಬಂದ್ ಮಾಡಲಾಗುತ್ತದೆ. ಬಾರ್ ಮತ್ತು ಎಂಆರ್‌ಪಿ ಬಾಗಿಲು ಬಂದ್ ಆಗಲಿದ್ದು, ಎಣ್ಣೆ ಸಿಗೋದಿಲ್ಲ. ಈ ಬಾರಿ ಜನವರಿ 26 ಸೋಮವಾರ ಬಂದಿದ್ದು, ವೀಕೆಂಡ್ ಪಾರ್ಟಿ ಮಾಡುವವರಿಗೆ ಸಮಸ್ಯೆ ಇಲ್ಲ. ನಮ್ಮ ಬೆಂಗಳೂರು, ನಮ್ಮ ಕರ್ನಾಟಕ ರಾಜ್ಯದಲ್ಲಿ ಮಾತ್ರ ಭಾಗಶಃ ಇಡೀ ದೇಶದಲ್ಲೇ ಮದ್ಯ ಮಾರಾಟ ಈ ದಿನ ಬಂದ್ ಆಗಲಿದೆ. ಇದರ ಜೊತೆಗೇ ಈ ವರ್ಷ ಇನ್ನೂ 2 ದಿನ ಮದ್ಯ ಮಾರಾಟ ಬಂದ್ ಆಗಲಿದೆ.
ಎಣ್ಣೆ ಮಾರಾಟ ಬಂದ್...
ಹೌದು, ಭಾರತದ ಗಣರಾಜ್ಯೋತ್ಸವದ ದಿನವಾದ ಜನವರಿ 26 ಸೇರಿದಂತೆ ಭಾರತದ ಸ್ವಾತಂತ್ರೋತ್ಸವ ದಿನವಾದ ಆಗಸ್ಟ್ 15ಕ್ಕೆ ಕೂಡ ಮದ್ಯ ಮಾರಾಟ ಬಂದ್ ಆಗಲಿದೆ. ಇದರ ಜೊತೆಗೆ ಅಕ್ಟೋಬರ್ 2 ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಕೂಡ ಮದ್ಯ ಸಿಗುವುದಿಲ್ಲ. ಮತ್ತೊಂದು ಕಡೆ ಈ ವರ್ಷ ಸಾಲು, ಸಾಲು ಚುನಾವಣೆಗಳು ಕೂಡ ಕರ್ನಾಟಕ ರಾಜ್ಯದಲ್ಲಿ ನಡೆಯಲಿವೆ. ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳ ಜೊತೆಗೆ ಗ್ರೇಟರ್ ಬೆಂಗಳೂರು ಚುನಾವಣೆ ಕೂಡ ಹತ್ತಿರ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಕೂಡ ಮದ್ಯ ಮಾರಾಟ ಬಂದ್ ಆಗುವುದು ಗ್ಯಾರಂಟಿ.












Click it and Unblock the Notifications