ಫಾಸ್ಟ್‌ ಫುಡ್ ಸೇವನೆ ಅನಾರೋಗ್ಯಕರ: ಮೆಕ್‌ ಡೊನಾಲ್ಡ್

Dont eat fastfood- Macdonald advises its workers to avoid eating fast food
ವಾಷಿಂಗ್ಟನ್, ಡಿ. 26: ಫಾಸ್ಟ್‌ ಫುಡ್ ಆಹಾರ ಪದಾರ್ಥಗಳನ್ನು ಅತಿಯಾಗಿ ಸೇವಿಸದಂತೆ ತನ್ನ ಉದ್ಯೋಗಿಗಳಿಗೆ ಮೆಕ್‌ ಡೊನಾಲ್ಡ್ ಉದ್ಯೋಗಿ ಸಂಪನ್ಮೂಲ ಜಾಲತಾಣ ಎಚ್ಚರಿಸಿದೆ. 'ಫಾಸ್ಟ್‌ಫುಡ್‌ಗಳು ಕ್ಷಿಪ್ರ, ಸೂಕ್ತದರ ಹಾಗೂ ಮನೆ ಅಡುಗೆಗೆ ಪರ್ಯಾಯವಾಗಿ ಸುಲಭದಲ್ಲಿ ಲಭಿಸುವುದಾದರೂ ಇವು ಆರೋಗ್ಯಕ್ಕೆ ಅಪಾಯಕಾರಿ' ಎಂದು ಅದು ವಿವರಿಸಿದೆ.

'ಇಂದಿನ ತುರ್ತು ಜೀವನಶೈಲಿ ದಿನಗಳಲ್ಲಿ ಅನುಕೂಲಕರವೆನಿಸುವ ಹಾಗೂ ಆರ್ಥಿಕವಾಗಿಯೂ ಸುಲಭವೆನಿಸುವ ಫಾಸ್ಟ್‌ ಫುಡ್ ಪದಾರ್ಥಗಳು ಅಧಿಕ ಕ್ಯಾಲೊರಿಗಳಿಂದ ಕೂಡಿರುತ್ತವೆ. ಅವು ಅತಿಯಾದ ಕೊಬ್ಬಿನಂಶ, ಸಕ್ಕರೆ ಹಾಗೂ ಉಪ್ಪಿನಂಶವನ್ನು ಸಹ ಒಳಗೊಂಡಿದ್ದು, ಇಂತಹ ಆಹಾರ ಸೇವನೆಯಿಂದ ಸ್ಥೂಲಕಾಯದ ಅಪಾಯ ಎದುರಾಗುತ್ತದೆ' ಎಂದು ಜಾಲತಾಣದಲ್ಲಿ ವಿವರಿಸಲಾಗಿದೆ.

ಜಾಲತಾಣದಲ್ಲಿ ಪ್ರಕಟಿಸಲಾಗಿರುವ ಈ ವಿವರವನ್ನು ಅದರ Health Encyclopedia ವಿಭಾಗವು ಒದಗಿಸಿದೆ. ಮೆಕ್‌ ಡೊನಾಲ್ಡ್‌ ಉತ್ಪನ್ನಗಳಾದ ಬರ್ಗರ್, ಕರಿದ ಪದಾರ್ಥ ಹಾಗೂ ಸೋಡಾ ಸೇವನೆಯು ಅನಾರೋಗ್ಯಕರ ಆಯ್ಕೆ ಎಂದು ಜಾಲತಾಣದ ಪ್ರಕಟಣೆ ಎಚ್ಚರಿಸಿದೆ.

'ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ಹೃದಯ ಕಾಯಿಲೆಗಳಿರುವ ಜನರು ಫಾಸ್ಟ್‌ ಫುಡ್‌ ಗಳನ್ನು ಆಯ್ಕೆ ಮಾಡುವಾಗ ಅವುಗಳಲ್ಲಿರುವ ಅತಿಯಾದ ಕೊಬ್ಬಿನಾಂಶ, ಉಪ್ಪು ಹಾಗೂ ಸಕ್ಕರೆ ಪ್ರಮಾಣದ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ' ಎಂದು ಮೆಕ್‌ ಡೊನಾಲ್ಡ್‌ ಜಾಲತಾಣ ತನ್ನ ಉದ್ಯೋಗಿಗಳಿಗೆ ವಿವರಿಸಿದೆ.

ಮ್ಯಾಕ್‌ ಡೊನಾಲ್ಡ್‌ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ತಮ್ಮ ಕಂಪನಿ ಯಾವುದೇ ಜಂಕ್‌ ಫ‌ುಡ್‌ ಗಳನ್ನು ಮಾರಾಟ ಮಾಡುತ್ತಿಲ್ಲ ಎಂದೂ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+