Donald Trump: ಯುಎಸ್ ನೂತನ ಅಧ್ಯಕ್ಷರಾಗಿ ಡೋನಾಲ್ಡ್ ಟ್ರಂಪ್ ಅಧಿಕಾರ ಸ್ವೀಕಾರ: ಯಾರೆಲ್ಲ ಅತಿಥಿಗಳು ಭಾಗಿ?
US Donald Trump: ವಿಶ್ವದ ದೊಡ್ಡಣ್ಣ ಅಮೆರಿಕ 47 ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ನಾಳೆ ಸೋಮವಾರ (ಜನವರಿ 20) ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರ ಬೆಂಬಲಿಗರು ಭರ್ಜರಿ ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ. ಕೇವಲ ಅಮೆರಿಕಾ ಮಾತ್ರವಲ್ಲ ಬೇರೆ ಬೇರೆ ದೇಶಗಳಲ್ಲಿ ಅವರ ಬೆಂಬಲಿಗರು ಪಟಾಕಿ ಸಿಡಿಸಿ ಖುಷಿಯ ಕ್ಷಣಗಳನ್ನು ಆಚರಣೆ ಮಾಡುತ್ತಿದ್ದಾರೆ. ಹಾಗಾದರೆ ನಾಳಿನ ಬೃಹತ್ ಕಾರ್ಯಕ್ರಮಕ್ಕೆ ಯಾರನ್ನೆಲ್ಲ ಆಹ್ವಾನಿಸಲಾಗಿದೆ.
ಅಮರಿಕಾದ ಅಧಿಕಾರವನ್ನು ಅಧಿಕೃತವಾಗಿ ಸ್ವೀಕರಿಸುತ್ತಿದ್ದಂತೆ ಡೊನಾಲ್ಡ್ ಟ್ರಂಪ್ ಮ್ಮ ಉದ್ಘಾಟನಾ ಭಾಷಣ ಮಾಡಲಿದ್ದಾರೆ.

ಅಮೆರಿಕದ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸಮಾರಂಭ ಜರುಗಲಿದೆ. ಬೆಳಗ್ಗೆ ಐದು ಗಂಟೆಯಿಂದ ಕಾರ್ಯಕ್ರಮದಲ್ಲಿ ಸ್ಥಳದಲ್ಲಿ ನ್ಯಾಷನಲ್ ಮಾಲ್‌ನಲ್ಲಿ ಮತ್ತೊಂದು ಮತ್ತು ಕೊನೆಯ ಸುತ್ತಿನ ಭದ್ರತಾ ತಪಾಸಣೆ ಪ್ರಾರಂಭವಾಗುತ್ತದೆ.
ಸೇಂಟ್ ಜಾನ್ಸ್ ಎಪಿಸ್ಕೋಪಲ್ ಚರ್ಚ್‌ಗೆ ತೆರಳಿ ಅಲ್ಲಿಂದ ಡೊನಾಲ್ಡ್ ಟ್ರಂಪ್ ಮತ್ತವರ ಪತ್ನಿ ಮೆಲಾನಿಯಾ ಟ್ರಂಪ್ ಅವರು ಶ್ವೇತಭವನದಲ್ಲಿ ಮಾಜಿ ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಜೊತೆಗೆ ಸಮಾಲೋಚನೆ ನಡೆಸಲಿದ್ದಾರೆ. ಟೀ ಕೂಟದ ನಂತರ ಕ್ಯಾಪಿಟಲ್‌ನ ವೆಸ್ಟ್ ಲಾನ್‌ನಲ್ಲಿ ನೇರ ಪ್ರದರ್ಶನ ನಡೆಯಲಿದೆ.
ಈ ಬೆಳಗಿನ ಕಾರ್ಯಕ್ರಮಗಳು ಒಂದೊಂದಾಗಿ ಪೂರ್ಣಗೊಳ್ಳುತ್ತಿದ್ದಂತೆ ಮಧ್ಯಾಹ್ನ ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಲಿದ್ದಾರೆ. ನಂತರ ತಮ್ಮನ್ನು ಗೆಲ್ಲಿಸಿದ ಅಮೆರಿಕದ ಸಾರ್ವಜನಿಕರನ್ನು ಉದ್ದೇಶಿಸಿ ಭಾಷನ ಮಾಡುತ್ತಾರೆ. ರಿಪಬ್ಲಿಕನ್ ಪಾರ್ಟಿ ಮೇಲೆ ಜನರ ಆರ್ಶೀವಾದ, ನಂಬಿಕೆ ವಿಷಯಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿ ಕೃತಜ್ಞತೆ ಅರ್ಪಿಸಲಿದ್ದಾರೆ.
ಪ್ರಮಾಣ ವಚನ ಸ್ವೀಕಾರ: ಯಾರಿಗೆ ಆಹ್ವಾನ
ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅನೇಕ ವಿದೇಶಿ ನಾಯಕರು ಆಗಮಿಸಲಿದ್ದಾರೆ. ಭದ್ರತಾ ಕಾರಣಗಳಿಂದ ಈ ಹಿಂದಿನ ಅಧ್ಯಕ್ಷರ ಪ್ರಮಾಣ ವಚನಕ್ಕೆ ಬಂದಿರಲಿಲ್ಲ. ವಿದೇಶಿ ಅಧ್ಯಕ್ಷರ ಬದಲಾಗಿ ರಾಜತಾಂತ್ರಿಕರನ್ನು ಮಾತ್ರವೇ ಕರೆಸಲಾಗಿತ್ತು.
ಅರ್ಜೆಂಟೇನಾ ಅಧ್ಯಕ್ಷ ಜೇವಿಯರ್ ಮಿಲೀ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಪ್ರಮಾಣ ವಚನದಲ್ಲಿ ಪಾಲ್ಗೊಳ್ಳಲಿದ್ದಾರೆ. ಟ್ರಂಪ್ ಸಲಹೆಗಾರ ಮತ್ತು ಟೆಸ್ಲಾ ಹಾಗೂ ಸ್ಪೇಸ್‌ಎಕ್ಸ್‌ನ ಸಿಇಒ ಎಲೋನ್ ಮಸ್ಕ್, ಅಮೆಜಾನ್ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಸಿಇಒ ಜೆಫ್ ಬೆಜೋಸ್, ಮಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ.












Click it and Unblock the Notifications