ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆ ಆಗುವುದು ಅವರ ಹೆಂಡತಿಗೇ ಇಷ್ಟ ಇಲ್ವಾ?
ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಡೊನಾಲ್ಡ್ ಟ್ರಂಪ್ ಸೋಲುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಯಾಕಂದ್ರೆ ಟ್ರಂಪ್ ವಿರೋಧಿ ಅಲೆ ಜೋರಾಗಿದ್ದು, ಈ ಬಾರಿ ಡೊನಾಲ್ಡ್ ಟ್ರಂಪ್ ಎದುರು ಕಮಲಾ ಹ್ಯಾರಿಸ್ ಗೆಲ್ಲುವುದು ಗ್ಯಾರಂಟಿ ಅಂತಿದ್ದಾರೆ ಅಲ್ಲಿನ ಜನರು. ಇದಕ್ಕೆ ಬಲ ನೀಡುವಂತೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಸಮೀಕ್ಷೆಗಳು ಕೂಡ ಟ್ರಂಪ್ ವಿರುದ್ಧ ಇವೆ. ಇಂತಹ ಕಷ್ಟದ ಸಮಯದಲ್ಲೇ ಡೊನಾಲ್ಡ್ ಟ್ರಂಪ್ ಬಗ್ಗೆ ಖುದ್ದಾಗಿ ಅವರ ಹೆಂಡತಿಯ ನಿಲುವು ಏನು ಅನ್ನೋದು ಸಂಚಲನ ಸೃಷ್ಟಿ ಮಾಡಿದೆ!
ಡೊನಾಲ್ಡ್ ಟ್ರಂಪ್ ಯಾರ ಜೊತೆಯಲ್ಲಿ ಕೂಡ ಉತ್ತಮ ಸಂಬಂಧ ಇಟ್ಟುಕೊಂಡಿಲ್ಲ. ಈ ಪೈಕಿ ಸ್ವತಃ ಡೊನಾಲ್ಡ್ ಟ್ರಂಪ್ ಕುಟುಂಬದ ಸದಸ್ಯರು ಕೂಡ ಆಕ್ರೋಶ ಹೊರ ಹಾಕುತ್ತಿದ್ದು ಅವರೆಲ್ಲಾ ಟ್ರಂಪ್ ಜೊತೆಗೆ ಚನ್ನಾಗಿಲ್ಲ ಎಂಬ ಆರೋಪ ಇದೆ. ಇಂತಹ ಪರಿಸ್ಥಿತಿ ಇದ್ದಾಗ ಸ್ವತಃ ಟ್ರಂಪ್ ಅವರ ಹೆಂಡತಿ ಕೂಡ ಇದೀಗ ಟ್ರಂಪ್ ಸೋಲಬೇಕು ಅಂತಾ ಕಾಯುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೂಡ ಕೇಳಿಬಂದಿದೆ. ಈಗಾಗಲೇ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಭಾರಿ ಹಿನ್ನಡೆ ಅನುಭವಿಸಿದ್ದು, ಮತ್ತೊಂದು ಕಡೆ ಈ ರೀತಿ ಅವರ ಮನೆಯವರೇ ಅವರ ಜೊತೆಯಲ್ಲಿ ಸರಿ ಇಲ್ಲ ಎಂಬ ಆರೋಪ ಮಾಡಲಾಗಿದೆ. ಹಾಗಾದ್ರೆ ಈ ಆರೋಪ ಮಾಡಿದ್ದು ಯಾರು?

ಕಮಲಾ ಹ್ಯಾರಿಸ್‌ಗೆ ಭಾರಿ ಬೆಂಬಲ?
ಹೌದು, ಡೊನಾಲ್ಡ್ ಟ್ರಂಪ್ ಕುಟುಂಬದ ಜೊತೆಗೆ ಹಲವು ವರ್ಷಗಳಿಂದ ಕೂಡ ಒಡನಾಟ ಇಟ್ಟುಕೊಂಡಿದ್ದ ಆಪ್ತ ಸಹಾಯಕ ಈ ರೀತಿ ಟ್ರಂಪ್ ಬಗ್ಗೆ ಸ್ಫೋಟಕ ಆರೋಪ ಮಾಡಿದ್ದಾರೆ. ಅಂದಹಾಗೆ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುವುದು ಈಗ ಅವರ ಹೆಂಡತಿಗೂ ಇಷ್ಟ ಇಲ್ಲ. ಹಾಗೇ ಟ್ರಂಪ್ ಅವರ ಸೋಲಿಗಾಗಿ ಅವರ ಪತ್ನಿ ಕಾಯುತ್ತಾ ಇರಬಹುದು ಎಂದು ಹೇಳಿದ್ದಾರೆ ಟ್ರಂಪ್ ಕುಟುಂಬದ ಜೊತೆಗೆ ಗುರುತಿಸಿಕೊಂಡಿದ್ದ ಮಾಜಿ ಸಹಾಯಕ. ಹಾಗೇ, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಪರವಾಗಿ ಧ್ವನಿ ಹೆಚ್ಚುತ್ತಿದ್ದು. ಸ್ವತಃ ಟ್ರಂಪ್ ಅವರ ಹೆಂಡತಿ ಕೂಡ ಕಮಲಾ ಹ್ಯಾರಿಸ್‌ರನ್ನು ಹೆಚ್ಚು ಇಷ್ಟಪಡುತ್ತಾರೆ ಎಂದಿದ್ದಾರೆ.












Click it and Unblock the Notifications