Donald Trump: ಟ್ರಂಪ್ ಪ್ರಮಾಣವಚನ: ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಪ್ರಯಾಣ ಸಲಹೆ ನೀಡಿದ ಯುಎಸ್‌ ವಿಶ್ವವಿದ್ಯಾಲಯಗಳು

ನ್ಯೂಯಾರ್ಕ್ ನವೆಂಬರ್ 29: ಅಮೆರಿಕದ ಹಲವು ವಿಶ್ವವಿದ್ಯಾನಿಲಯಗಳು ತಮ್ಮ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಪ್ರಯಾಣ ಸಲಹೆಗಳನ್ನು ನೀಡಿವೆ. ಮುಂದಿನ ವರ್ಷ ಜನವರಿಯಲ್ಲಿ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ವಿಧಿಸಬಹುದಾದ ಪ್ರಯಾಣದ ನಿರ್ಬಂಧಗಳನ್ನು ಪರಿಗಣಿಸಿ ಅಮೆರಿಕಾದಲ್ಲಿರುವ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ತಮ್ಮ ದೇಶಕ್ಕೆ ತೆರಳಲು ಯುಎಸ್‌ ವಿಶ್ವವಿದ್ಯಾಲಯಗಳು ಒತ್ತಾಯಿಸುತ್ತಿವೆ.

ಹೌದು... ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸಮಾರಂಭಕ್ಕೂ ಮುನ್ನ ಅಮೆರಿಕದ ಹಲವು ವಿಶ್ವವಿದ್ಯಾನಿಲಯಗಳು ತಮ್ಮ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಪ್ರಯಾಣದ ಸಲಹೆಗಳನ್ನು ನೀಡಿವೆ. ಟ್ರಂಪ್ ಅವರು ಜನವರಿ 20ರಂದು ಯುಎಸ್‌ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಯುನೈಟೆಡ್ ಸ್ಟೇಟ್ಸ್ನ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಆರ್ಥಿಕತೆ ಮತ್ತು ವಲಸೆಯ ವಿಷಯಗಳ ಕುರಿತು ಹಲವಾರು ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕುವುದಾಗಿ ಘೋಷಿಸಿದ್ದಾರೆ.

donald trump swearing-in us universities issue travel advisory for international students staff

ಪ್ರಮಾಣವಚನ ಸ್ವೀಕರಿಸಿದ ನಂತರ ಟ್ರಂಪ್ ಪ್ರಯಾಣದಲ್ಲಿ ಕೆಲ ನಿರ್ಬಂಧಗಳನ್ನು ಹೇರುವ ಸಾಧ್ಯತೆ ಇದೆ. ಈ ಕಳವಳದಿಂದಾಗಿ ಯುಸ್ಎಸ್ ವಿಶ್ವವಿದ್ಯಾಲಯಗಳು ಅನ್ಯ ದೇಶದ ವಿದ್ಯಾರ್ಥಿಗಳಿಗೆ ಹಾಗೂ ಪ್ರಾಧ್ಯಾಪಕರಿಗೆ ತಮ್ಮ ದೇಶಕ್ಕೆ ತೆರಳಲು ಒತ್ತಾಯಿಸುತ್ತಿವೆ ಎನ್ನುವ ಮಾಹಿತಿ ಹೊರಬಿದ್ದಿದೆ. ಈ ಕಾರಣಕ್ಕಾಗಿ ಹಲವಾರು ಯುಎಸ್ ವಿಶ್ವವಿದ್ಯಾಲಯಗಳು ತಮ್ಮ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕರಿಗೆ ಟ್ರಂಪ್ ಅವರ ಉದ್ಘಾಟನೆಯ ಸಮಯಕ್ಕೂ ಮುನ್ನ ದೇಶದಿಂದ ಹೊರಗೆ ಪ್ರಯಾಣಿಸುವಂತೆ ಸಲಹೆಗಳನ್ನು ನೀಡುತ್ತಿವೆ.

ಯುಎಸ್ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್, ಬ್ಯೂರೋ ಆಫ್ ಎಜುಕೇಷನಲ್ ಅಂಡ್ ಕಲ್ಚರಲ್ ಅಫೇರ್ಸ್ ಮತ್ತು ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಎಜುಕೇಶನ್‌ನ ಮಾಹಿತಿಯ ಪ್ರಕಾರ, ಯುನೈಟೆಡ್ ಸ್ಟೇಟ್ಸ್‌ನಲ್ಲಿನ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಇರುವ ವಿದ್ಯಾರ್ಥಿಗಳಲ್ಲಿ ಅರ್ಧಕ್ಕಿಂತ ಹೆಚ್ಚು (54 ಪ್ರತಿಶತ) ವಿದ್ಯಾರ್ಥಿಗಳು ಭಾರತ ಮತ್ತು ಚೀನಾದ ವಿದ್ಯಾರ್ಥಿಗಳು ಇದ್ದಾರೆ.

donald trump swearing-in us universities issue travel advisory for international students staff

ಒಂದು ವೇಳೆ ಟ್ರಂಪ್ ಪ್ರಯಾಣದ ಬಗ್ಗೆ ಕೆಲ ನಿರ್ಧಾರಗಳನ್ನು ತೆಗೆದುಕೊಂಡಿದ್ದೇ ಆದರೆ ಬೇರೆ ದೇಶದಿಂದ ಬಂದು ಅಮೆರಿಕಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಹೇಳಲಾಗುತ್ತಿದೆ. ವಿಶೇಷವಾಗಿ ಭಾರತದಿಂದ ಅಮೆರಿಕಾಕ್ಕೆ ಹೋಗಿ ವಿದ್ಯಾಭ್ಯಾಸ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಲಿದೆ. ಯಾಕೆಂದರೆ ಚೀನಾಕ್ಕೆ ಹೋಲಿಸಿದರೆ ಭಾರತದಿಂದ ಅಮೆರಿಕಾಕ್ಕೆ ಹೋಗಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ.

ಓಪನ್ ಡೋರ್ಸ್ ಅಂಕಿಅಂಶಗಳ ಪ್ರಕಾರ, 2009ರಿಂದ ಮೊದಲ ಬಾರಿಗೆ 2023/2024 ರಲ್ಲಿ ಭಾರತದಿಂದ 331,602 ವಿದ್ಯಾರ್ಥಿಗಳು ಯುನೈಟೆಡ್ ಸ್ಟೇಟ್ಸ್‌ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದು ಹಿಂದಿನ ವರ್ಷ ಮತ್ತು ಚೀನಾಕ್ಕಿಂತ 23 ಪ್ರತಿಶತ ಹೆಚ್ಚಾಗಿದೆ. 277,398 ವಿದ್ಯಾರ್ಥಿಗಳು ಚೀನಾದಿಂದ ಹೋಗಿ ಅಮೆರಿಕಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಯಲ್ಲಿನ ಅಂತರಾಷ್ಟ್ರೀಯ ವಿದ್ಯಾರ್ಥಿ ಕಚೇರಿಯ ಸಹಾಯಕ ಡೀನ್ ಮತ್ತು ನಿರ್ದೇಶಕ ಡೇವಿಡ್ ಎಲ್ವೆಲ್ ಅಧ್ಯಕ್ಷೀಯ ಚುನಾವಣೆಯ ನಂತರ ಅಮೆರಿಕಾದಲ್ಲಿ ಫೆಡರಲ್ ಮಟ್ಟದಲ್ಲಿ ಆಡಳಿತದಲ್ಲಿ ಬದಲಾವಣೆಯಾಗಲಿವೆ ಎಂದು ಹೇಳಲಾಗುತ್ತಿದೆ. ಉನ್ನತ ಶಿಕ್ಷಣದ ಮೇಲೆ ಪರಿಣಾಮ ಬೀರುವ ಶಾಸನ ಜಾರಿಗೆ ತರುವ ಸಾಧ್ಯತೆ ಇದೆ. ಇದು ವಲಸೆ ಮತ್ತು ವೀಸಾ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಹೀಗಾಗಿ ಪ್ರಯಾಣಕ್ಕೆ ಸಂಬಂಧಿಸಿದಂತೆ ಕೆಲ ನಿರ್ಬಂಧಗಳು ಹೇರುವ ಲಕ್ಷಣವಿದ್ದು ವಲಸೆ ವಿದ್ಯಾರ್ಥಿಗಳು ಹಾಗೂ ಪ್ರಧ್ಯಾಪಕರ ಮೇಲೆ ಇದರ ಪರಿಣಾಮ ಹೆಚ್ಚಾಗಲಿದೆ. ಹೀಗಾಗಿ ಯುಎಸ್‌ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಮೇಲೆನ ಕಾಳಜಿಯಿಂದ ತಮ್ಮ ದೇಶಕ್ಕೆ ಪ್ರಯಾಣ ಬೆಳೆಸಲು ಸಲಹೆ ನೀಡುತ್ತಿವೆ ಎನ್ನುವ ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+