ಅಮೆರಿಕ- ಮೆಕ್ಸಿಕೋ ಗಡಿಯಲ್ಲಿ ಬೃಹತ್ ಗೋಡೆ ನಿರ್ಮಾಣ!
ಯುಎಸ್ -ಮೆಕ್ಸಿಕೋ ಗಡಿಯಿಂದ ಅಕ್ರಮ ವಲಸಿಗರು, ಮಾದಕ ದ್ರವ್ಯ ಮಾಫಿಯಾದವರು ನುಗ್ಗುವುದನ್ನು ತಡೆಗಟ್ಟಲು ಯಲ್ಲಿ ಸುಮಾರು 3200 ಕಿ.ಮೀ. ಉದ್ದದ ಗೋಡೆ ನಿರ್ಮಾಣಕ್ಕೆ ಅಮೆರಿಕ ಮುಂದಾಗಿದೆ
ನ್ಯೂಯಾರ್ಕ್, ಜನವರಿ 26: ಯುಎಸ್ -ಮೆಕ್ಸಿಕೋ ಗಡಿಯಿಂದ ಅಕ್ರಮ ವಲಸಿಗರು, ಮಾದಕ ದ್ರವ್ಯ ಮಾಫಿಯಾದವರು ನುಗ್ಗುವುದನ್ನು ತಡೆಗಟ್ಟಲು ಯಲ್ಲಿ ಸುಮಾರು 3200 ಕಿ.ಮೀ. ಉದ್ದದ ಗೋಡೆ ನಿರ್ಮಾಣಕ್ಕೆ ಅಮೆರಿಕ ಮುಂದಾಗಿದೆ. ಈ ಕುರಿತಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಆದೇಶ ಹೊರಡಿಸಿದ್ದಾರೆ.
ಆಂತರಿಕ ಭದ್ರತಾ ಇಲಾಖೆಯ ಕಚೇರಿಯಲ್ಲಿ ಟ್ರಂಪ್ ಅವರು ಗೋಡೆ ನಿರ್ಮಾಣ ಸೇರಿದಂತೆ ಮಹತ್ವದ ಆದೇಶಗಳಿಗೆ ಸಹಿ ಹಾಕಿದರು. ಇದರ ಜತೆಗೆ ದಕ್ಷಿಣ ಗಡಿಯಲ್ಲಿ ಅಕ್ರಮವಾಗಿ ಒಳನುಸುಳುವವರ ವಿರುದ್ಧ ಹೆಚ್ಚಿನ ನಿಗಾ ವಹಿಸುವಂತೆ ಸೂಚನೆ ನೀಡಿದ್ದಾರೆ.

ಮೆಕ್ಸಿಕೋ ಗಡಿಯುದ್ದಕ್ಕೂ ಗೋಡೆ ನಿರ್ಮಿಸುವುದಾಗಿ ಡೊನಾಲ್ಡ್ ಟ್ರಂಪ್ ಚುನಾವಣಾ ಭಾಷಗಳಲ್ಲಿಯೂ ಸಹ ತಿಳಿಸಿದ್ದರು. ಅದರಂತೆ ಅವರು ಗೋಡೆ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.
ಅಮೆರಿಕ ಮತ್ತು ಮೆಕ್ಸಿಕೋ 3200 ಕಿ.ಮೀ. ಉದ್ದದ ಗಡಿಯನ್ನು ಹಂಚಿಕೊಂಡಿವೆ. ಈಗಾಗಲೇ ಅಮೆರಿಕ ಬಹುತೇಕ ಕಡೆಗಳಲ್ಲಿ ಬೇಲಿ ನಿರ್ಮಿಸಿದೆ. ಆದರೂ ಸಹ ಮೆಕ್ಸಿಕೋದಿಂದ ಅಮೆರಿಕಕ್ಕೆ ಅಕ್ರಮವಾಗಿ ಒಳನುಸುಳುವವರ ಪ್ರಮಾಣ ಕಡಿಮೆಯಾಗಿಲ್ಲ.
ಹಾಗಾಗಿ ಟ್ರಂಪ್ ಗೋಡೆ ನಿರ್ಮಿಸುವ ಮೂಲಕ ಅಕ್ರಮ ಒಳನುಸುಳುಕೋರರನ್ನು ತಡೆಯಲು ಮುಂದಾಗಿದ್ದಾರೆ. 2014ರ ವರದಿಯ ಪ್ರಕಾರ 58 ಲಕ್ಷ ಮೆಕ್ಸಿಕೋ ದೇಶವಾಸಿಗಳು ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ.
ವೀಸಾ ನಿಷೇಧ: ಸಿರಿಯಾ, ಇರಾಕ್, ಇರಾನ್, ಲಿಬಿಯಾ, ಸೊಮಾಲಿಯಾ, ಸೂಡನ್ ಹಾಗೂ ಯಮೆನ್ ದೇಶಗಳ ನಾಗರಿಕರಿಗೆ ವೀಸಾ ನಿರ್ಬಂಧಿಸಲಾಗಿದೆ.












Click it and Unblock the Notifications