ನಾವಿಲ್ಲದೆ ನೀವು ಎರಡು ವಾರವೂ ಇರೊಲ್ಲ: ಸೌದಿ ರಾಜನಿಗೆ ಟ್ರಂಪ್ ವಾರ್ನಿಂಗ್!

ಮಿಸ್ಸಿಸ್ಸಿಪ್ಪಿ, ಅಕ್ಟೋಬರ್ 3: ತಮ್ಮ ಸೇನೆಯ ಬೆಂಬಲ ಇಲ್ಲದೆ ಎರಡು ವಾರ ಕೂಡ ನೀವು ಅಧಿಕಾರದಲ್ಲಿ ಇರುವುದಿಲ್ಲ ಎಂದು ಸೌದಿ ಅರೇಬಿಯಾದ ರಾಜ ಸಲ್ಮಾನ್‌ಗೆ ಎಚ್ಚರಿಕೆ ನೀಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ.

ತಮ್ಮ ಮಿತ್ರ ದೇಶಗಳಲ್ಲಿ ಒಂದಾದ ಸೌದಿ ಅರೇಬಿಯಾಕ್ಕೆ ಈ ರೀತಿ ರಾಜತಾಂತ್ರಿಕ ನೀತಿಗೆ ವಿರುದ್ಧವಾದ ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ.

'ನಾವು ಸೌದಿ ಅರೇಬಿಯಾವನ್ನು ರಕ್ಷಿಸುತ್ತಿದ್ದೇವೆ. ಅವು ಶ್ರೀಮಂತರು ಎಂದು ನೀವು ಹೇಳುತ್ತೀರಿ. ರಾಜ ಸಲ್ಮಾನ್ ಕಂಡರೆ ನನಗೂ ಪ್ರೀತಿ. ಆದರೆ, ನಾನು ಹೇಳಿದ್ದೆ, 'ರಾಜ-ನಾವು ನಿಮ್ಮನ್ನು ರಕ್ಷಿಸುತ್ತಿದ್ದೇವೆ. ನಾವಿಲ್ಲದೆ ನೀವು ಎರಡು ವಾರವೂ ಇರಲಾರಿರಿ. ನಿಮ್ಮ ಸೇನೆಗಾಗಿ ನೀವು ಪಾವತಿ ಮಾಡಬೇಕಾಗುತ್ತದೆ' ಎಂದು ಹೇಳಿದ್ದಾಗಿ ಟ್ರಂಪ್ ತಿಳಿಸಿದ್ದಾರೆ.

Donald Trump saudi arabia king you might not be there for 2 weeks without us

ಮಿಸ್ಸಿಸ್ಸಿಪ್ಪಿಯ ಸೌತ್ ಹೆವನ್‌ನಲ್ಲಿ ಸಮಾರಂಭವೊಂದನ್ನು ಉದ್ದೇಶಿಸಿ ಮಾತನಾಡುವಾಗ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ಆದರೆ, ಸೌದಿ ಅರಸನ ಬಳಿ ಈ ಮಾತನ್ನು ಯಾವಾಗ ಹೇಳಿದ್ದು ಎಂಬುದನ್ನು ಟ್ರಂಪ್ ಪ್ರಸ್ತಾಪಿಸಿಲ್ಲ.

ಟ್ರಂಪ್ ಅವರ ಕಠಿಣ ಮಾತುಗಳ ಹೊರತಾಗಿಯೂ ಅಮೆರಿಕ ಆಡಳಿತ ಸೌದಿ ಜತೆಗೆ ಸೌಹಾರ್ದ ಸಂಬಂಧ ಉಳಿಸಿಕೊಂಡಿದೆ. ಉಭಯ ರಾಷ್ಟ್ರಗಳಿಗೂ ಇರಾನ್ ಪ್ರಮುಖ ವಿರೋಧ ದೇಶವಾಗಿರುವುದರಿಂದ ಇವುಗಳ ಮೈತ್ರಿಗೆ ಧಕ್ಕೆಯಾಗಿಲ್ಲ.

ಕಳೆದ ವರ್ಷ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಟ್ರಂಪ್ ಮೊದಲ ಅಂತಾರಾಷ್ಟ್ರೀಯ ಪ್ರವಾಸ ಕೈಗೊಂಡಿದ್ದು ಸೌದಿ ಅರೇಬಿಯಾಕ್ಕೆ.

ಕಳೆದ ತಿಂಗಳು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡುವಾಗ ಟ್ರಂಪ್, ಒಪೆಕ್ ಸದಸ್ಯ ರಾಷ್ಟ್ರಗಳ ವಿರುದ್ಧ ತೀಕ್ಷ್ಣವಾಗಿ ಮಾತನಾಡಿದ್ದರು.

'ಯಾವ ಕಾರಣ ಇಲ್ಲದಿದ್ದರೂ ಈ ಅನೇಕ ದೇಶಗಳನ್ನು ನಾವು ಸಮರ್ಥಿಸಿಕೊಂಡಿದ್ದೇವೆ. ಅವರು ನಮಗೆ ಅಧಿಕ ದರದಲ್ಲಿ ತೈಲ ನೀಡುವ ಮೂಲಕ ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಅವರು ಬೆಲೆ ಏರಿಕೆ ಮಾಡುವುದನ್ನು ನಾವು ನಿಲ್ಲಿಸಲು ಬಯಸಿದ್ದೇವೆ' ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+