ಅಮೆರಿಕ ಜೊತೆ ಒಪ್ಪಂದ ಮಾಡಿಕೊಳ್ಳದಿದ್ದರೆ ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆ... Donald Trump
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಇರಾನ್‌ಗೆ ಎಚ್ಚರಿಕೆ ಸಂದೇಶ ರವಾನಿಸಿ, ಪರಮಾಣು ಒಪ್ಪಂದ ಮಾಡಿಕೊಳ್ಳದಿದ್ದರೆ ಮುಂದಿನ ಪರಿಸ್ಥಿತಿ ಎದುರಿಸಲು ಸಜ್ಜಾಗಿ ಎಂದಿದ್ದಾರೆ. ಆ ಮೂಲಕ ಅಮೆರಿಕ ಹಾಗೂ ಇರಾನ್ ನಡುವೆ ಪರಿಸ್ಥಿತಿ ಇನ್ನಷ್ಟು ಸೂಕ್ಷ್ಮ ಹಂತಕ್ಕೆ ತಲುಪಿದ್ದು, ಈ ಎರಡೂ ದೇಶಗಳ ನಡುವೆ ಯಾವುದೇ ಕ್ಷಣದಲ್ಲಿ ಯುದ್ಧ ಶುರುವಾಗುವ ಭೀತಿ ಮತ್ತೆ ಆವರಿಸಿಬಿಟ್ಟಿದೆ.
ಈಗಾಗಲೇ ಜಗತ್ತಿನ ಹಲವು ದೇಶಗಳು ತಮ್ಮ ತಮ್ಮ ಪ್ರಜೆಗಳಿಗೆ ಕೂಡಲೇ ಇರಾನ್ ಬಿಟ್ಟು ಹೊರಗೆ ಬನ್ನಿ ಎಂಬ ಸಂದೇಶ ರವಾನಿಸಿದ್ದು, ಯುದ್ಧ ಭೀಕರತೆ ಬಗ್ಗೆ ಈಗಾಗಲೇ ಮುನ್ಸೂಚನೆ ಸಿಕ್ಕಿದೆ. ಫೆಬ್ರವರಿ 24 ಮಂಗಳವಾರ ಎಂದರೆ ಇಂದು ಅಮೆರಿಕ ಹಾಗೂ ಇರಾನ್ ನಡುವೆ 3ನೇ ಸುತ್ತಿನ ಮಾತುಕತೆ ಆರಂಭ ಆಗುತ್ತಿದೆ. ಈ ಬೆಳವಣಿಗೆ ನಡುವೆಯೇ ಮತ್ತೊಂದು ಹೇಳಿಕೆ ನೀಡಿರುವ ಅಮೆರಿಕ ಅಧ್ಯಕ್ಷರು, ಇರಾನ್ ವಿರುದ್ಧ ಮತ್ತೆ ಗುಡುಗಿದ್ದಾರೆ.

ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ
ಮಧ್ಯಪ್ರಾಚ್ಯದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದ್ದು, ಯಾವಾಗ ಏನಾಗುತ್ತೋ ಎಂಬಂತಾಗಿದೆ. ಅಮೆರಿಕ ಒಂದೆಡೆ ಪರಮಾಣು ವಿಚಾರದಲ್ಲಿ ಇರಾನ್ ಜೊತೆ ಶಾಂತಿ ಮಾತುಕತೆಗೆ ಸಿದ್ಧವಾಗಿದ್ದರೆ, ಇದೇ ವೇಳೆ ಮತ್ತೊಂದು ಕಡೆ ಇರಾನ್ ಬಳಿ ಅಮೆರಿಕ ಸೇನೆಯ ಬೃಹತ್ ಯುದ್ಧ ನೌಕೆ ಆಗಿರುವ ಯುಎಸ್‌ಎಸ್ ಅಬ್ರಹಾಂ ಲಿಂಕನ್ & ಫೋರ್ಡ್ ಸೇರಿದಂತೆ ದೊಡ್ಡ ದೊಡ್ಡ ಯುದ್ಧ ನೌಕೆಗಳು ಲಂಗರು ಹಾಕಿವೆ. ಇದೇ ಸಮಯದಲ್ಲಿ ಯುದ್ಧಕ್ಕೆ ನೆರವಾಗುವ ಶಕ್ತಿಶಾಲಿ ಎಫ್-22 ಎಸ್, ಎಫ್-35 ಎಸ್ & ಎಫ್-16 ಎಸ್ ಸೇರಿದಂತೆ ಹಲವು ಯುದ್ಧ ವಿಮಾನಗಳನ್ನ ಕರೆಸಿಕೊಂಡಿದೆ ಅಮೆರಿಕ ಸೇನೆ. ಇದೇ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಅವರು ಕೂಡ ಇರಾನ್‌ಗೆ ಯುದ್ಧದ ಬಗ್ಗೆ ವಾರ್ನಿಂಗ್ ಕೊಟ್ಟಿದ್ದಾರೆ.












Click it and Unblock the Notifications