Donald Trump: ಕೆನಡಾ ವಿರುದ್ಧ ಡೊನಾಲ್ಡ್ ಟ್ರಂಪ್ ವಾಗ್ದಾಳಿ, ಶೇಕಡಾ 100 ರಷ್ಟು ತೆರಿಗೆ ವಿಧಿಸುವ ಸಾಧ್ಯತೆ
ಕೆನಡಾ ಮತ್ತು ಡೊನಾಲ್ಡ್ ಟ್ರಂಪ್ ಅವರ ಮಧ್ಯೆ ದೊಡ್ಡ ಮಟ್ಟದ ವಾಗ್ಯುದ್ಧ ನಡೆಯುತ್ತಾ ಇದ್ದು, ಎರಡೂ ದೇಶಗಳು ಪರಸ್ಪರ ಕೌಂಟರ್ ಕೊಡುತ್ತಿವೆ. ಒಂದೆಡೆ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರ ಬೆಂಬಲಿಸದ ಕಾರಣ ಕೆನಡಾ ವಿರುದ್ಧ ಕ್ರಮಕ್ಕೆ ಟ್ರಂಪ್ ಅವರು ಮುಂದಾಗಿದ್ದಾರೆ. ಈ ಸಮಯದಲ್ಲಿ ಚೀನಾ ಜೊತೆಗೆ ಕೆನಡಾ ಹೊಸ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ ಎಂಬುದು ಕೂಡ ಡೊನಾಲ್ಡ್ ಟ್ರಂಪ್ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಮುಖವಾಗಿ ಟ್ರಂಪ್ ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಭಾರಿ ದೊಡ್ಡ ನಿರ್ಧಾರ ಕೈಗೊಂಡಿದ್ದರು. ಆದರೆ ಅದನ್ನು ಕೆನಡಾ ಬೆಂಬಲಿಸುತ್ತಿಲ್ಲ ಎಂಬುದೇ ಘರ್ಷಣೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಅಮೆರಿಕದ ನೆರೆ ದೇಶ ಕೆನಡಾ ಶತಮಾನಗಳಿಂದ ಉತ್ತಮ ಸಂಬಂಧವನ್ನು ಅಮೆರಿಕ ಜೊತೆಯಲ್ಲಿ ಕಾಪಾಡಿಕೊಂಡು ಬಂದಿದೆ. ವ್ಯಾಪಾರ & ವಹಿವಾಟು ಸೇರಿದಂತೆ ಹಲವು ವಿಚಾರಗಳಲ್ಲಿ ಕೆನಡಾ ಮತ್ತು ಅಮೆರಿಕ ಒಟ್ಟಿಗೆ ಸಾಗುತ್ತಿವೆ. ಹೀಗಿದ್ದರೂ ಡೊನಾಲ್ಡ್ ಟ್ರಂಪ್ ಅವರು ಕೆನಡಾ ವಿರುದ್ಧ ಆಕ್ರೋಶ, ಬೇಸರ ಹೊರ ಹಾಕುತ್ತಿದ್ದಾರೆ. ದಾವೋಸ್ ಆರ್ಥಿಕ ಸಮ್ಮೇಳನದಲ್ಲಿ ಕೂಡ ಎರಡೂ ದೇಶಗಳ ಮಧ್ಯೆ ಕಿರಿಕ್ ಆಗಿತ್ತು. ಈ ಘರ್ಷಣೆ ಮುಗಿಯುವ ಮೊದಲೇ ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಕೂಡ ತಿಕ್ಕಾಟದ ಗಾಳಿ ಬೀಸಿತ್ತು. ಈಗ ನೋಡಿದರೆ ಕೆನಡಾ ವಿರುದ್ಧ ಬರೋಬ್ಬರಿ ಶೇಕಡಾ 100 ರಷ್ಟು ತೆರಿಗೆ ವಿಧಿಸುವ ಬಗ್ಗೆ ಟ್ರಂಪ್ ಅವರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಕೆನಡಾ & ಅಮೆರಿಕ ಸಂಬಂಧದಲ್ಲಿ ಬಿರುಕು?
ಜಗತ್ತಿನ ಶ್ರೀಮಂತ ದೇಶಗಳ ಪೈಕಿ ಕೆನಡಾ ಕೂಡ ಅತ್ಯುನ್ನತ ಸ್ಥಾನ ಪಡೆದುಕೊಂಡಿದೆ. ಯಾಕೆ ಎಂದರೆ ಕೆನಡಾ ದೇಶದಲ್ಲಿ ಉತ್ತಮ ನೈಸರ್ಗಿಕ ಸಂಪನ್ಮೂಲ ಇದ್ದು, ಪಾಶ್ಚಿಮಾತ್ಯ ದೇಶವಾದ ಕೆನಡಾ ಅತ್ಯುತ್ತಮವಾಗಿ ಬದುಕುತ್ತಿದೆ. ಅದರಲ್ಲೂ ಅಮೆರಿಕದ ಜೊತೆಗೆ ಪ್ರತಿವರ್ಷ ಲಕ್ಷಾಂತರ ಕೋಟಿ ರೂಪಾಯಿ ವ್ಯಾಪಾರ & ವಹಿವಾಟು ಕೂಡ ನಡೆಸುತ್ತಿದೆ ಕೆನಡಾ. ಹೀಗಿದ್ದಾಗ ಡೊನಾಲ್ಡ್ ಟ್ರಂಪ್ ಅವರು ಮಹತ್ವದ ಹೆಜ್ಜೆ ಇಡುವ ಮುನ್ಸೂಚನೆ ಕೊಡುತ್ತಿದ್ದು, ಕೆನಡಾ ವಿರುದ್ಧ ಭಾರಿ ಭರ್ಜರಿ ಶೇಕಡಾ 100ರಷ್ಟು ತೆರಿಗೆ ಹೇರಿಕೆಗೆ ಮುಂದಾಗಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ.
ಅಲ್ಲದೆ ಭವಿಷ್ಯದಲ್ಲಿ ನ್ಯಾಟೋ ಒಕ್ಕೂಟದ ಒಗ್ಗಟ್ಟಿನ ವಿಚಾರದಲ್ಲೂ ಡೋಲಾಯಮಾನ ಸ್ಥಿತಿಗೆ ಈ ಬೆಳವಣಿಗೆಯು ಇದೀಗ ಕಾರಣವಾಗಲಿದೆ. ಅಮೆರಿಕದ ಜೊತೆ ಕೆನಡಾ ಕೂಡ ನ್ಯಾಟೋ ಒಕ್ಕೂಟದ ರಾಷ್ಟ್ರವಾಗಿದೆ ಎಂಬುದು ಇಲ್ಲಿ ಗನನಿಸಬೇಕಾದ ವಿಚಾರ. ಹೀಗಿದ್ದಾಗ ಭಾರಿ ದೊಡ್ಡ ಪ್ರಮಾಣದ ತೆರಿಗೆ ಹೇರಿಕೆ ಮಾಡಿದರೆ ಅದು ಭವಿಷ್ಯದಲ್ಲಿ ನ್ಯಾಟೋ ಒಗ್ಗಟ್ಟಿನ ಮೇಲೆ ಕೂಡ ಪರಿಣಾಮ ಬೀರುವ ಆತಂಕ ಹುಟ್ಟಿಸಿದೆ ಪಾಶ್ಚಿಮಾತ್ಯ ದೇಶಗಳಿಗೆ.












Click it and Unblock the Notifications