ಡೊನಾಲ್ಡ್ ಟ್ರಂಪ್‌ಗೆ ಹರಕುಬಾಯಿ? ಸೋಷಿಯಲ್ ಮೀಡಿಯಾದಲ್ಲಿ ಜನ ಏನಂದ್ರು?

ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ವಿವಾದಕ್ಕೆ ಗುರಿಯಾಗಿದ್ದು, ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಸಂಚಲನ ಸೃಷ್ಟಿ ಮಾಡಿದ್ದಾರೆ. ಟ್ರಂಪ್ ಇದೀಗ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಹೀಗಿದ್ದಾಗ ತಮ್ಮ ಎದುರಾಳಿ ಕಮಲಾ ಹ್ಯಾರಿಸ್ ವಿರುದ್ಧ ವಾಗ್ದಾಳಿ ಕೂಡ ಮುಂದುವರಿಸಿದ್ದಾರೆ ಟ್ರಂಪ್. ಆದರೆ ಹೀಗೆ ಡೊನಾಲ್ಡ್ ಟ್ರಂಪ್ ಬಾಯಿಗೆ ಬಂದಂತೆ ಒಬ್ಬ ಹೆಣ್ಣುಮಗಳ ಬಗ್ಗೆ ಮಾತನಾಡಿದ್ದು ಜನರನ್ನ ರೊಚ್ಚಿಗೆಬ್ಬಿಸಿದ್ದು, 'ಹರಕುಬಾಯಿ ಟ್ರಂಪ್' ಅಂತಿದ್ದಾರೆ ಜನ!

ಅಮೆರಿಕ ಜಗತ್ತಿನ ದೊಡ್ಡಣ್ಣ ಎಂಬ ಬಿರುದು ಪಡೆದಿದ್ದರೂ, ಇದೀಗ ಸಂಷಕ್ಟಕ್ಕೆ ಸಿಲುಕಿದೆ. 3 ತಿಂಗಳು ಬಾಕಿ ಅಷ್ಟೇ, ಆ ನಂತರ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಕ್ತಾಯ ಆಗಲಿದೆ. ನವೆಂಬರ್ 5ನೇ ತಾರೀಕು ಮತದಾನ ನಡೆಯಲಿದೆ. ಹೀಗಾಗಿ ಡೊನಾಲ್ಡ್ ಟ್ರಂಪ್ & ಕಮಲಾ ಹ್ಯಾರಿಸ್ ನೇರ ಹೋರಾಟ ಆರಂಭಿಸಿದ್ದಾರೆ. ಇದೇ ಸಮಯದಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಟ್ರಂಪ್ ವಿರುದ್ಧ ಸ್ವತಃ ಜನರೇ ಆಕ್ರೋಶ ಹೊರ ಹಾಕುತ್ತಿದ್ದು, ಈಗ ಮತ್ತೆ ಹೆಣ್ಣು ಮಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ ಟ್ರಂಪ್ ಸಂಕಷ್ಟಕ್ಕೆ ಸಿಲುಕಿದ್ದಾರೆಂಬ ಆರೋಪ ಕೇಳಿಬಂದಿದೆ. ಹಾಗಾದರೆ ಟ್ರಂಪ್ ನೀಡಿದ ಹೇಳಿಕೆ ಎಂತಹದ್ದು? ಮುಂದೆ ಓದಿ.

Donald Trump Said That He Will Not Stop To Speak Against Kamala Harris

ಕಮಲಾ ಬಗ್ಗೆ ಟ್ರಂಪ್ ವಿವಾದ?

ಡೊನಾಲ್ಡ್ ಟ್ರಂಪ್ ಇದೀಗ ಚುನಾವಣೆ ಪ್ರಚಾರದ ಸಮಯದಲ್ಲಿ ಕಮಲಾ ಹ್ಯಾರಿಸ್ ವಿರುದ್ಧ ಮಾತನಾಡುವ ಬರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. 'ಡೆಮಾಕ್ರಟಿಕ್‌ ಅಭ್ಯರ್ಥಿಯಾದ ಕಮಲಾ ಹ್ಯಾರಿಸ್‌ ವಿರುದ್ಧ ವೈಯಕ್ತಿಕ ಟೀಕೆ ಮಾಡುವುದನ್ನ ನಾನು ನಿಲ್ಲಿಸಲ್ಲ. ಆಕೆಯನ್ನು ಟೀಕಿಸುವ ಹಕ್ಕು ನನಗೆ ಇದೆ' ಎಂದಿದ್ದಾರೆ ಡೊನಾಲ್ಡ್ ಟ್ರಂಪ್. ಆದರೆ ಟ್ರಂಪ್ ನೀಡಿರುವ ಈ ಹೇಳಿಕೆ ತಲ್ಲಣ ಸೃಷ್ಟಿ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವಿರೋಧ ಕೂಡ ವ್ಯಕ್ತವಾಗಿದೆ. ಯಾಕಂದ್ರೆ ಒಬ್ಬ ಮಹಿಳೆಯ ಬಗ್ಗೆ, ವೈಯಕ್ತಿಕವಾಗಿ ಮಾತನಾಡುವ ಟ್ರಂಪ್ ಅವರ ವರ್ತನೆ ಸರಿ ಇಲ್ಲ ಅಂತಾ ಬಹುತೇಕ ಜನ ಅಭಿಪ್ರಾಯವನ್ನು ಕೂಡ ಹೊರ ಹಾಕುತ್ತಿದ್ದಾರೆ.

ಕಮಲಾ ಗೆದ್ದರೆ ಕೆಟ್ಟ ಅಧ್ಯಕ್ಷೆ?

ಡೊನಾಲ್ಡ್ ಟ್ರಂಪ್ ಪದೇ ಪದೇ ವಿವಾದಾತ್ಮಕ ಹೇಳಿಕೆ ನೀಡುತ್ತಾರೆ. ಇದೇ ಕಾರಣಕ್ಕೆ ಅಮೆರಿಕ ಉಪಾಧ್ಯಕ್ಷೆ ಕೂಡ ಆಗಿರುವ ಕಮಲಾ ಹ್ಯಾರಿಸ್ ಅವರು, ಟ್ರಂಪ್ ವಿರುದ್ಧ ವೈಯಕ್ತಿಕವಾಗಿ ಕೂಡ ವಾಗ್ದಾಳಿ ನಡೆಸಿದ್ದಾರೆ ಎಂಬ ಆರೋಪ ಇದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಟ್ರಂಪ್, ಕಮಲಾ ಹ್ಯಾರಿಸ್ ಬುದ್ಧಿಶಕ್ತಿ ಬಗ್ಗೆ ನನಗೆ ಗೌರವವಿಲ್ಲ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಗೆದ್ದು ಆಯ್ಕೆ ಆಗಿದ್ದೇ ನಿಜವಾದರೆ ಅವರು ಕೆಟ್ಟ ಅಧ್ಯಕ್ಷೆ ಆಗುತ್ತಾರೆ ಎಂದಿದ್ದಾರೆ ಡೊನಾಲ್ಡ್ ಟ್ರಂಪ್. ಅಲ್ಲದೆ ತಮ್ಮ ಬಗ್ಗೆ ಕಮಲಾ ಹ್ಯಾರಿಸ್ ವಯಕ್ತಿಕವಾಗಿ ಕೂಡ ದಾಳಿ ಮಾಡುತ್ತಿದ್ದಾರೆ ಎಂಬ ಆರೋಪ ಮಾಡಿದ್ದಾರೆ ಡೊನಾಲ್ಡ್ ಟ್ರಂಪ್. ಇದನ್ನೆಲ್ಲಾ ನೋಡಿದ ಜನ, ಏನಪ್ಪಾ ಟ್ರಂಪ್ ಹಿಂಗೆ ತಿಕ್ಕಲಂತೆ ಮಾತನಾಡ್ತಾರೆ ಅಂತಾ ಟ್ರೋಲ್ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+